ಸಲಾರ್, ಪ್ರಾಜೆಕ್ಟ್-K ನಡುವೆ ಪ್ರಭಾಸ್ ಹೊಸ ಸಿನಿಮಾ; ಸೆಪ್ಟೆಂಬರ್‌ನಲ್ಲೇ ಮುಹೂರ್ತ

ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ ನಟ ಪ್ರಭಾಸ್, ಈಗ ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ರಾಧೆ-ಶ್ಯಾಮ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸೌಂಡ್ ಮಾಡಲಿಲ್ಲ. ಆಗಸ್ಟ್‌ನಲ್ಲಿ ಬಿಡುಗಡೆ ಆಗಬೇಕಿದ್ದ 'ಆದಿಪುರುಷ್' ಸಿನಿಮಾ ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿದೆ. ಸದ್ಯ 'ಆದಿಪುರುಷ್' ಶೂಟಿಂಗ್ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಮತ್ತೊಂದ್ಕಡೆ ಪ್ರಭಾಸ್ 'ಸಲಾರ್' ಹಾಗೂ 'ಪ್ರಾಜೆಕ್ಟ್‌-ಕೆ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಸಿನಿಮಾಗಳ ನಡುವೆ ಮತ್ತೊಂದು ಸಿನಿಮಾ ಚಿತ್ರೀಕರಣಕ್ಕೆ ಡಾರ್ಲಿಂಗ್ ಸಿದ್ಧತೆ ನಡೆಸಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಬಾಲಿವುಡ್ ನಿರ್ಮಾಪಕರು ಕೂಡ ಪ್ರಭಾಸ್ ಕಾಲ್‌ಶೀಟ್‌ಗಾಗಿ ಕಾಯುವಂತಾಗಿದೆ. ಆದರೆ ಡಾರ್ಲಿಂಗ್ ಜೊತೆ ಸಿನಿಮಾ ಮಾಡುವ ಅವಕಾಶ ಅಷ್ಟು ಸುಲಭವಾಗಿ ಯಾರಿಗೂ ಸಿಗುವುದಿಲ್ಲ. ಮದುವೆ ಮಾಡಿಕೊಳ್ಳೋದನ್ನು ಬಿಟ್ಟು ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಮಾರುತಿ ನಿರ್ದೇಶನದ ಹೊಸ ಚಿತ್ರವನ್ನು ಸೆಪ್ಟೆಂಬರ್‌ನಲ್ಲೇ ಶುರು ಮಾಡಲು ಪ್ರಭಾಸ್ ಮನಸ್ಸು ಮಾಡಿದ್ದಾರೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ.

ಆರ್‌ಆರ್‌ಆರ್‌ ಸಿನಿಮಾ ನಿರ್ಮಾಪಕ ಡಿವಿವಿ ದಾನಯ್ಯ ನಿರ್ಮಾಣದ ಸೂಪರ್‌ನ್ಯಾಚುರಲ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಾರೆ ಅನ್ನೋ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈ ವಿಚಾರವನ್ನು ಯಾರು ಅಧಿಕೃತವಾಗಿ ಹೇಳಿರಲಿಲ್ಲ. ಇದೇ ಮೊದಲ ಬಾರಿಗೆ ನಿರ್ಮಾಪಕ ದಾನಯ್ಯ ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಸೆಪ್ಟೆಂಬರ್‌ನಲ್ಲೇ ನಮ್ಮ ಚಿತ್ರಕ್ಕೆ 10 ದಿನ ಕಾಲ್‌ಶೀಟ್ ಕೊಡಲು ಮುಂದಾಗಿದ್ದು, ಒಂದು ಶೆಡ್ಯೂಲ್ ಶೂಟಿಂಗ್ ಪ್ಲಾನ್ ನಡೀತಿದೆ ಅಂತ ನಿರ್ಮಾಪಕರು ಹೇಳಿದ್ದಾರೆ. ಭಾರತದಲ್ಲೇ ಚಿತ್ರೀಕರಣ ನಡೆಯಲಿದ್ದು, ನಾಯಕಿಯ ಹುಡುಕಾಟ ನಡೀತಿದೆ ಎಂದು ತಿಳಿಸಿದ್ದಾರೆ.

'ರಾಜಾ ಡೀಲಕ್ಸ್' ಥಿಯೇಟರ್ ಸುತ್ತಾ ಕಥೆ ಸುತ್ತಲಿದೆ

'ರಾಜಾ ಡೀಲಕ್ಸ್' ಥಿಯೇಟರ್ ಸುತ್ತಾ ಕಥೆ ಸುತ್ತಲಿದೆ

ಪ್ರಭಾಸ್, ಮಾರುತಿ ಜೋಡಿಯ ಚಿತ್ರಕ್ಕೆ 'ರಾಜಾ ಡೀಲಕ್ಸ್' ಫಿಕ್ಸ್ ಆಗಿದೆ ಅನ್ನೋ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಕೇಳಿ ಬರುತ್ತಿದೆ. ರಾಜಾ ಡೀಲಕ್ಸ್ ಹೆಸರಿನ ಥಿಯೇಟರ್ ಸುತ್ತಾ ಮಾರುತಿ ಸಿನಿಮಾ ಕಥೆ ಹೆಣೆದಿದ್ದಾರಂತೆ. ಅದೇ ಕಾರಣಕ್ಕೆ ಒಂದು ದೊಡ್ಡ ಥಿಯೇಟರ್ ಸೆಟ್ ಹಾಕುವ ಆಲೋಚನೆಯಲ್ಲಿದೆಯಂತೆ ಚಿತ್ರತಂಡ. ಕಾಮಿಡಿ ಜೊತೆಗೆ ಹಾರರ್‌ ಟಚ್ ಕೊಟ್ಟು ಸಿನಿಮಾ ಕಥೆ ಹೇಳಲು ಮಾರುತಿ ಸಿದ್ಧತೆ ನಡೆಸಿದ್ದಾರೆ.

ಪ್ರಭಾಸ್ ಕಮರ್ಷಿಯಲ್ ಸಿನಿಮಾ ಒಲವು

ಪ್ರಭಾಸ್ ಕಮರ್ಷಿಯಲ್ ಸಿನಿಮಾ ಒಲವು

ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ಬರೀ ಪ್ರಯೋಗಾತ್ಮಕ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. ಒಂದು ಪಕ್ಕಾ ಟಾಲಿವುಡ್ ಸ್ಟೈಲ್ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ. ಅದೇ ಕಾರಣಕ್ಕೆ ಮಾರುತಿ ಹೇಳಿದ ಕಥೆಯನ್ನು ಒಪ್ಪಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ಬಹಳ ದಿನಗಳಿಂದ ನಡೀತಿದೆ.

ಮಾರುತಿ ಅಂದರೆ ಎಂಟರ್‌ಟೈನ್‌ಮೆಂಟ್ ಸಿನಿಮಾ

ಮಾರುತಿ ಅಂದರೆ ಎಂಟರ್‌ಟೈನ್‌ಮೆಂಟ್ ಸಿನಿಮಾ

ಭಲೇ ಭಲೇ ಮಗಾಡಿವೋಯ್, ಬಾಬು ಬಂಗಾರಂ, ಶೈಲಜಾ ರೆಡ್ಡಿ ಅಲ್ಲುಡು ರೀತಿಯ ಪಕ್ಕಾ ಪೈಸಾ ವಸೂಲ್ ಸಿನಿಮಾಗಳನ್ನು ಮಾಡಿ ನಿರ್ದೇಶಕ ಮಾರುತಿ ಗೆದ್ದಿದ್ದಾರೆ. ಹಾಗಾಗಿ ಪ್ರಭಾಸ್- ಮಾರುತಿ ಕಾಂಬಿನೇಷನ್ ಸಿನಿಮಾ ಬಹಳ ಕುತೂಹಲ ಕೆರಳಿಸಿದೆ. ಡಿವಿವಿ ದಾನಯ್ಯ ನಿರ್ಮಾಪರಾಗಿರುವುದರಿಂದ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರೋದು ಗ್ಯಾರೆಂಟಿ.

ಚಿತ್ರಕ್ಕೆ ನಾಯಕಿಯರಾಗಿ ಮಾಳವಿಕಾ ಮೋಹನ್, ಅನುಷ್ಕಾ ಶೆಟ್ಟಿ

ಚಿತ್ರಕ್ಕೆ ನಾಯಕಿಯರಾಗಿ ಮಾಳವಿಕಾ ಮೋಹನ್, ಅನುಷ್ಕಾ ಶೆಟ್ಟಿ

ಕ್ರೇಜಿ ಕಾಂಬಿನೇಷನ್ ಚಿತ್ರಕ್ಕೆ ಮಾಳವಿಕಾ ಮೋಹನ್ ಮತ್ತು ಅನುಷ್ಕಾ ಶೆಟ್ಟಿ ನಾಯಕಿಯರಾಗಿ ಆಯ್ಕೆ ಆಗುವ ಬಗ್ಗೆ ಗುಸುಗುಸು ಕೇಳಿ ಬರುತ್ತಿದೆ. ಬಿಲ್ಲಾ, ಮಿರ್ಚಿ, ಬಾಹುಬಲಿ ಸೀರಿಸ್ ಸಿನಿಮಾಗಳಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ಒಟ್ಟಿಗೆ ನಟಿಸಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇಬ್ಬರು ಮದುವೆ ಆಗ್ತಾರೆ ಅನ್ನುವ ಚರ್ಚೆ ಕೂಡ ಆಗಿತ್ತು. ಇದೀಗ 'ರಾಜಾ ಡೀಲಕ್ಸ್' ಸಿನಿಮಾದಲ್ಲಿ ಸ್ವೀಟಿ ಮತ್ತೊಮ್ಮೆ ಡಾರ್ಲಿಂಗ್ ಜೋಡಿ ಆಗ್ತಾರೆ ಅನ್ನಲಾಗ್ತಿದೆ. ಅದೇ ನಿಜವಾದರೆ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರುವುದಿಲ್ಲ.

More from Filmibeat

English summary
Maruthi will direct Prabhas's Next movie, confirms Producer Danayya. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X