ಒಬ್ಬ ಹೀರೋಗೋಸ್ಕರ ಇಬ್ಬರು ಚೆಲುವೆಯರ ಫೈಟ್, ತೆಲುಗು ಚಿತ್ರರಂಗಕ್ಕೆ ತಲೆ ನೋವಾದ ಜಡೆ ಜಗಳ...!
ಸಿನಿಮಾ ತಾರೆಯರ ಡೇಟಿಂಗು, ಬ್ರೇಕಪ್ಪು, ಲವ್ವು, ಡವ್ವುಗಳಿಗೇನೂ ಕಮ್ಮಿ. ಮೊನ್ನೆ ಜೊತೆಯಾಗಿ ಓಡಾಡಿದವರು, ಮರು ದಿನವೇ .. ನೀನ್ಯಾರೋ.. ನಾನ್ಯಾರೋ ಎಂಬಂತೆ ಓಡಾಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪಕ್ಕದ ಆಂಧ್ರ ಪ್ರದೇಶದಲ್ಲಿ ಪ್ರೇಮಕಥೆಯೊಂದು ಸದ್ದು ಮಾಡುತ್ತಿದೆ.
ಹೌದು, ಆರಕ್ಕೇರಿದ ಮೂರಕ್ಕಿಳಿಯದ ಟಾಲಿವುಡ್ ಸ್ಟಾರ್ ರಾಜ್ ತರುಣ್ , ಹನ್ನೊಂದು ವರ್ಷದಿಂದ.. ನನ್ನ ಜೊತೆ ಇದ್ದರು ಎಂಬ ಬಾಂಬನ್ನೂ ಮೊನ್ನೆ ತೆಲುಗು ನಾಯಕಿ ಲಾವಣ್ಯ ಎಸೆದಿದ್ದರು. ಗುಟ್ಟಾಗಿ ಮದುವೆ ಮಾಡಿಕೊಂಡಿರುವುದಾಗಿ ಕೂಡ ಹೇಳಿದ್ದರು. ಆದರೆ ಈಗ ತಮ್ಮ ಮುಂದಿನ ಚಿತ್ರದ ಮುಂಬೈ ಮೂಲದ ನಾಯಕಿಯ ಜೊತೆ ಸಲುಗೆ ಬೆಳೆದಿದೆ. ಆಕೆಯ ಸಲುವಾಗಿ ನನಗೆ ರಾಜ್ ತರುಣ್ ಮೋಸ ಮಾಡ್ತಿದ್ದಾನೆ ಎಂದು ನರಸಿಂಗಿ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಈ ಪ್ರೇಮಕಥೆಯಲ್ಲಿ ಈಗ ಲಾವಣ್ಯ ಆರೋಪ ಮಾಡಿರುವ ಮುಂಬೈ ಮೂಲದ ನಾಯಕಿಯ ಪ್ರವೇಶವಾಗಿದೆ. ಲಾವಣ್ಯ ವಿರುದ್ಧ ಪ್ರತಿದೂರು ಕೂಡ ದಾಖಲಾಗಿದೆ.

ಹೌದು, 'ತಿರಗಬಡರಾ ಸಾಮಿ' ರಾಜ್ ತರುಣ್ ನಟಿಸುತ್ತಿರುವ ಹೊಸ ಸಿನಿಮಾ . ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದವರು ಮುಂಬೈ ಮೂಲದ ಮಾಳವಿ ಮಲ್ಹೋತ್ರಾ. ಈಗ ಇದೇ ಮಾಳವಿ ಅವರು ರಾಜ್ ತರುಣ್ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ವಿರುದ್ಧ ಲಾವಣ್ಯ ಮಾಡಿರುವ ಆರೋಪ ಎಲ್ಲವೂ ಶುದ್ಧ ಸುಳ್ಳು ಎಂದಿರುವ ಮಾಳವಿ ನಾನು ರಾಜ್ ತರುಣ್ ಜೊತೆಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದಿದ್ದಾರೆ. ನಮ್ಮ ನಡುವೆ ಸ್ನೇಹ ಹೊರತುಪಡಿಸಿ ಯಾವುದೇ ಸಂಬಂಧ ಅಥವಾ ಯಾವುದೇ ರೀತಿಯ ವಿಷಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಇನ್ನೂ ಹೈದ್ರಾಬಾದ್ ಡಿಸಿಪಿ ಅವರನ್ನು ಕೂಡ ಭೇಟಿಯಾಗಿರುವ ಮಾಳವಿ ಮಲ್ಹೋತ್ರಾ, ಲಾವಣ್ಯ ತಮ್ಮ ಮಾನಹಾನಿಗೆ ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ದೂರಿನಲ್ಲಿ ಲಾವಣ್ಯ ವಿರುದ್ಧ ಬೆದರಿಕೆ ಆರೋಪವನ್ನೂ ಮಾಳವಿ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನೆಲೆಸಿರುವ ನನ್ನ ಕುಟುಂಬಕ್ಕೆ ಲಾವಣ್ಯ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಿರುವ ಮಾಳವಿ, ನನ್ನ ಸಹೋದರನಿಗೂ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

2023ರಲ್ಲಿ ಕೇವಲ ಒಂದು ಬಾರಿ ಮಾತ್ರ ನಾನು ಲಾವಣ್ಯ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇ, ಆಗಲೂ ಕೂಡ ಲಾವಣ್ಯ ಅವಾಚ್ಯ ಶಬ್ದಗಳಿಂದ ನನಗೆ ಮತ್ತು ನನ್ನ ಕುಂಟುಬವನ್ನು ನಿಂದಿಸಿದ್ದರು ಎಂದಿರುವ ಮಾಳವಿ, ಆ ನಂತರ ರಾಜ್ ತರುಣ್, ಲಾವಣ್ಯ ತನ್ನ ಮಾಜಿ ಪ್ರೇಯಸಿ ಆಕೆಯಿಂದ ಎಚ್ಚರಿಕೆಯಿಂದಿರು ಎಂದು ಹೇಳಿದ್ದರು ಹಾಗಾಗಿ ಆಕೆಯ ನಂಬರ್ ನಾನು ಬ್ಲಾಕ್ ಮಾಡಿದ್ದೇನೆ' ಎಂದಿದ್ದಾರೆ. ಲಾವಣ್ಯ ಹೇಗಿದ್ದಾರೆ ಅನ್ನುವುದು ಕೂಡ ನನಗೆ ಗೊತ್ತಿಲ್ಲ. ನಾನು ಈ ವರೆಗೆ ಲಾವಣ್ಯಳನ್ನು ನೋಡಿಯೂ ಇಲ್ಲ. ಭೇಟಿ ಕೂಡ ಆಗಿಲ್ಲ ಎಂದು ಹೇಳಿದ್ದಾರೆ ಮಾಳವಿ ಮಲ್ಹೋತ್ರಾ.
ಇನ್ನೂ.. ನನ್ನ ತಂದೆ-ತಾಯಿಯ ಮೊಬೈಲ್ ನಂಬರ್ ರಾಜ್ ತರುಣ್ ಬಳಿಯೇ ಇಲ್ಲ. ಆದರೆ... ಲಾವಣ್ಯ ಬಳಿ ನಂಬರ್‌ಗಳಿವೆ, ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಮಾಡಿರುವ ಮಾಳವಿ ನನ್ನ ಖಾಸಗಿ ಜೀವನದ ಮೇಲೆ ಲಾವಣ್ಯ ಕಣ್ಣಿದೆ. ಅದು ಅಪರಾಧ. ಪೊಲೀಸರು ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಲಾವಣ್ಯ ಬಿಡುಗಡೆ ಮಾಡಿರುವ ಆಡಿಯೋನಲ್ಲಿಯೂ ಕೂಡ ನಾನು ಸ್ಪಷ್ಟಪಡಿಸಿದ್ದೇನೆ ನನಗೂ ರಾಜ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ


Click it and Unblock the Notifications











