ಸಂಕ್ರಾಂತಿ ಹಬ್ಬದಂದು ಅನಾಥಾಶ್ರಮಕ್ಕೆ ಭೇಟಿ ಕೊಟ್ಟ ತೆಲುಗು ನಟ ಮಂಚು ಮನೋಜ್
ಹಬ್ಬ ಬಂತು ಅಂದ್ರೆ ಸಾಂಪ್ರದಾಯಿಕ ಉಡುಗೆ ತೊಟ್ಟು, ಕುಟುಂಬದ ಜೊತೆಗೆ ನಟ-ನಟಿಯರು ಆಚರಣೆ ಮಾಡುವುದು ಸಾಮಾನ್ಯ. ಆದ್ರೆ, ಇದರ ಹೊರತಾಗಿ ತೆಲುಗು ನಟ ಮಂಚು ಮನೋಜ್ ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ತಿರುಪತಿ ಬಳಿಯಿರುವ ಅಭಯ ಕ್ಷೇತ್ರಂ ಎನ್ನುವ ಅನಾಥಾಶ್ರಮಕ್ಕೆ ಭೇಟಿ ಕೊಟ್ಟು, ಅಲ್ಲಿರುವ ಮಕ್ಕಳಿಗೆ ಸರ್ಪ್ರೈಸ್ ನೀಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ಮಂಚು ಮನೋಜ್ ಸೆಲೆಬ್ರೇಟ್ ಮಾಡಿದ್ದಾರೆ.
''ಈ ಹಬ್ಬ ತುಂಬಾನೇ ವಿಶೇಷ. ಅಭಯ ಕ್ಷೇತ್ರಂ ಅನಾಥಾಶ್ರಮಕ್ಕೆ ಭೇಟಿ ಕೊಟ್ಟು, ಅಲ್ಲಿರುವ ಪ್ರತಿಭಾವಂತ ಮಕ್ಕಳ ಜೊತೆಗೆ ಕಾಲ ಕಳೆದಿದ್ದು ಸ್ಪೆಷಲ್ ಆಗಿತ್ತು. ಆ ಮಕ್ಕಳಿಗೆ ಬೆನ್ನೆಲುಬಾಗಿ ನಾನು ಯಾವಾಗಲೂ ಇರುತ್ತೇನೆ. ದೇವರ ದಯೆ ಆ ಮಕ್ಕಳ ಮೇಲಿರಲಿ'' ಎಂದು ನಟ ಮಂಚು ಮನೋಜ್ ಟ್ವೀಟ್ ಮಾಡಿದ್ದಾರೆ.

'ದೊಂಗಾ ದೊಂಗದಿ', 'ರಾಜು ಭಾಯ್', 'ಬಿಂದಾಸ್', 'ವೇದಂ', 'ಪೋಟುಗಾಡು' ಮುಂತಾದ ಚಿತ್ರಗಳ ಮೂಲಕ ಟಾಲಿವುಡ್ ನಲ್ಲಿ ಮಂಜು ಮನೋಜ್ ಗುರುತಿಸಿಕೊಂಡಿದ್ದಾರೆ. 2017 ರಲ್ಲಿ ತೆರೆಗೆ ಬಂದ 'ಗುಂಟುರೋಡು' ಮತ್ತು 'ಒಕ್ಕಡು ಮಿಗಿಲಾಡು' ಬಳಿಕ ಮಂಚು ಮನೋಜ್ ಯಾವುದೇ ಚಿತ್ರದಲ್ಲಿ ಅಭಿನಯಿಸಿಲ್ಲ.
ಎರಡು ವರ್ಷಗಳಿಂದ ತೆರೆ ಮೇಲೆ ನಾಪತ್ತೆ ಆಗಿರುವ ಮಂಚು ಮನೋಜ್ ಈ ವರ್ಷ ಸ್ವಂತ ಪ್ರೊಡಕ್ಷನ್ ಹೌಸ್ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ.


Click it and Unblock the Notifications











