"ಮದುವೆ ಅಂದ್ರೆ ಎರಡು ಹೃದಯಗಳು ಒಂದಾಗಬೇಕು": ನರೇಶ್ ಹೇಳಿಕೆಗೆ ಪವಿತ್ರಾ ಲೋಕೇಶ್ ಶಾಕ್
ನರೇಶ್- ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ಸದ್ಯ ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ಪ್ರಚಾರ ಆರಂಭಿಸಿದೆ ಚಿತ್ರತಂಡ. ಚಿತ್ರದಲ್ಲಿ ತಲ್ಲದೇ ನಿಜ ಜೀವನದ ಸಂಗತಿಗಳನ್ನು ನರೇಶ್ ತೆರೆಗೆ ತರುತ್ತಿದ್ದಾರೆ. ಇನ್ನು ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಉತ್ತರಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ತೆಲುಗು ನಟ ನರೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎನ್ನಲಾಗ್ತಿದೆ. ನಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ಪವಿತ್ರಾ ಲೋಕೇಶ್ ಕಾರಣ ಎಂದು ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದಾರೆ. ನರೇಶ್ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಗನಿಗಾಗಿ ನಾನು ಡಿವೋರ್ಸ್ ಕೊಡಲ್ಲ ಎಂದು ರಮ್ಯಾ ಪಟ್ಟು ಹಿಡಿದಿದ್ದಾರೆ. ಮೊದಲು ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದ ನರೇಶ್- ಪವಿತ್ರಾ ಒಂದೇ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದು ಭಾರೀ ಸುದ್ದಿ ಆಗಿತ್ತು.

ಇದೀಗ ತಮ್ಮದೇ ನಿಜ ಜೀವದ ಕಥೆಯನ್ನು ಲೇಟ್ ಏಜ್ ಲವ್ ಸ್ಟೋರಿಯಲ್ಲಿ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ಜೋಡಿ ಹೇಳ್ತಿದೆ. ಇನ್ನು ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನೀವಿಬ್ಬರು ಮದುವೆ ಆಗಿದ್ದೀರಾ? ಆಗ್ತೀರಾ? ಎನ್ನುವ ಪ್ರಶ್ನೆಗೆ ನರೇಶ್ ಉತ್ತರಿಸಿದ್ದಾರೆ. "ಮದುವೆ ಎನ್ನುವ ವ್ಯವಸ್ಥೆ ಈಗ ಮುರಿದು ಬೀಳ್ತಿದೆ. ಅದು ಸತ್ಯ. ಈಗ ಐದಾರು ಫ್ಯಾಮಿಲಿ ಕೋರ್ಟ್ ಇದೆ ಅಂದ್ರೆ ಅರ್ಥ ಏನು? ಆ ವ್ಯವಸ್ಥೆ ಹಾಳಾಗ್ತಿದೆ ಎಂದೇ ಅರ್ಥ. ಆ ವ್ಯವಸ್ಥೆಯನ್ನು ಗೌರವಿಸಿ ನಾವು 'ಮಳ್ಳಿ ಪೆಳ್ಳಿ' ಸಿನಿಮಾ ಮಾಡಿದ್ದೇವೆ.
"ಕೆಲವರು ತಾಳಿ ಹಾಕಿಕೊಳ್ಳುತ್ತಾರೆ. ಮತ್ತೆ ಕೆಲವರು ಉಂಗುರು ಹಾಕಿ ಕೊಳ್ಳುತ್ತಾರೆ. ಇನ್ನೊಂದು ಮತದಲ್ಲಿ ಮತ್ತೊಂದು ರೀತಿ ಮದುವೆ ಆಗುತ್ತಾರೆ. ಮದುವೆ ಅಂದ್ರೆ ನಿಜವಾದ ಅರ್ಥ, ಎರಡು ಹೃದಯಗಳು ಒಂದಾಗುವುದು. ಮದುವೆ ಅಂದ್ರೆ ಹೃದಯಗಳು ಒಂದಾಗುವುದು ಎಂದಮೇಲೆ ನಾವು ಮದುವೆ ಆದಂತೆನಾ? ಆಗಿಲ್ಲಾ ಅಂತಾನಾ?" ಎಂದು ನರೇಶ್ ಮರುಪ್ರಶ್ನೆ ಹಾಕಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಪವಿತ್ರಾ ಶಾಕ್ ಆಗುವಂತೆ ರಿಯಾಕ್ಷನ್ ಕೊಟ್ಟಿದ್ದಾರೆ.

ಇನ್ನು 15 ಕೋಟಿ ಖರ್ಚು ಮಾಡಿ 2 ಭಾಷೆಗಳಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾ ಮಾಡಿರುವುದಾಗಿ ನರೇಶ್ ಹೇಳಿದ್ದಾರೆ. ನಾನು ತೆಲುಗಿನಲ್ಲಿ ಜನಪ್ರಿಯ. ಪವಿತ್ರಾ ಕನ್ನಡದಲ್ಲಿ ಜನಪ್ರಿಯ. ಹಾಗಾಗಿ 2 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುತ್ತಿದ್ದೇವೆ ಎಂದಿದ್ದಾರೆ. ಇನ್ನು 3ನೇ ಪತ್ನಿ ರಮ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಸಿನಿಮಾ ಮಾಡಿದ್ದೀರಾ? ಎನ್ನುವ ಪ್ರಶ್ನೆಗೆ "ರಿವೇಂಜ್ ತೆಗೆದುಕೊಳ್ಳಲು ಸಿನಿಮಾ ಮಾಡಬೇಕಿರಲಿಲ್ಲ. ಒಂದು ಯೂಟ್ಯೂಬ್‌ನಲ್ಲಿ ಇಂಟರ್‌ವ್ಯೂ ಕೊಟ್ಟಿದ್ದರೆ ಸಾಕಿತ್ತು. ಈ ಸಿನಿಮಾದಲ್ಲಿ ಒಳ್ಳೆ ಮೇಸೇಜ್ ಇದೆ. ಕಂಟೆಂಟ್ ಇದೆ. ಅದು ಸಿನಿಮಾ ರಿಲೀಸ್ ಆದಮೇಲೆ ಗೊತ್ತಾಗುತ್ತದೆ" ಎಂದಿದ್ದಾರೆ.
ಪವಿತ್ರಾ ಲೋಕೇಶ್ ಮಾತನಾಡಿ "ಈ ಚಿತ್ರದಲ್ಲಿ ನಟಿಸಿದ್ದು ಬಹಳ ಖುಷಿಯಾಯಿತು. ಒಳ್ಳೆ ಅನುಭವ. ನನ್ನನ್ನು ಬಹಳ ಚೆನ್ನಾಗಿ ತೆರೆಮೇಲೆ ತೋರಿಸಿದ್ದಾರೆ. ಇವತ್ತಿನ ಯುವ ನಟಿಯರಿಗೆ ಪೈಪೋಟಿ ನೀಡುವಂತೆ ಕಾಣಿಸುತ್ತಿದ್ದೀನಿ ಅನ್ನಿಸ್ತಿದೆ. ನರೇಶ್ ಅವರ ಜೊತೆ ಕೆಲಸ ಮಾಡಿದ್ದು ಒಳ್ಳೆ ಅನುಭವ. ದೇಶದಲ್ಲಿರುವ ಉತ್ತಮ ನಟರಲ್ಲಿ ನರೇಶ್ ಕೂಡ ಒಬ್ಬರು" ಎಂದಿದ್ದಾರೆ.
ಜಯಸುಧಾ, ಶರತ್ ಬಾಬು, ವನಿತಾ ವಿಜಯ್ ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸುರೇಶ್ ಬೊಬ್ಬಿಲಿ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ. ಎಂ. ಎಸ್ ರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೇ 26ಕ್ಕೆ 'ಮಳ್ಳಿ ಪೆಳ್ಳಿ' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











