For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ತಂಗಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಜೂ. ಎನ್‌ಟಿಆರ್ ಫ್ಯಾನ್ಸ್

  By Avani Malnad
  |

  ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿರುವ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. 'ನಾನು ಮಹೇಶ್ ಬಾಬು ಅಭಿಮಾನಿ. ಜೂ. ಎನ್‌ಟಿಆರ್ ಕುರಿತು ಅಷ್ಟಾಗಿ ತಿಳಿದಿಲ್ಲ. ಹೀಗಾಗಿ ನಾನು ಅವರ ಅಭಿಮಾನಿ ಅಲ್ಲ' ಎಂದು ಹೇಳಿರುವುದಕ್ಕೆ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಕೆರಳಿದ್ದಾರೆ.

  ಜೂ. ಎನ್‌ಟಿಆರ್ ಬಗ್ಗೆ ತಿಳಿದಿಲ್ಲ ಎಂದದ್ದಕ್ಕೆ ಅವರ ಅಭಿಮಾನಿಗಳು ಗರಂ ಆಗಿರುವುದರಲ್ಲಿ ವಿಶೇಷವೇನಿಲ್ಲ. ಆದರೆ ಅಭಿಮಾನಿಗಳು ಕೀಳು ಮಟ್ಟಕ್ಕೆ ಇಳಿದು ಮೀರಾ ಚೋಪ್ರಾ ಅವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಅತ್ಯಾಚಾರ ಮಾಡುವ ಬೆದರಿಕೆ ಹಾಕಿದ್ದಾರೆ. ಇದರಿಂದ ಮೀರಾ ಕಂಗೆಟ್ಟಿದ್ದಾರೆ. ಇಂತಹ ಫ್ಯಾನ್ಸ್ ಮೂಲಕ ನೀವು ಯಶಸ್ಸು ಗಳಿಸಿದ್ದೀರಾ? ಎಂದು ನೇರವಾಗಿ ಜೂ. ಎನ್‌ಟಿಆರ್ ಅವರನ್ನು ಪ್ರಶ್ನಿಸಿದ್ದಾರೆ. ಹಾಗೆಯೇ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಮುಂದೆ ಓದಿ...

  ಅಭಿಮಾನಿಗಳ ಪ್ರಶ್ನೆಗೆ ಉತ್ತರ

  ಅಭಿಮಾನಿಗಳ ಪ್ರಶ್ನೆಗೆ ಉತ್ತರ

  ಸೆಲೆಬ್ರಿಟಿಗಳು ಆಗಾಗ್ಗೆ ಅಭಿಮಾನಿಗಳ ಜತೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ನಡೆಸುತ್ತಾರೆ. ಅದರಂತೆ ಮೀರಾ ಚೋಪ್ರಾ ಕೂಡ ಮಂಗಳವಾರ ಟ್ವಿಟ್ಟರ್‌ನಲ್ಲಿ ಆಸ್ಕ್ ಮೀರಾ ಎಂಬ ಸೆಷನ್ ನಡೆಸಿದ್ದರು. ಅದರಲ್ಲಿ ಅನೇಕ ಭಾಷೆಗಳ ಸಿನಿಮಾ ಅಭಿಮಾನಿಗಳು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಅವುಗಳಿಗೆ ಮೀರಾ ನೇರ ಉತ್ತರ ನೀಡಿದ್ದರು.

  'ದಾಖಲೆ ಇರುವುದು ಡಿ ಬಾಸ್ ಹೆಸರಲ್ಲಿ': ಆಡಿಯೋ ಕಂಪೆನಿ ವಿರುದ್ಧ ದರ್ಶನ್ ಅಭಿಮಾನಿಗಳ ಆಕ್ರೋಶ'ದಾಖಲೆ ಇರುವುದು ಡಿ ಬಾಸ್ ಹೆಸರಲ್ಲಿ': ಆಡಿಯೋ ಕಂಪೆನಿ ವಿರುದ್ಧ ದರ್ಶನ್ ಅಭಿಮಾನಿಗಳ ಆಕ್ರೋಶ

  ಜೂ. ಎನ್‌ಟಿಆರ್ ಬಗ್ಗೆ ಗೊತ್ತಿಲ್ಲ

  ಜೂ. ಎನ್‌ಟಿಆರ್ ಬಗ್ಗೆ ಗೊತ್ತಿಲ್ಲ

  ಅಭಿಮಾನಿಗಳ ಪ್ರಶ್ನೆಯೊಂದಕ್ಕೆ 'ನನಗೆ ಮಹೇಶ್ ಬಾಬು ಇಷ್ಟ' ಎಂದಿದ್ದರು. ಹಾಗೆಯೇ ಜೂ. ಎನ್‌ಟಿಆರ್ ಕುರಿತಾದ ಪ್ರಶ್ನೆಗೆ ಮೀರಾ, 'ನನಗೆ ಅವರ ಬಗ್ಗೆ ಗೊತ್ತಿಲ್ಲ. ನಾನು ಅವರ ಫ್ಯಾನ್ ಅಲ್ಲ' ಎಂದಿದ್ದರು. ಇದರಿಂದ ಜೂ. ಎನ್‌ಟಿಆರ್ ಅಭಿಮಾನಿಗಳು ಮೀರಾ ವಿರುದ್ಧ ಮುಗಿಬಿದ್ದಿದ್ದಾರೆ. ಮೀರಾ ಅವರನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಲ್ಲದೆ, ಅತ್ಯಾಚಾರ ಎಸಗುವ, ಕೊಲೆ ಮಾಡುವ ಬೆದರಿಕೆಗಳನ್ನೂ ಹಾಕಿದ್ದಾರೆ.

  ಪೊಲೀಸರಿಗೆ ಮೀರಾ ದೂರು

  ಪೊಲೀಸರಿಗೆ ಮೀರಾ ದೂರು

  ಈ ನಿಂದನೆಗಳಿಗೆ ಪ್ರತಿಕ್ರಿಯಿಸಲು ಹೋಗದೆ ಮೀರಾ, ಅಂತಹ ಟ್ವೀಟ್‌ಗಳ ಸ್ಕ್ರೀನ್ ಶಾಟ್ ತೆಗೆದು ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ. ಮಾತ್ರವಲ್ಲದೆ, ಟ್ವಿಟ್ಟರ್‌ನಲ್ಲಿ ನೇರವಾಗಿ ಜೂ. ಎನ್‌ಟಿಆರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೀರಾ ವಿರುದ್ಧ ನಡೆದ ದಾಳಿಯನ್ನು ಖಂಡಿಸಿರುವ ಅನೇಕರು, 'ವಿ ಸಪೋರ್ಟ್ ಮೀರಾ ಚೋಪ್ರಾ' ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಅವರಿಗೆ ಬೆಂಬಲ ನೀಡಿದ್ದಾರೆ.

  ಯಶ್ ಮೇಲೆ ಅಂಬರೀಶ್ ಅಭಿಮಾನಿಗಳ ಮುನಿಸು: ಕಾರಣವೇನು?ಯಶ್ ಮೇಲೆ ಅಂಬರೀಶ್ ಅಭಿಮಾನಿಗಳ ಮುನಿಸು: ಕಾರಣವೇನು?

  ಇವರೆಲ್ಲ ಜೂ. ಎನ್‌ಟಿಆರ್ ಫ್ಯಾನ್ಸ್!

  ಇವರೆಲ್ಲ ಜೂ. ಎನ್‌ಟಿಆರ್ ಫ್ಯಾನ್ಸ್!

  ಹೈದರಾಬಾದ್ ಸಿಟಿ ಪೊಲೀಸರು ಹಾಗೂ ಸೈಬರ್ ಕ್ರೈಂ ಪೊಲೀಸರನ್ನು ಟ್ಯಾಗ್ ಮಾಡಿರುವ ಮೀರಾ, 'ಈ ಅಕೌಂಟ್‌ಗಳನ್ನು ರಿಪೋರ್ಟ್ ಮಾಡಲು ಬಯಸುತ್ತೇನೆ. ಅವರು ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಜತೆಗೆ ನಿಂದಿಸಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ದುರದೃಷ್ಟವಶಾತ್ ಇವರೆಲ್ಲರೂ ಜೂ.ಎನ್‌ಟಿಆರ್ ಅವರ ಫ್ಯಾನ್ಸ್ ಕ್ಲಬ್‌ನವರು' ಎಂದಿರುವ ಮೀರಾ, ಈ ಅಕೌಂಟ್‌ಗಳನ್ನು ಸಸ್ಪೆಂಡ್ ಮಾಡುವಂತೆ ಟ್ವಿಟ್ಟರ್‌ಗೆ ಮನವಿ ಮಾಡಿದ್ದಾರೆ.

  ಇಂತಹ ಅಭಿಮಾನಿಗಳಿಂದ ಗೆದ್ದಿದ್ದೀರಾ?

  ಇಂತಹ ಅಭಿಮಾನಿಗಳಿಂದ ಗೆದ್ದಿದ್ದೀರಾ?

  ಇಷ್ಟಕ್ಕೇ ಮೀರಾ ಸುಮ್ಮನಾಗಿಲ್ಲ. ಜೂ. ಎನ್‌ಟಿಆರ್ ಅವರನ್ನು ಟ್ಯಾಗ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಿಮಗಿಂತ ಮಹೇಶ್ ಬಾಬು ಅವರನ್ನು ಹೆಚ್ಚು ಇಷ್ಟಪಡುವ ಕಾರಣಕ್ಕೆ ನನ್ನನ್ನು ಬಿ**, ವೇಶ್ಯೆ ಮತ್ತು ಪಾರ್ನ್ ಸ್ಟಾರ್ ಎಂದು ಕರೆಯುತ್ತಾರೆ ಎಂದು ಭಾವಿಸಿರಲಿಲ್ಲ. ನಿಮ್ಮ ಅಭಿಮಾನಿಗಳು ನನ್ನ ಪೋಷಕರಿಗೆ ಅಂತಹ ಬಯಕೆಗಳನ್ನು ಕಳಿಸುತ್ತಾರೆ. ಅಂತಹ ಅಭಿಮಾನಿ ಹಿಂಬಾಲಕರನ್ನು ಹೊಂದಿರುವ ನೀವು ಯಶಸ್ವಿಯಾಗಿದ್ದೇನೆ ಎಂದು ಭಾವಿಸುತ್ತೀರಾ?ನೀವು ನನ್ನ ಟ್ವೀಟ್‌ಅನ್ನು ನಿರ್ಲಕ್ಷಿಸುವುದಿಲ್ಲ ಎಂದು ನಂಬಿದ್ದೇನೆ' ಎಂದಿದ್ದಾರೆ.

  ಅವಕಾಶ ಕೊಡಿಸುತ್ತೇನೆಂದು ರೇಪ್ ಮಾಡಲು ಯತ್ನಿಸಿದ್ದ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆಅವಕಾಶ ಕೊಡಿಸುತ್ತೇನೆಂದು ರೇಪ್ ಮಾಡಲು ಯತ್ನಿಸಿದ್ದ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆ

  ಮಹಿಳೆಯರೇ ಹುಷಾರಾಗಿರಿ!

  ಮಹಿಳೆಯರೇ ಹುಷಾರಾಗಿರಿ!

  ಮತ್ತೊಂದು ಟ್ವೀಟ್ ಮಾಡಿರುವ ಮೀರಾ, 'ಯಾರದ್ದೋ ಒಬ್ಬರ ಅಭಿಮಾನಿಯಾಗದೆ ಇರುವುದು ಅಪರಾಧ ಎಂದು ನನಗೆ ಗೊತ್ತಿರಲಿಲ್ಲ. ಎಲ್ಲ ಮಹಿಳೆಯರಿಗೂ ಗಟ್ಟಿಯಾಗಿ ಇದನ್ನು ಹೇಳಲು ಬಯಸುತ್ತೇನೆ, ನೀವು ಜೂ.ಎನ್‌ಟಿಆರ್ ಅವರ ಅಭಿಮಾನಿಯಾಗಿರದೆ ಇದ್ದರೆ ನೀವು ಅತ್ಯಾಚಾರಕ್ಕೆ ಒಳಗಾಗಬಹುದು, ಕೊಲೆಯಾಗಬಹುದು, ಸಾಮೂಹಿಕ ರೇಪ್‌ಗೆ ಒಳಗಾಗಬಹುದು, ಅವರ ಅಭಿಮಾನಿಗಳು ಹೇಳಿದಂತೆ ನಿಮ್ಮ ಪೋಷಕರನ್ನೂ ಸಾಯಿಸಬಹುದು. ತಮ್ಮ ಆರಾಧ್ಯ ವ್ಯಕ್ತಿಯ ಹೆಸರನ್ನು ಅವರು ಸಂಪೂರ್ಣವಾಗಿ ಕೆಡಿಸುತ್ತಿದ್ದಾರೆ' ಎಂದು ಹರಿಹಾಯ್ದಿದ್ದಾರೆ.

  ಗಾಯಕಿ ಚಿನ್ಮಯಿ ಶ್ರೀಪಾದ ಬೆಂಬಲ

  ಗಾಯಕಿ ಚಿನ್ಮಯಿ ಶ್ರೀಪಾದ ಬೆಂಬಲ

  ಮೀರಾ ಚೋಪ್ರಾ ಅವರ ಬೆಂಬಲಕ್ಕೆ ನಿಂತಿರುವ ಗಾಯಕಿ ಚಿನ್ಮಯಿ ಶ್ರೀಪಾದ, ಒಂದು ಸಿನಿಮಾ ನನಗೆ ಇಷ್ಟ ಎಂದು ಹೇಳುವುದನ್ನೂ ನಾನು ನಿಲ್ಲಿಸಿದ್ದೇನೆ. ಏಕೆಂದರೆ ಜನರು ಅದನ್ನೂ ನಿಂದಿಸಲು ಬಳಸಿಕೊಳ್ಳುತ್ತಾರೆ. ನನಗೆ ದಿನವೂ ರೇಪ್ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಚಿನ್ಮಯಿ ಶ್ರೀಪಾದ, ಮಿಟೂ ಅಭಿಯಾನದ ವೇಳೆ ಸುದ್ದಿಯಾಗಿದ್ದರು. ಗಾಯಕ ರಘು ದೀಕ್ಷಿತ್, ಕವಿ ವೈರಮುತ್ತು ಸೇರಿದಂತೆ ಅನೇಕರ ಹೆಸರನ್ನು ಅವರು ಬಹಿರಂಗಪಡಿಸಿದ್ದರು.

  English summary
  Actress Meera Chopra has received abusive threats by Jr NTR fans for saying she doesn't know that actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X