"ಪುರುಷರ ಲೈಂಗಿಕ ಸಾಮರ್ಥ್ಯ ತೀರಾ ಕಡಿಮೆ" ದೀಪಿಕಾ ಪಡುಕೋಣೆ ಹೇಳಿಕೆ ವೈರಲ್: ಹೇಳಿದ್ಯಾವಾಗ? ಎಲ್ಲಿ?
ಭಾರತೀಯ ಚಿತ್ರರಂಗದ ಬ್ಯೂಟಿಫುಲ್ ನಟಿ ದೀಪಿಕಾ ಪಡುಕೋಣೆ. ಹೆಚ್ಚಾಗಿ ಬಾಲಿವುಡ್ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದ ನಟಿ, ಈಗ ದಕ್ಷಿಣದ ಕಡೆಗೂ ಮುಖ ಮಾಡಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿ ಬಂದಿದ್ದಾರೆ.
ಈ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದ ನಟಿ ಮದುವೆ ಬಳಿಕ ಅಳೆದು ತೂಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್'ನಲ್ಲಿ ಬೋಲ್ಡ್ ಆಗಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದರು.
ಬಾಲಿವುಡ್ ಸ್ಟಾರ್ ಹೀರೊಯಿನ್‌ಗಳಲ್ಲಿ ದೀಪಿಕಾ ಪಡುಕೋಣೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ನಟಿಸಿದ ಕಾಂಬಿನೇಷನ್ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆದಿದೆ. ಈಕೆ ತೆರೆಮೇಲಷ್ಟೇ ಬೋಲ್ಡ್ ಅಲ್ಲ. ಬದಲಾಗಿ ತೆರೆ ಹಿಂದೆನೂ ಬೋಲ್ಡ್. ಅಂದರೆ, ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ನಟಿ. ಇಂತಹದ್ದೇ ಒಂದು ಹೇಳಿಕೆ ಕೊಟ್ಟು ಪುರುಷರ ಕೆಂಗಣ್ಣಿ ಗುರಿಯಾಗುತ್ತಿದ್ದಾರೆ.

"ಮ್ಯಾಗಿಗಿಂತ ಪುರುಷರು ದುಬಾರಿ" - ದೀಪಿಕಾ
ದೀಪಿಕಾ ಪಡುಕೋಣೆ ಕೊಟ್ಟ ಹೇಳಿಕೆಯೊಂದನ್ನು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಇದರ ಪ್ರಕಾರ, ದೀಪಿಕಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಅದೇ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಲೈಂಗಿಕತೆಯ ಬಗ್ಗೆ ದೀಪಿಕಾ ಹೇಳಿಕೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. "ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ತೀರಾ ಕಡಿಮೆ" ಎಂದು ದೀಪಿಕಾ ಪಡುಕೋಣೆ ಹೇಳಿದ ಮಾತು ವೈರಲ್ ಆಗಿದೆ. "ಪ್ರೀತಿಯಲ್ಲಿ ಮ್ಯಾಗಿಗಿಂತ ಪುರುಷರು ದುಬಾರಿ. ಮಹಿಳೆಯರಿಗೆ ಹೋಲಿಸಿದರೆ, ಈ ವಿಷಯದಲ್ಲಿ ಪುರುಷರ ಸಾಮರ್ಥ್ಯ ತೀರಾ ಕಡಿಮೆ" ಎಂದು ಅವರು ಕಾಮೆಂಟ್ ಮಾಡಿರೊ ಬಗ್ಗೆ ವರದಿಯಾಗಿದೆ.
ದೀಪಿಕಾ ಈ ಹೇಳಿಕೆ ಕೊಟ್ಟಿದ್ದೆಲ್ಲಿ?
ದೀಪಿಕಾ ಪಡುಕೋಣೆ ಹೇಳಿದ್ದಾರೆ ಎನ್ನಲಾದ ಈ ಹೇಳಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದರೆ, ದೀಪಿಕಾ ಯಾವ ಸಂದರ್ಶನದಲ್ಲಿ ಈ ಮಾತು ಹೇಳಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಯಾವಾಗ ಹೇಳಿದ್ದರು ಅನ್ನೋದನ್ನು ತಿಳಿಸಲಾಗಿಲ್ಲ. ಒರಿಜಿನಲ್ ಸೋರ್ಸ್ ಯಾವುದು? ಅನ್ನೋದು ವರದಿಯಲ್ಲಿ ಹೇಳಲಾಗಿಲ್ಲ.
ಟಾಲಿವುಡ್ ವರದಿಯಾಗಿರೋ ಈ ಹೇಳಿಕೆ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ದೀಪಿಕಾ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಆಕೆ ಹೇಳಿದ್ದು ನಿಜ ಎನ್ನುತ್ತಿದ್ದರೆ, ಮತ್ತೆ ಕೆಲವರು ನೆಗೆಟಿವ್ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ದೀಪಿಕಾ ವೈವಾಹಿಕ ಜೀವನದ ಬಗ್ಗೆಯೆಲ್ಲ ಪ್ರಶ್ನೆ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ಈಗ ಪುಲ್ ಬ್ಯುಸಿ
ದೀಪಿಕಾ ಪಡುಕೋಣೆ ಈಗಾಗಲೂ ಭಾರತದ ದುಬಾರಿ ನಟಿ. ಸದ್ಯ ಪ್ರಭಾಸ್ ಜೊತೆ 'ಪ್ರಾಜೆಕ್ಟ್ ಕೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸುವುದಕ್ಕೆ ದೀಪಿಕಾ 14 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಾಗ ಅಶ್ವಿನ್ ನಿರ್ದೇಶಿಸುತ್ತಿರುವ ಈ ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆಯಾಗಲಿದೆ.
'ಪಠಾಣ್' ರಿಲೀಸ್ ಆಗುತ್ತಿದ್ದಂತೆ ದೀಪಿಕಾಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದ ಬಳಿಕ ದೀಪಿಕಾ ನಂ 1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ಭಾರತದ ಬ್ಯುಸಿ ಹೀರೊಯಿನ್ಸ್ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ. ಸದ್ಯ ದೀಪಿಕಾ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ.


Click it and Unblock the Notifications











