For Quick Alerts
  ALLOW NOTIFICATIONS  
  For Daily Alerts

  'ಮಾ' ಅಧ್ಯಕ್ಷನಾಗಿ ಮಂಚು ವಿಷ್ಣುವರ್ಧನ್ ಪ್ರಮಾಣವಚನ: ಚಿರಂಜೀವಿಗೆ ಇಲ್ಲ ಆಹ್ವಾನ

  By ರವೀಂದ್ರ ಕೊಟಕಿ
  |

  ಕಳೆದ ಭಾನುವಾರ ನಡೆದ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಚುನಾವಣೆಯಲ್ಲಿ ಅಧ್ಯಕ್ಷನಾಗಿ ಭರ್ಜರಿ ಜಯಗಳಿಸಿದ್ದ ಮಂಚು ವಿಷ್ಣುವರ್ಧನ್ ಇಂದು ಚಲನಚಿತ್ರ ಕಲಾವಿದರ ಸಂಘದ (ಮಾ) ಹೊಸ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

  ಶನಿವಾರ ಬೆಳಿಗ್ಗೆ 11 ಗಂಟೆಗೆ ಫಿಲ್ಮ್ ನಗರ ಸಾಂಸ್ಕೃತಿಕ ಕೇಂದ್ರದಲ್ಲಿ 'ಮಾ' ಚುನಾವಣಾ ಅಧಿಕಾರಿ ಕೃಷ್ಣ ಮೋಹನ್ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿಷ್ಣು ಜೊತೆಗೆ, ಅವರ ಸಮಿತಿಯ 15 ವಿಜೇತ ಸದಸ್ಯರು ಸಹ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರೊಂದಿಗೆ, 'ಮಾ' ದಲ್ಲಿ ಹೊಸ ಕಾರ್ಯತಂಡ ಅಸ್ತಿತ್ವಕ್ಕೆ ಬಂದಾಗಿದೆ.

  ತೆಲಂಗಾಣ ರಾಜ್ಯ ಸಿನಿಮಾಟೋಗ್ರಫಿ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಫಿಲ್ಮ್ ನಗರ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ನಟ ಮೋಹನ್ ಬಾಬು, ನರೇಶ್ ಮತ್ತು ಇತರ ಹಲವು ಗಣ್ಯರು ಭಾಗವಹಿಸಿ ಹೊಸ ಕಾರ್ಯತಂಡವನ್ನು ಅಭಿನಂದಿಸಿದರು. ಮತ್ತೊಂದೆಡೆ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ, ವಿಷ್ಣು ತನ್ನ ಕಾರ್ಯ ಸಮೂಹದ ಸದಸ್ಯರೊಂದಿಗೆ 'ಮಾ' ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಷ್ಣು ಸತ್ಯಮಣಿ ವಿರಾನಿಕ ಮತ್ತು ಅವರ ಮಕ್ಕಳು ಈ ಕಾರ್ಯಕ್ರಮದ ಭಾಗಿಯಾಗಿದ್ದರು. ವಾಸ್ತವದಲ್ಲಿ ಬಾಲಕೃಷ್ಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಅವರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಶುಕ್ರವಾರ ಮೋಹನ್ ಬಾಬು ಮತ್ತು ವಿಷ್ಣು ಅವರ ಮನೆಗೆ ಬಾಲಯ್ಯ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದರು.

  ಪ್ರಕಾಶ್ ರೈ ಪ್ಯಾನೆಲ್ ಅನುಪಸ್ಥಿತಿ

  ಪ್ರಕಾಶ್ ರೈ ಪ್ಯಾನೆಲ್ ಅನುಪಸ್ಥಿತಿ

  ಪ್ರಕಾಶ್ ರೈ ಚುನಾವಣೆಯಲ್ಲಿ ಸೋತಿದ್ದರೆ, ಅವರ ಪ್ಯಾನೆಲ್ ನಿಂದ 11 ಜನರು ಗೆದ್ದಿದ್ದಾರೆ. ಆದಾಗ್ಯೂ, ಫಲಿತಾಂಶಗಳು ಬಿಡುಗಡೆಯಾದ ಮರುದಿನ, ಪ್ರಕಾಶ್ ರೈ ಅವರ ಸಮಿತಿಯ ವಿಜೇತ ಸದಸ್ಯರು ವಿಷ್ಣು ಸಮಿತಿಯೊಂದಿಗೆ ಕೆಲಸ ಮಾಡಲು ಸಾಧ್ಯವಾಗದ ಕಾರಣವೊಡ್ಡಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಇಂದಿನ ಪ್ರಕಾಶ್ ರೈ ಮತ್ತು ಅವರ ಯಾವುದೇ ಪ್ಯಾನೆಲ್ ಸದಸ್ಯರು ಹಾಜರಿರಲಿಲ್ಲ.

  ಚಿರಂಜೀವಿಗೆ ಆಹ್ವಾನ ನೀಡಿಲ್ಲ

  ಚಿರಂಜೀವಿಗೆ ಆಹ್ವಾನ ನೀಡಿಲ್ಲ

  ಮತ್ತೊಂದೆಡೆ, ಇತ್ತೀಚೆಗೆ ಬಾಲಕೃಷ್ಣ ಅವರನ್ನು ಭೇಟಿ ಮಾಡಿದ ಮಂಚು ವಿಷ್ಣು, ಚಿರಂಜೀವಿ ಅವರನ್ನೂ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಇಂದಿನ ಕಾರ್ಯಕ್ರಮದಲ್ಲಿ ಚಿರಂಜೀವಿ ಅವರು ಭಾಗವಹಿಸಬಹುದು ಎಂಬ ನಿರೀಕ್ಷೆಗಳು 'ಮಾ' ವಲಯದಲ್ಲಿತ್ತು. ಮೋಹನ್ ಬಾಬು ಮತ್ತು ವಿಷ್ಣು ಅವರು ಶುಕ್ರವಾರ ನಂದಮೂರಿ ಬಾಲಕೃಷ್ಣ ಅವರ ಮನೆಗೆ ಹೋಗಿ ಅವರೊಂದಿಗೆ ಅರ್ಧ ಗಂಟೆ ಚರ್ಚಿಸಿದರು. ಅಲ್ಲದೆ, ಪರುಚೂರಿ ಬ್ರದರ್ಸ್, ಕೈಕಾಲ ಸತ್ಯನಾರಾಯಣ, ಕೋಟ ಶ್ರೀನಿವಾಸ ರಾವ್ ಮತ್ತು ಬ್ರಹ್ಮಾನಂದಂ ಅವರು ಪ್ರಮಾಣವಚನ ಸಮಾರಂಭಕ್ಕೆ ಬರುವಂತೆ ನೇರವಾಗಿ ಆಹ್ವಾನಿಸಿದ್ದರು. ಆದರೆ, ವಿಷ್ಣು ಅವರು ಪ್ರಮಾಣವಚನ ಸಮಾರಂಭಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನೇರವಾಗಿ ಆಹ್ವಾನಿಸಿಲ್ಲ. ಮೊನ್ನೆ ಮತ ಎಣಿಕೆಯ ದಿನ ಚಿರಂಜೀವಿ ಅವರನ್ನು ಶೀಘ್ರದಲ್ಲೇ ಖುದ್ದು ಭೇಟಿ ಮಾಡುವುದಾಗಿ ವಿಷ್ಣು ಹೇಳಿದ್ದರು. ಆದರೆ ವಿಷ್ಣು, ಮೆಗಾ ಕುಟುಂಬದ ಯಾರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ವರದಿಯಾಗಿದೆ.

  ಮಂಚು ಮನೋಜ್- ಪವನ್ ಕಲ್ಯಾಣ್ ಭೇಟಿ

  ಮಂಚು ಮನೋಜ್- ಪವನ್ ಕಲ್ಯಾಣ್ ಭೇಟಿ

  ಗುರುವಾರ, ವಿಷ್ಣು ಸಹೋದರ ಮಂಚು ಮನೋಜ್, ಪವನ್ ಕಲ್ಯಾಣ್ ಅವರನ್ನು ಸಿನಿಮಾ ಸೆಟ್ ನಲ್ಲಿ ಭೇಟಿಯಾದರು. ಅರ್ಧ ಗಂಟೆ ಪವನ್ ಜೊತೆ ಚರ್ಚಿಸಿದ ಮನೋಜ್ ವಿಷ್ಣು, ಪವನ್ ಪ್ರಮಾಣವಚನ ಸಮಾರಂಭಕ್ಕೆ ಬರುವಂತೆ ಕೇಳಿದ್ದಾರೆ ಎಂದು ವರದಿಯಾಗಿದೆ. ಆದರೆ, ವಿಷ್ಣು ತಂಡವಾಗಲಿ ಅಥವಾ ಪವನ್ ತಂಡವಾಗಲಿ ಇದನ್ನು ಸ್ಪಷ್ಟಪಡಿಸಿಲ್ಲ. ಸಂಘದ ಅಭಿವೃದ್ಧಿಗಾಗಿ ಎಲ್ಲರನ್ನೂ ಸೇರಿಸಿಕೊಳ್ಳಲು ಮಂಚು ವಿಷ್ಣು ಬಯಸಿದ್ದಾರೆ. ಪ್ರಕಾಶ್ ರೈ ಅವರು ಪ್ಯಾನಲ್ ನ ವಿಜೇತ ಸದಸ್ಯರಿಗೆ ಪ್ರಮಾಣವಚನಕ್ಕೆ ಬರುವಂತೆ ಫೋನಿನಲ್ಲಿ ಆಹ್ವಾನ ಸಂದೇಶವನ್ನು ಕಳಿಸಿದ್ದಾರೆ ಅಂತ ವಿಷ್ಣು ತಂಡದ ಕಡೆಯಿಂದ ಕೇಳಿಬರುತ್ತಿರುವ ಮಾತು.

  ಎಲ್ಲರನ್ನೂ ಆಹ್ವಾನಿಸಲಾಗಿದೆ: ಮಂಚು ವಿಷ್ಣು

  ಎಲ್ಲರನ್ನೂ ಆಹ್ವಾನಿಸಲಾಗಿದೆ: ಮಂಚು ವಿಷ್ಣು

  'ನಮ್ಮ ಕಚೇರಿಯಿಂದ ಪ್ರತಿಯೊಬ್ಬ ಸದಸ್ಯರಿಗೂ ಸಂದೇಶದ ಮೂಲಕ ಆಹ್ವಾನವನ್ನು ಕಳಿಸಲಾಗಿದೆ' ಅಂತ ಮಂಚು ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ. ಆದರೆ ಚಿತ್ರರಂಗದ ಹಿರಿಯರಾದ ಚಿರಂಜೀವಿ ಅವರನ್ನು ನೇರವಾಗಿ ಭೇಟಿಮಾಡಿ ಆಹ್ವಾನಿಸದೆ, ಒಂದು ಸಂದೇಶದ ಮೂಲಕ ಆಹ್ವಾನಿಸುವುದು ಖಂಡಿತ ಒಳ್ಳೆಯ ನಡೆಯಲ್ಲ ಎಂಬುವುದು ತೆಲುಗು ಸಿನಿಮಾ ರಂಗದ ಹಿರಿಯರ ಅಭಿಪ್ರಾಯ. ಈಗಾಗಲೇ ಚುನಾವಣೆಯ ನಂತರ ಎರಡು ಗುಂಪುಗಳಾಗಿ ಹಾದಿಬೀದಿಯಲ್ಲಿ ಪರಸ್ಪರ ಕೆಸರೆರಚಕೊಳ್ಳುತ್ತಿರುವ ಈ ಸಮಯದಲ್ಲಿ ಚಿರಂಜೀವಿ ಅವರಿಗೆ ನೇರವಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಇರುವುದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾದರೂ ಆಗಬಹುದು. ಒಟ್ಟಾರೆ ಇಂದಿನ ಘಟನೆಗಳು ಮುಂದೆ ಯಾವ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಕಾದುನೋಡಬೇಕಿದೆ.

  English summary
  Manchu Vishnu sworn in as Movie Artist Association president. Many actors attended the swearing in cermony. Chiranjeevi not invited to the function.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X