ಕಾಲೆಳೆದ ನೆಟ್ಟಿಗನಿಗೆ ಕೈಮುಗಿದು ಕ್ಷಮೆ ಕೇಳಿದ ತೆಲುಗು ನಟ ಮಂಜು ಮನೋಜ್.!

'ದೊಂಗ ದೊಂಗದಿ' ಚಿತ್ರದ ಮೂಲಕ ತೆಲುಗು ಸಿನಿ ಅಂಗಳಕ್ಕೆ ಹೀರೋ ಆಗಿ ಪರಿಚಿತರಾದ ನಟ ಮಂಚು ಮನೋಜ್. 'ರಾಜು ಭಾಯ್', 'ನೇನು ಮೀಕು ತೆಲುಸಾ.?' 'ಬಿಂದಾಸ್', 'ವೇದಂ', 'ಪೋಟುಗಾಡು', 'ಶೌರ್ಯ' ಮುಂತಾದ ಚಿತ್ರಗಳ ಮೂಲಕ ಮಂಚು ಮನೋಜ್ ಟಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ.

ಇಂತಿಪ್ಪ ಮಂಚು ಮನೋಜ್ 2017 ರಲ್ಲಿ ಬಿಡುಗಡೆ ಆದ 'ಒಕ್ಕಡು ಮಿಗಿಲಾಡು' ಚಿತ್ರ ಫ್ಲಾಪ್ ಆದ ಬಳಿಕ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಂಚು ಮನೋಜ್ ವಿವಾಹ ವಿಚ್ಛೇದನವನ್ನೂ ಪಡೆದುಕೊಂಡರು.

''ಚಿತ್ರರಂಗಕ್ಕೆ ಧಮಾಕೇಧಾರ್ ಆಗಿ ಕಮ್ ಬ್ಯಾಕ್ ಮಾಡುವೆ. ವಾರಗಳಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡುವೆ'' ಎಂದು ತಿಂಗಳ ಹಿಂದೆ ಮಂಚು ಮನೋಜ್ ಟ್ವೀಟ್ ಮಾಡಿದ್ದರು. ಆದರೆ, ಇಲ್ಲಿಯವರೆಗೂ ಮಂಚು ಮನೋಜ್ ಮುಂದಿನ ಚಿತ್ರದ ಬಗ್ಗೆ ಸುಳಿವು ಸಿಕ್ಕಿಲ್ಲ.

Manchu Manoj apologizes to Netizen

ಇದನ್ನ ಗಮನಿಸಿದ ನೆಟ್ಟಿಗರೊಬ್ಬರು ''ವಾರ ಅಂದ್ರೆ ಎಷ್ಟು.. 20-30 ವಾರಗಳ ನಂತರನಾ.?'' ಎಂದು ಮಂಚು ಮನೋಜ್ ಕುರಿತು ಟ್ರೋಲ್ ಮಾಡಲಾಗಿದ್ದ ಫೋಟೋದೊಂದಿಗೆ ''ಕಾಯುತ್ತಿದ್ದೇವೆ'' ಎಂದು ಟ್ವೀಟ್ ಮಾಡಿದ್ದರು.

ಟ್ರೋಲ್ ಮೂಲಕ ಕಾಲೆಳೆದ ನೆಟ್ಟಿಗನಿಗೆ ''ಸಾರಿ ತಮ್ಮ.. ಇನ್ನೂ ಸ್ವಲ್ಪ ಟೈಮ್ ಬೇಕಾಗುತ್ತೆ'' ಎಂದು ಕ್ಷಮೆ ಕೇಳಿ ಮಂಚು ಮನೋಜ್ ಕೈಮುಗಿದಿದ್ದಾರೆ.

ತೆಲುಗಿನ ಪ್ರಖ್ಯಾತ ನಟ ಮೋಹನ್ ಬಾಬು ಪುತ್ರನಾಗಿರುವ ಮಂಚು ಮನೋಜ್ ಇತ್ತೀಚೆಗಷ್ಟೇ 'ಎಂ.ಎಂ.ಆರ್ಟ್ಸ್' ಎಂಬ ಸ್ವಂತ ಪ್ರೊಡಕ್ಷನ್ ಹೌಸ್ ಲಾಂಚ್ ಮಾಡಿದ್ದರು.

More from Filmibeat

English summary
Telugu Actor Manchu Manoj apologizes to Netizen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X