RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?
ಜ್ಯೂ.ಎನ್‌ಟಿಆರ್, ರಾಮ್‌ಚರಣ್ ತೇಜ ಜೊತೆಯಾಗಿ ನಟಿಸುತ್ತಿರುವ, ರಾಜಮೌಳಿ ನಿರ್ದೇಶಿಸುತ್ತಿರುವ ತೆಲುಗಿನ ಬಹುನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್ ಬಿಡುಗಡೆಗಾಗಿ ದೇಶದಾದ್ಯಂತ ಸಿನಿ ಅಭಿಮಾನಿಗಳು ಕಾಯುತ್ತಿದ್ದಾರೆ.
Recommended Video
ಬಾಹುಬಲಿ ನಂತರ ದೇಶವೇ ತೆಲುಗು ಸಿನಿರಂಗದ ಕಡೆಗೆ ತಿರುಗಿನೋಡುವಂತೆ ಮಾಡುತ್ತಿರುವ ಸಿನಿಮಾ ಇದಾಗಿದೆ. ಸಿನಿಮಾ ಪಕ್ಕಾ ಹಿಟ್ ಎಂದು ಈಗಾಗಲೇ ಮಾತುಗಳು ಕೇಳಿಬರುತ್ತಿವೆ.
ಆದರೆ ತೆಲುಗು ಸಿನಿಮಾ ರಂಗದಲ್ಲಿರುವ ಕೆಲವು ಹಿರಿಯರೇ RRR ಸಿನಿಮಾ ಫ್ಲಾಪ್ ಆಗಲಿ ಎಂದು ಹಲುಬುತ್ತಿದ್ದಾರೆ. ಸಿನಿರಂಗದಲ್ಲಿ ಎಷ್ಟು ಮಾತ್ಸರ್ಯ ತುಂಬಿದೆ ಎಂಬುದನ್ನು ತೆಲುಗು ಸಿನಿರಂಗದ ಹಿರಿಯ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಹೇಳಿದ್ದಾರೆ.

ರಾಮ್‌ಗೋಪಾಲ್ ವರ್ಮ ಆಡಿಯೋ ಲೀಕ್
ರಾಮ್‌ಗೋಪಾಲ್ ವರ್ಮಾ ಮಾತನಾಡಿರುವ ಆಡಿಯೋ ಒಂದು ಲೀಕ್ ಆಗಿದ್ದು, ಅದರಲ್ಲಿ ತೆಲುಗು ಸಿನಿರಂಗದಲ್ಲಿ ಒಗ್ಗಟ್ಟು ಇಲ್ಲವೆಂದು, ಒಬ್ಬರ ಯಶಸ್ಸನ್ನು ಮತ್ತೊಬ್ಬರು ಇಲ್ಲಿ ಸಹಿಸುವುದಿಲ್ಲವೆಂದು ಹೇಳಿದ್ದಾರೆ. RRR ಸಿನಿಮಾ ಬಗ್ಗೆಯೂ ಆರ್‌ಜಿವಿ ಮಾತನಾಡಿದ್ದಾರೆ.

ಬಟ್ಟೆ ಬಿಚ್ಚಿ ಡಾನ್ಸ್ ಮಾಡ್ತಾರೆ
ಆರ್‌ಆರ್‌ಆರ್ ಸಿನಿಮಾ ಫ್ಲಾಪ್ ಆದರೆ ಟಾಲಿವುಡ್‌ನಲ್ಲಿ ಕೆಲವು ಮಂದಿ ಬಟ್ಟೆ ಬಿಚ್ಚಿ ಡಾನ್ಸ್ ಮಾಡುತ್ತಾರೆ. ಶಾಂಪೇನ್‌ನಲ್ಲಿ ಸ್ನಾನ ಮಾಡುತ್ತಾರೆ. ನಡುಬೀದಿಯಲ್ಲಿ ಡಿಸ್ಕೋ ಡಾನ್ಸ್ ಮಾಡುತ್ತಾರೆ. ರಾಜಮೌಳಿ ಸೋಲನ್ನು ಅಷ್ಟರ ಮಟ್ಟಿಗೆ ಸಂಭ್ರಮಿಸುತ್ತಾರೆ ಎಂದಿದ್ದಾರೆ ರಾಮ್‌ಗೋಪಾಲ್ ವರ್ಮಾ.

'ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅಸೂಯೆ ಇದೆ'
ತೆಲುಗು ಚಿತ್ರರಂಗದಲ್ಲಿರುವ ಅಸೂಯೆ ಬಗ್ಗೆಯೂ ಮಾತನಾಡಿರುವ ರಾಮ್‌ಗೋಪಾಲ್ ವರ್ಮಾ. ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅಸೂಯೆ ಇದೆ. ಅದರಲ್ಲೂ ರಾಜಮೌಳಿ ಗೆ ಸಿಕ್ಕ ಬಹುದೊಡ್ಡ ಯಶಸ್ಸಿನ ಬಗ್ಗೆ ಭಾರಿ ಅಸೂಯೆ ಇದೆ. ಅಸೂಯೆ ಮಾನವನ ಸಹಜ ಗುಣಗಳಲ್ಲಿ ಒಂದು ಎಂದು ಆರ್‌ಜಿವಿ ಹೇಳಿದ್ದಾರೆ.

ಎಲ್ಲರಲ್ಲೂ ಒಗ್ಗಟ್ಟಿಗೆ ಎಂಬುದು ಸುಳ್ಳು: ಆರ್‌ಜಿವಿ
ತೆಲುಗು ಸಿನಿರಂಗದಲ್ಲಿ ಎಲ್ಲರೂ ಒಂದು, ಎಲ್ಲರಲ್ಲೂ ಒಗ್ಗಟ್ಟಿಗೆ ಎಂದು ಹೇಳುವುದು ದೊಡ್ಡು ಸುಳ್ಳು. ಅವರೆಲ್ಲರೂ ನಿಜಜೀವನದಲ್ಲೂ ನಟಿಸುತ್ತಿದ್ದಾರೆ. ಒಬ್ಬ ಸ್ಟಾರ್‌ನ ಸಿನಿಮಾ ಫ್ಲಾಪ್ ಆದರೆ ಎಷ್ಟು ಸ್ಟಾರ್‌ಗಳು ಸಂಭ್ರಮಿಸುತ್ತಾರೆ ಗೊತ್ತೆ ಎಂದು ತೆಲುಗು ಚಿತ್ರರಂಗದ ಅಂತರಂಗ ಬಿಚ್ಚಿಟ್ಟಿದ್ದಾರೆ.


Click it and Unblock the Notifications











