For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಜೊತೆಗೆ ಸಿನಿಮಾ: ಮಣಿರತ್ನಂ ಹೇಳಿದ್ದೇನು?

  |

  ತೆಲುಗಿನ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಮಣಿರತ್ನಂ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಗಳು ಆಗಿರಲಿಲ್ಲ. ಆದರೆ ಈಗ ಸ್ವತಃ ಮಣಿರತ್ನಂ ಈ ಬಗ್ಗೆ ಮಾತನಾಡಿದ್ದಾರೆ.

  ಮಣಿರತ್ನಂ ನಿರ್ದೇಶಿಸುತ್ತಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಪ್ರಾರಂಭವಾಗುವುದಕ್ಕೆ ಮುನ್ನವೇ ಮಹೇಶ್ ಬಾಬು ಜೊತೆಗೆ ಮಣಿರತ್ನಂ ಸಿನಿಮಾ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದು ಸೆಟ್ಟೇರಲಿಲ್ಲ.

  ಈ ಬಗ್ಗೆ ಮಾತನಾಡಿರುವ ಮಣಿರತ್ನಂ, ''ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡಲು ಯೋಜಿಸಲಾಗಿತ್ತು ಆದರೆ ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ. ಸೂಕ್ತವಾದ ಕತೆ ಸಿಕ್ಕರೆ ಖಂಡಿತ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತೇನೆ'' ಎಂದಿದ್ದಾರೆ.

  ಸಣ್ಣ ವಿಷಯವಂತೂ ಅಲ್ಲ

  ಸಣ್ಣ ವಿಷಯವಂತೂ ಅಲ್ಲ

  ಭಾರತೀಯ ಸಿನಿಮಾಕ್ಕೆ ಅತ್ಯದ್ಭುತ ಸಿನಿಮಾಗಳನ್ನು ನೀಡಿರುವ ಮಣಿರತ್ನಂ, ನಟ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡಲು ಉತ್ಸುಕವಾಗಿರುವುದು ಸಣ್ಣ ವಿಷಯವಂತೂ ಅಲ್ಲ. ಮಣಿರತ್ನಂ ಹೇಳಿಕೆ ಹೊರಬಿದ್ದಾಗಿನಿಂದಲೂ ಮಹೇಶ್ ಬಾಬು ಅಭಿಮಾನಿಗಳು, ಶೀಘ್ರವಾಗಿ ಮಣಿರತ್ನಂ ಹಾಗೂ ಮಹೇಶ್‌ ಬಾಬು ಒಂದಾಗಿ ಸಿನಿಮಾ ಮಾಡಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಶಿಸುತ್ತಿದ್ದಾರೆ.

  ಒಂದು ತೆಲುಗು ಸಿನಿಮಾ ಅಷ್ಟೆ ನಿರ್ದೇಶನ ಮಾಡಿದ್ದಾರೆ

  ಒಂದು ತೆಲುಗು ಸಿನಿಮಾ ಅಷ್ಟೆ ನಿರ್ದೇಶನ ಮಾಡಿದ್ದಾರೆ

  ಮಣಿರತ್ನಂ ಈವರೆಗೆ ಕೇವಲ ಒಂದು ತೆಲುಗು ಸಿನಿಮಾ ಅಷ್ಟೆ ನಿರ್ದೇಶನ ಮಾಡಿದ್ದಾರೆ. ಅದುವೇ ನಾಗಾರ್ಜುನ ನಟನೆಯ 'ಗೀತಾಂಜಲಿ'. ಅದರ ಬಳಿಕ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ 'ಗಾಯಂ' ಸಿನಿಮಾಕ್ಕೆ ಕತೆ ಬರೆದಿದ್ದರು. ಆದರೆ ಮಣಿರತ್ನಂ ನಿರ್ದೇಶನ ಮಾಡಿರುವ ಹಲವಾರು ಸಿನಿಮಾಗಳು ತೆಲುಗಿಗೆ ಡಬ್ ಆಗಿವೆ. ಮಣಿರತ್ನಂ ನಿರ್ದೇಶಿಸಿದ ಮೊದಲ ಸಿನಿಮಾ ಕನ್ನಡದ 'ಪಲ್ಲವಿ ಅನುಪಲ್ಲವಿ'.

  ಬಹುದೊಡ್ಡ ತಾರಾಗಣ ಹೊಂದಿರುವ 'ಪೊನ್ನಿಯಿನ್ ಸೆಲ್ವನ್'

  ಬಹುದೊಡ್ಡ ತಾರಾಗಣ ಹೊಂದಿರುವ 'ಪೊನ್ನಿಯಿನ್ ಸೆಲ್ವನ್'

  ಮಣಿರತ್ನಂ ಪ್ರಸ್ತುತ 'ಪೊನ್ನಿಯಿನ್ ಸೆಲ್ವನ್' ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣವು ಅಂತಿಮ ಹಂತದಲ್ಲಿದೆ. ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣ ಇದೆ. ಐಶ್ವರ್ಯಾ ರೈ, ವಿಕ್ರಂ, ಜಯಂ ರವಿ, ಅನುಷ್ಕಾ ಶೆಟ್ಟಿ, ಕಾರ್ತಿ, ತ್ರಿಷಾ, ಪ್ರಭು, ಶರತ್ ಕುಮಾರ್, ಶೋಭಿತಾ, ಪ್ರಕಾಶ್ ರೈ, ಕನ್ನಡಿಗ ಕಿಶೋರ್, ಮಲಯಾಳಂನ ಲಾಲ್ ಇನ್ನೂ ಹಲವು ದೊಡ್ಡ ನಟ-ನಟಿಯರೇ ಸಿನಿಮಾದಲ್ಲಿದ್ದಾರೆ. ಸಿನಿಮಾವು ಪೌರಾಣಿಕ ಕತೆಯನ್ನು ಹೊಂದಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಲಿದ್ದಾರೆ.

  ಪೊಲೀಸರ ಕರೆಗೆ ಬೆಚ್ಚಿ ಬಿದ್ದ ದರ್ಶನ್! | Darshan | Filmibeat Kannada
  ಮಹೇಶ್‌ ಬಾಬು ಮುಂದಿನ ಸಿನಿಮಾಗಳು

  ಮಹೇಶ್‌ ಬಾಬು ಮುಂದಿನ ಸಿನಿಮಾಗಳು

  ಇನ್ನು ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ನಂತರ ರಾಜಮೌಳಿ ಜೊತೆಗೆ ಹೊಸ ಸಿನಿಮಾ ಮಾಡಲಿದ್ದಾರೆ. ಅದರ ನಂತರ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Director Mani Ratnam said he will work with Mahesh Babu if he get suitable story. Mani Ratnam now directing 'Ponniyin Selvan' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X