For Quick Alerts
  ALLOW NOTIFICATIONS  
  For Daily Alerts

  ಸಮಂತಾ ಚಿತ್ರ ನೋಡಿ ಹೃದಯಾಘಾತ: ಚಿತ್ರಮಂದಿರದಲ್ಲಿ ಪ್ರಾಣಬಿಟ್ಟ ವ್ಯಕ್ತಿ.!

  |

  ಟಾಲಿವುಡ್ ನಟಿ ಸಮಂತಾ ಮತ್ತು ಶರ್ವಾನಂದ್ ಅಭಿನಯದ ರೊಮ್ಯಾಂಟಿಕ್ ಮತ್ತು ಎಮೋಷನಲ್ ಸಿನಿಮಾ 'ಜಾನು' ಮೊನ್ನೆ ಮೊನ್ನೆಯಷ್ಟೇ ಬಿಡುಗಡೆ ಆಗಿದೆ. ತಮಿಳಿನ ಸೂಪರ್ ಹಿಟ್ '96' ಚಿತ್ರದ ರೀಮೇಕ್ ಈ 'ಜಾನು'. ನಿರೀಕ್ಷಿಸಿದ ಮಟ್ಟಕ್ಕೆ 'ಜಾನು' ಚಿತ್ರಕ್ಕೆ ಓಪನ್ನಿಂಗ್ ಸಿಕ್ಕಿಲ್ಲ. ಆದರೂ, ಸಮಂತಾ ಅಪ್ಪಟ ಅಭಿಮಾನಿಗಳು ಮಾತ್ರ 'ಜಾನು' ಚಿತ್ರವನ್ನು ಕಣ್ತುಂಬಿಕೊಳ್ಳಲು ಥಿಯೇಟರ್ ನತ್ತ ಮುಗಿಬೀಳುತ್ತಿದ್ದಾರೆ.

  'ಜಾನು' ಚಿತ್ರವನ್ನು ಕಣ್ತುಂಬಿಕೊಳ್ಳಲು ಹೋದ ವ್ಯಕ್ತಿಯೊಬ್ಬ ಥಿಯೇಟರ್ ನಲ್ಲೇ ಪ್ರಾಣಬಿಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 'ಜಾನು' ಚಿತ್ರ ವೀಕ್ಷಿಸುತ್ತಿರುವಾಗಲೇ, ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಅಂತ ಹೇಳಲಾಗುತ್ತಿದೆ. ಮುಂದೆ ಓದಿರಿ...

  ಚಿತ್ರ ಮುಗಿದರೂ ಆಚೆ ಬರಲಿಲ್ಲ.!

  ಚಿತ್ರ ಮುಗಿದರೂ ಆಚೆ ಬರಲಿಲ್ಲ.!

  ಹೈದರಾಬಾದ್ ನ ಗೋಕುಲ್ ಥಿಯೇಟರ್ ನಲ್ಲಿ 'ಜಾನು' ಚಿತ್ರದ ಪ್ರದರ್ಶನ ನಡೆಯುತ್ತಿತ್ತು. ಎಲ್ಲರಂತೆ 'ಜಾನು' ಚಿತ್ರವನ್ನು ವೀಕ್ಷಿಸಲು ವ್ಯಕ್ತಿಯೊಬ್ಬ ಚಿತ್ರಮಂದಿರದ ಒಳಗೆ ಹೋಗಿದ್ದಾನೆ. ಆದ್ರೆ, ಚಿತ್ರ ಮುಗಿದರೂ ಆ ವ್ಯಕ್ತಿ ಥಿಯೇಟರ್ ನಿಂದ ಆಚೆ ಬರಲಿಲ್ಲ. ಹೀಗಾಗಿ, ಚಿತ್ರಮಂದಿರದ ಸಿಬ್ಬಂದಿ ಹತ್ತಿರ ಹೋದಾಗ ಅನುಮಾನಗೊಂಡಿದ್ದಾರೆ.

  ಚಿತ್ರರಂಗಕ್ಕೆ ಸಮಂತಾ ಗುಡ್ ಬೈ.? ದಿಢೀರ್ ಅಂತ ನಾಗಾರ್ಜುನ ಸೊಸೆ ಹೀಗಂದಿದ್ಯಾಕೆ.?ಚಿತ್ರರಂಗಕ್ಕೆ ಸಮಂತಾ ಗುಡ್ ಬೈ.? ದಿಢೀರ್ ಅಂತ ನಾಗಾರ್ಜುನ ಸೊಸೆ ಹೀಗಂದಿದ್ಯಾಕೆ.?

  ಹೃದಯಾಘಾತದಿಂದ ನಿಧನ

  ಹೃದಯಾಘಾತದಿಂದ ನಿಧನ

  ಚಿತ್ರಮಂದಿರದ ಸಿಬ್ಬಂದಿ ಕೂಡಲೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಆ ವ್ಯಕ್ತಿಯ ದೇಹವನ್ನು ಹತ್ತಿರದ ಗಾಂಧಿ ಆಸ್ಪತ್ರೆ ಕರೆದೊಯ್ದಿದ್ದಾರೆ. ಹೃದಯಾಘಾತದಿಂದ ಆ ವ್ಯಕ್ತಿ ಮೃತಪಟ್ಟಿದ್ದಾನೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

  ಆರಂಭದಲ್ಲಿ '96' ರೀಮೇಕ್ ರಿಜೆಕ್ಟ್ ಮಾಡಿದ್ರಂತೆ ಸಮಂತಾ!ಆರಂಭದಲ್ಲಿ '96' ರೀಮೇಕ್ ರಿಜೆಕ್ಟ್ ಮಾಡಿದ್ರಂತೆ ಸಮಂತಾ!

  ಗುರುತು ಸಿಕ್ಕಿಲ್ಲ.!

  ಗುರುತು ಸಿಕ್ಕಿಲ್ಲ.!

  ಅಸಲಿಗೆ, ಆ ವ್ಯಕ್ತಿಯ ಹೆಸರೇನು.? ಕುಟಂಬಸ್ಥರು ಯಾರು.? ಎಂಬುದು ತಿಳಿದುಬಂದಿಲ್ಲ. ಆ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಜೇಬಿನಲ್ಲಿ ಯಾವುದೇ ಗುರುತಿನ ಚೀಟಿ ಲಭ್ಯವಾಗಿಲ್ಲ.

  ಪ್ರೇಕ್ಷಕರ ತಿರಸ್ಕಾರಕ್ಕೆ ಒಳಗಾದ ಸಮಂತಾ: ಕಾರಣ ಏನು?ಪ್ರೇಕ್ಷಕರ ತಿರಸ್ಕಾರಕ್ಕೆ ಒಳಗಾದ ಸಮಂತಾ: ಕಾರಣ ಏನು?

  'ಜಾನು' ಕುರಿತು

  'ಜಾನು' ಕುರಿತು

  ಅಂದ್ಹಾಗೆ, ಸಿ.ಪ್ರೇಮ್ ಕುಮಾರ್ ನಿರ್ದೇಶನದ ಸಮಂತಾ ಮತ್ತು ಶರ್ವಾನಂದ್ ನಟನೆಯ ಚಿತ್ರ 'ಜಾನು'. ದಿಲ್ ರಾಜು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಗೋವಿಂದ್ ವಸಂತ ಸಂಗೀತ ನೀಡಿದ್ದಾರೆ.

  English summary
  Man dies watching Samantha starrer Jaanu Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X