ಮಹೇಶ್ ಬಾಬು ಶರ್ಟ್ ಬಿಚ್ಚಿ ಓಡಾಡಿದ್ರೆ ನೀವು ಯಾಕೆ ಕೇಳಲ್ಲ- ಮಂಚು ಲಕ್ಷ್ಮಿ ಗರಂ
ನಟಿಯರ ವೇಷಭೂಷಣ, ಸ್ಕಿನ್ ಶೋ ಬಗ್ಗೆ ಪದೇ ಪದೆ ಚರ್ಚೆ ಆಗುತ್ತದೆ. ತೆರೆಮೇಲೆ ಮಾತ್ರವಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೂಡ ಅವರು ತೊಡುವ ಕಾಸ್ಟ್ಯೂಮ್ಸ್ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತೆಲುಗು ನಟಿ ಮಂಚು ಲಕ್ಷ್ಮಿಗೆ ಇದೇ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಆಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ನಟ ವಿಚಾರದಲ್ಲಿ ಈ ಪ್ರಶ್ನೆ ಯಾಕೆ ಕೇಳಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತೆಲುಗಿನ ಖ್ಯಾತ ನಟ ಮೋಹನ್ ಬಾಬು ಪುತ್ರಿ ಲಕ್ಷ್ಮಿ ತಂದೆ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದವರು. ಇನ್ನು ಅಮೆರಿಕಾದಲ್ಲಿ ಓದಿ ಬೆಳೆದ ಲಕ್ಷ್ಮಿ ಕೊಂಚ ಬಿಂದಾಸ್ ಆಗಿಯೇ ಕಾಣಿಸಿಕೊಳ್ಳುತ್ತಾರ. ಬೋಲ್ಡ್ ಆಗಿ ಮಾತನಾಡುವುದು ಮಾತ್ರವಲ್ಲ ಬೋಲ್ಡ್ ಅವತಾರಗಳಲ್ಲಿ ನೋಡುವ ಹುಬ್ಬೇರುವಂತೆ ಮಾಡುತ್ತಾರೆ. 'ದಕ್ಷ - ದಿ ಡೆಡ್ಲಿ ಕಾನ್ಪಿರೆಸಿ' ಎಂಬ ಚಿತ್ರದ ಮೂಲಕ ಆಕೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸದ್ಯ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಸಂದರ್ಶನವೊಂದರಲ್ಲಿ ನಿಮಗೆ ವಯಸ್ಸು 50 ಆಗುತ್ತಾ ಬಂತು, ಈಗ ಯಾಕೆ ಈ ರೀತಿಯ ಉಡುಪು ಧರಿಸುತ್ತೀರಾ ಎನ್ನುವ ಪ್ರಶ್ನೆಗೆ ಲಕ್ಷ್ಮಿ ಗರಂ ಆಗಿದ್ದಾರೆ. "ಇದೇ ಪ್ರಶ್ನೆಯನ್ನು ಒಬ್ಬ ಪುರುಷನನ್ನು ನೀವು ಹೇಳ್ತೀರಾ?" ಎಷ್ಟು ಧೈರ್ಯ ನಿಮಗೆ" ಎಂದು ಕೆಂಡಾಮಂಡಲವಾಗಿದ್ದಾರೆ. ಮಹೇಶ್ ಬಾಬು ನಿನಗೆ 50 ವರ್ಷ ಆಯ್ತು, ಶರ್ಟ್ ಬಿಚ್ಚಿ ಯಾಕೆ ಓಡಾಡುತ್ತೀಯಾ? ಎಂದು ಕೇಳ್ತೀರಾ? ಮಹಿಳೆಯರಿಗೆ ಇಂತಹ ಪ್ರಶ್ನೆ ಹೇಗೆ ಕೇಳಬಹುದು ಹೇಳಿ ಎಂದು ನಿರೂಪಕನಿಗೆ ಮರುಪ್ರಶ್ನೆ ಹಾಕಿದ್ದಾರೆ.
ನೀವು ಈ ಪ್ರಶ್ನೆಗಳನ್ನು ಕೇಳುವುದು ನೋಡಿ ಜನ ಕೂಡ ಹೀಗೆ ಯೋಚಿಸಲು ಕಲಿಯುತ್ತಾರೆ. ಸ್ಟಾರ್ ನಟನೊಬ್ಬನ ಪತ್ನಿ ಡಿವೋರ್ಸ್ ಪಡೆದ ಬಳಿಕ ಆಕೆಗೆ ಇಲ್ಲಿ ಅವಕಾಶಗಳು ಕೊಡ್ತಿಲ್ಲ. ಅದೇ ರೀತಿ ಒಬ್ಬ ನಟ ಡಿವೋರ್ಸ್ ಪಡೆದರೆ ನೀನು ನಮ್ಮ ಸಿನಿಮಾಗಳಲ್ಲಿ ನಟಿಸೋದು ಬೇಡ ಕಣಪ್ಪ ಅಂತ ಹೇಳುವ ಧೈರ್ಯ ಯಾರಿಗಾದರೂ ಇದ್ಯಾ? ಎಂದು ನಿರೂಪಕನಿಗೆ ಲಕ್ಷ್ಮಿ ಮರು ಪ್ರಶ್ನೆ ಹಾಕಿದ್ದಾರೆ.
ಮಹಿಳೆ ಮದುವೆಯಾದ ನಂತರ, ಅವಳಿಗೆ ಅವಳ ಗಂಡ, ಅತ್ತೆ, ಮಾವ, ಮಕ್ಕಳು, ಪೋಷಕರಂತಹ ಅನೇಕ ಜವಾಬ್ದಾರಿಗಳಿರುತ್ತವೆ. ನಮಗೆ ಎಲ್ಲಿಯೂ ಸ್ವಾತಂತ್ರ್ಯವಿಲ್ಲ. ಅದನ್ನು ನಾವೇ ಕಂಡುಕೊಳ್ಳಬೇಕು ಎಂದು ಲಕ್ಷ್ಮಿ ಹೇಳಿದ್ದಾರೆ. 'ದಕ್ಷ - ದಿ ಡೆಡ್ಲಿ ಕಾನ್ಪಿರೆಸಿ' ಚಿತ್ರಕ್ಕೆ ವಂಶಿ ಕೃಷ್ಣ ಮಲ್ಲಾ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಲಕ್ಷ್ಮಿ ತಂದೆ ಮೋಹನ್ ಬಾಬು ಹಾಗೂ ತಮಿಳು ನಟ ಸಮುದ್ರ ಖನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಶುಕ್ರವಾರ ಸಿನಿಮಾ ತೆರೆಗೆ ಬರಲಿದೆ.
ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಮಂಚು ಕುಟುಂಬ ಭಾರೀ ಸುದ್ದಿ ಆಗಿತ್ತು. ಮೋಹನ್ ಬಾಬು ಪುತ್ರರಾದ ವಿಷ್ಣು ಹಾಗೂ ಮನೋಜ್ ಆಸ್ತಿಗಾಗಿ ಕಿರಿಕ್ ಮಾಡಿಕೊಂಡಿದ್ದಾಗಿ ಹೇಳಲಾಗಿತ್ತು. ಪೊಲೀಸ್ ಸ್ಟೇಷನ್ ಮೆಟ್ಟಿಲೇರಿ ಗಲಾಟೆ ಮಾಡಿಕೊಂಡಿದ್ದರು. ತಂದೆ ಮೋಹನ್ ಬಾಬು ಹಿರಿಯ ಪುತ್ರ ವಿಷ್ಣು ಪರ ನಿಂತಿದ್ದಾರೆ. ಜಗಳ ಮಾಡಿಕೊಂಡು ಬೇರೆ ಮನೆ ಮಾಡಿದ್ದಾರೆ. ಮಂಚು ವಿಷ್ಣು ನಟಿಸಿ 'ಕಣ್ಣಪ್ಪ' ಸಿನಿಮಾ ಹೀನಾಯವಾಗಿ ಸೋತಿತ್ತು. ತಂದೆ ಮೋಹನ್ ಬಾಬು ಸಿನಿಮಾ ನಿರ್ಮಾಣ ಮಾಡಿದ್ದರು. ಪ್ರಭಾಸ್, ಮೋಹನ್ ಲಾಲ್ ಹಾಗೂ ಅಕ್ಷಯ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದಿತ್ತು.


Click it and Unblock the Notifications











