ಮಾ ಚುನಾವಣೆ: ಬಣ ಘೋಷಿಸಿದ ಪ್ರಕಾಶ್ ರೈ ಎದುರಾಳಿ ಮಂಚು ವಿಷ್ಣು

ತೆಲುಗು ಚಿತ್ರರಂಗದಲ್ಲಿ ಈಗ ಸಿನಿಮಾಗಳಿಗಿಂತಲೂ ಚುನಾವಣೆಯದ್ದೇ ಚರ್ಚೆ ಹೆಚ್ಚಾಗಿ ನಡೆಯುತ್ತಿದೆ. ತೆಲುಗು ಚಿತ್ರರಂಗದ ಪ್ರತಿಷ್ಠಿತ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆ ಘೋಷಣೆಯಾಗಿದ್ದು, ಇಬ್ಬರು ದೊಡ್ಡ ನಟರು ಪರಸ್ಪರ ಎದುರು-ಬದುರು ಸ್ಪರ್ಧಿಸುತ್ತಿದ್ದಾರೆ.

ಕರ್ನಾಟಕ ಮೂಲದ ಬಹುಭಾಷಾ ನಟ ಪ್ರಕಾಶ್ ರೈ ಮಾ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದು, ಪ್ರಕಾಶ್ ರೈ ಎದುರಾಳಿಯಾಗಿ ತೆಲುಗಿನ ನಾಯಕ ನಟ ಮಂಚು ವಿಷ್ಣು ಸ್ಪರ್ಧೆ ಮಾಡುತ್ತಿದ್ದಾರೆ. ಪ್ರಕಾಶ್ ರೈಗೆ ಚಿರಂಜೀವಿ ಹಾಗೂ ಮೆಗಾಸ್ಟಾರ್ ಕುಟುಂಬದ ಬೆಂಬಲ ದೊರಕಿದೆ. ಮಂಚು ವಿಷ್ಣು ಪರವಾಗಿಯೂ ಸಾಕಷ್ಟು ಬೆಂಬಲವಿದೆ. ಹಾಗಾಗಿ ಚುನಾವಣೆ ಬಹಳ ಜಿದ್ದಾ-ಜಿದ್ದಿನಿಂದ ಕೂಡಿದೆ.

'ಮಾ' ಚುನಾವಣೆಯು ಸಿಂಡಿಕೇಟ್ ಮಾದರಿಯಲ್ಲಿ ನಡೆಯಲಿದ್ದು, ಸಿಂಡಿಕೇಟ್‌ಗಳು ಪರಸ್ಪರ ಚುನಾವಣೆ ಸ್ಪರ್ಧಿಸಲಿದ್ದಾವೆ. ಪ್ರಕಾಶ್ ರೈ ತಮ್ಮ ಸಿಂಡಿಕೇಟ್ ಅನ್ನು ಈಗಾಗಲೇ ಘೊಷಿಸಿದ್ದಾರೆ. ಯಾರು-ಯಾರು ಯಾವ-ಯಾವ ಹುದ್ದೆಗಳಿಗೆ ಸ್ಪರ್ಧಿಸಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದೀಗ ಮಂಚು ವಿಷ್ಣು ಸಹ ತಮ್ಮ ಸಿಂಡಿಕೇಟ್ ಅನ್ನು ಘೋಷಿಸಿದ್ದಾರೆ.

ಮಂಚು ವಿಷ್ಣು ಸ್ವತಃ ಮಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ತಮ್ಮ ಸಿಂಡಿಕೇಟ್ ಅನ್ನು ಮಂಚು ವಿಷ್ಣು ಪ್ರಕಟಿಸಿದ್ದು, ಪ್ರಕಾಶ್ ರೈ ಸಿಂಡಿಕೇಟ್‌ಗೆ ಒಳ್ಳೆಯ ಪ್ರತಿಸ್ಪರ್ಧೆ ನೀಡುವಂಥಹಾ ಸಿಂಡಿಕೇಟ್ ಅನ್ನೇ ಮಂಚು ವಿಷ್ಣು ಕಟ್ಟಿಕೊಂಡಿದ್ದಾರೆ. ಹಲವು ಹಿರಿಯ ನಟರು, ನಟಿಯರು ಮಂಚು ವಿಷ್ಣು ಸಿಂಡಿಕೇಟ್‌ನಲ್ಲಿದ್ದಾರೆ. ತಮ್ಮ ಸಿಂಡಿಕೇಟ್‌ನ ಚಿತ್ರ ಸಮೇತ ಪೋಸ್ಟರ್‌ಗಳನ್ನು ಮಂಚು ವಿಷ್ಣು ಬಿಡುಗಡೆ ಮಾಡಿದ್ದಾರೆ.

ಮಂಚು ವಿಷ್ಣು ಬಣದಲ್ಲಿ ಯಾರ್ಯಾರಿದ್ದಾರೆ?

ಮಂಚು ವಿಷ್ಣು ಬಣದಲ್ಲಿ ಯಾರ್ಯಾರಿದ್ದಾರೆ?

ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಪೋಷಕರ, ಹಾಸ್ಯ ನಟ ರಘು ಬಾಬು, ಕಾರ್ಯನಿರ್ವಹಾಕ ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಬಾಬು ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಪೃಥ್ವಿರಾಜ ಬಾಲಿ ರೆಡ್ಡಿ ಮತ್ತು ಮದ್ದಾಲ ರವಿ, ಖಜಾಂಚಿ ಸ್ಥಾನಕ್ಕೆ ನಾಯಕ ನಟ, ಪೋಷಕ ನಟ ಶಿವ ಬಾಲಾಜಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಕರಾಟೆ ಕಲ್ಯಾಣಿ ಮತ್ತು ನಟ ಗೌತಮ್ ರಾಜು ಸ್ಪರ್ಧಿಸುತ್ತಿದ್ದಾರೆ.

ಆ ದಿನಗಳು ನಾಯಕಿ ಅರ್ಚನಾ

ಆ ದಿನಗಳು ನಾಯಕಿ ಅರ್ಚನಾ

ಕಾರ್ಯನಿರ್ವಾಹಕ ಸದಸ್ಯರ ಸ್ಥಾನಕ್ಕೆ ಕನ್ನಡದ 'ಆ ದಿನಗಳು', 'ಮೈತ್ರಿ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಅರ್ಚನಾ. ಸಟೈರಿಕಲ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿರುವ ಸಂಪೂರ್ಣೇಶ್ ಬಾಬು, ನಟರಾದ ಅಶೋಕ್ ಕುಮಾರ್, ಗೀತಾ ಸಿಂಗ್, ಹರಿನಾತ್ ಬಾಬು, ಜಯವಾಣಿ, ಮಲಕ್‌ಪೇಟ ಶೈಲಜಾ, ಮಾಣಿಕ್, ಪೂಜಿತಾ, ರಾಜೇಶ್ವರಿ ರೆಡ್ಡಿ, ರೇಖಾ, ಶಶಾಂಕ್, ಶಿವನಾರಾಯಣ, ಶ್ರೀಲಕ್ಷ್ಮಿ, ಶ್ರೀನಿವಾಸುಲು, ಸ್ವಪ್ನ ಮಧುರಿ, ವಿಷ್ಣು ಭೋಪಣ್ಣ, ಎಂಆರ್‌ಸಿ ವಡ್ಲಪಟ್ಲ ಸ್ಪರ್ಧೆ ಮಾಡುತ್ತಿದ್ದಾರೆ.

ಪ್ರಕಾಶ್ ರೈ ಬಣದಲ್ಲಿ ಯಾರ್ಯಾರಿದ್ದಾರೆ?

ಪ್ರಕಾಶ್ ರೈ ಬಣದಲ್ಲಿ ಯಾರ್ಯಾರಿದ್ದಾರೆ?

ಇನ್ನು ಪ್ರಕಾಶ್ ರೈ ಸಿಂಡಿಕೇಟ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಸ್ಪರ್ಧಿಸುತ್ತಿದ್ದಾರೆ.

ಅಕ್ಟೋಬರ್ 10ಕ್ಕೆ ಚುನಾವಣೆ

ಅಕ್ಟೋಬರ್ 10ಕ್ಕೆ ಚುನಾವಣೆ

'ಮಾ' ಚುನಾವಣೆಯು ಅಕ್ಟೋಬರ್ 10 ರಂದು ನಡೆಯಲಿದೆ. ಈಗಾಗಲೇ ಲಂಚ್, ಡಿನ್ನರ್ ಪಾರ್ಟಿಗಳು ಆರಂಭವಾಗಿದ್ದು ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಎರಡೂ ಬಣದವರು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರಕಾಶ್ ರೈಗೆ ಮೆಗಾಸ್ಟಾರ್ ಚಿರಂಜೀವಿ ಬೆಂಬಲ ದೊರಕಿದೆ. ಮಂಚು ವಿಷ್ಣುಗೆ ಬಾಲಕೃಷ್ಣ ಬೆಂಬಲ ದೊರೆಯುವ ಸಾಧ್ಯತೆ ಇದೆ. ಕೆಲವು ದಿನಗಳ ಹಿಂದಷ್ಟೆ ಮಂಚು ವಿಷ್ಣು ತಂದೆ ಮೋಹನ್‌ಬಾಬು, ಚಿರಂಜೀವಿಯನ್ನು ಭೇಟಿಯಾಗಿದ್ದು ಪ್ರಕಾಶ್ ರೈಗೆ ನೀಡಿರುವ ಬೆಂಬಲವನ್ನು ತಮ್ಮ ಪುತ್ರನಿಗೆ ವರ್ಗಾಯಿಸಬೇಕು ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಚಿರಂಜೀವಿ ಯಾವ ನಿರ್ಣಯ ತೆಗೆದುಕೊಂಡಿದ್ದಾರೆ ಎಂಬುದು ಖಾತ್ರಿಯಾಗಿಲ್ಲ. ಚಿರಂಜೀವಿ ಬೆಂಬಲ ಪ್ರಕಾಶ್ ರೈಗೆ ಇರಲಿದೆ ಎನ್ನಲಾಗುತ್ತಿದೆ.

More from Filmibeat

English summary
Actor Manchu Vishnu released names of his syndicate for MAA elections. Manchu Vishnu contesting against actor Prakash Raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X