For Quick Alerts
  ALLOW NOTIFICATIONS  
  For Daily Alerts

  'ಹೆಣ್ಣನ್ನು ಗೌರವಿಸುವುದು ತಾರಕ್‌ಗೆ ಗೊತ್ತು': ಜೂ. ಎನ್‌ಟಿಆರ್ ಬೆಂಬಲಕ್ಕೆ ಬಂದ ನಟಿ

  |

  ಖ್ಯಾತ ನಟ ಜೂನಿಯರ್ ಎನ್‌ಟಿಆರ್ ತಮ್ಮ ಅಭಿಮಾನಿಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿರುವ ಆರೋಪ ಜೂ. ಎನ್‌ಟಿಆರ್ ಅಭಿಮಾನಿಗಳ ಮೇಲೆ ಇದೆ. ಈ ಬಗ್ಗೆ ಮೀರಾ ಚೋಪ್ರಾ ಪೊಲೀಸರಿಗೆ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.

  777 Charlie Rakshit shetty character revealed | Teaser Breakdown | Pushkar Mallikarjunaiah

  ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಮೀರಾ ಚೋಪ್ರಾ, ತಮಗೆ ಮಹೇಶ್ ಬಾಬು ಎಂದರೆ ಇಷ್ಟ. ಆದರೆ ಜೂ. ಎನ್‌ಟಿಆರ್ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದರು. ಇದು ಜೂ.ಎನ್‌ಟಿಆರ್ ಅಭಿಮಾನಿಗಳನ್ನು ಕೆರಳಿಸಿತ್ತು. ಅಷ್ಟೇ ಅಲ್ಲ, ಟ್ವಿಟ್ಟರ್‌ನಲ್ಲಿಯೇ ಅವರಿಗೆ ಅತ್ಯಾಚಾರ, ಕೊಲೆಬೆದರಿಕೆ ಹಾಕಿದ್ದರು. ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದರು. ಇದರ ಬಗ್ಗೆ ಮೀರಾ ಚೋಪ್ರಾ ಸೇರಿದಂತೆ ಅನೇಕರು ಜೂ. ಎನ್‌ಟಿಆರ್ ಗಮನಕ್ಕೆ ತಂದಿದ್ದರೂ, ಅವರು ಘಟನೆ ಕುರಿತು ಇದುವರೆಗೂ ಮಾತನಾಡಿಲ್ಲ. ಮುಂದೆ ಓದಿ...

  ಎನ್‌ಟಿಆರ್ ಅಭಿಮಾನಿಗಳ ವಿರುದ್ಧ ಸಿಎಂ ಗೆ ದೂರು ನೀಡಿದ ನಟಿಎನ್‌ಟಿಆರ್ ಅಭಿಮಾನಿಗಳ ವಿರುದ್ಧ ಸಿಎಂ ಗೆ ದೂರು ನೀಡಿದ ನಟಿ

  ಅವರಿಗೆ ಗೌರವಿಸುವುದು ಗೊತ್ತು

  ಅವರಿಗೆ ಗೌರವಿಸುವುದು ಗೊತ್ತು

  ಈ ಎಲ್ಲ ವಿವಾದಗಳ ನಡುವೆ ಜೂ. ಎನ್‌ಟಿಆರ್ ಜತೆ 2011ರಲ್ಲಿ ಊಸರವಳ್ಳಿ ಚಿತ್ರದಲ್ಲಿ ನಟಿಸಿದ್ದ ಪಾಯಲ್ ಘೋಷ್, ಜೂ. ಎನ್‌ಟಿಆರ್ ಬೆಂಬಲಕ್ಕೆ ಬಂದಿದ್ದಾರೆ. ನಟಿಯರನ್ನು ಹೇಗೆ ಗೌರವಿಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ ಎನ್ನುವ ಮೂಲಕ ಅಭಿಮಾನಿಗಳು ಮಾಡಿರುವ ಕಿತಾಪತಿಯಿಂದಾಗಿ ಜೂ.ಎನ್‌ಟಿಆರ್ ಅವರನ್ನು ದೂಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

  ಎನ್‌ಟಿಆರ್ ಅವರನ್ನು ನೋಡಿದ್ದೇನೆ

  ಎನ್‌ಟಿಆರ್ ಅವರನ್ನು ನೋಡಿದ್ದೇನೆ

  'ನಾವು ಬ್ಯಾಂಕಾಕ್‌ನಲ್ಲಿ ಒಮ್ಮೆ ಹಾಡಿನ ಚಿತ್ರೀಕರಣ ಮಾಡುತ್ತಿದ್ದೆವು. ನಾನು ಬಟ್ಟೆ ಬದಲಿಸಬೇಕಾಗಿತ್ತು. ಹೀಗಾಗಿ ನನ್ನ ತಂಡ ಸಣ್ಣದೊಂದು ಟೆಂಟ್ ತಯಾರಿಸಿತ್ತು. ಅಲ್ಲಿಯೇ ನಾನು ಬಟ್ಟೆ ಬದಲಿಸಿದ್ದೆ. ಆದರೆ ಇದು ಜೂ ಎನ್‌ ಟಿಆರ್ ಅವರಲ್ಲಿ ಬೇಸರ ಮೂಡಿಸಿತ್ತು. ರಸ್ತೆಯಲ್ಲಿ ಹೆಣ್ಣುಮಕ್ಕಳು ಬಟ್ಟೆ ಬದಲಿಸುವಂತೆ ಆಗಬಾರದು ಎನ್ನುವುದು ಅವರ ಅನಿಸಿಕೆಯಾಗಿತ್ತು. ಮಹಿಳೆಯರನ್ನು ಗೌರವಿಸುವುದು ಅವರಿಗೆ ಗೊತ್ತು. ಅದನ್ನು ಅವರು ಮಾಡುತ್ತಿದ್ದಾರೆ' ಎಂದು ಪಾಯಲ್ ಹೇಳಿದ್ದಾರೆ.

  ಪ್ರಿಯಾಂಕಾ ಚೋಪ್ರಾ ತಂಗಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಜೂ. ಎನ್‌ಟಿಆರ್ ಫ್ಯಾನ್ಸ್ಪ್ರಿಯಾಂಕಾ ಚೋಪ್ರಾ ತಂಗಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಜೂ. ಎನ್‌ಟಿಆರ್ ಫ್ಯಾನ್ಸ್

  ಪೋಷಕ ಪಾತ್ರದಲ್ಲಿ ನಟನೆ

  ಪೋಷಕ ಪಾತ್ರದಲ್ಲಿ ನಟನೆ

  ಪಾಯಲ್ ಘೋಷ್ ಅವರು ಚಂದ್ರಶೇಖರ್ ಯೆಲೆಟಿ ಅವರ 'ಪ್ರಯಾಣಂ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ಊಸರವಳ್ಳಿ ಮತ್ತು ಮಿ. ರಾಸ್ಕಲ್ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲ ನಟಿಸಿದ್ದ ಅವರು, ನಂತರ ಬಾಲಿವುಡ್‌ಗೆ ತೆರಳಿದ್ದರು.

  ಜೂ. ಎನ್‌ಟಿಆರ್ ಮೌನ

  ಜೂ. ಎನ್‌ಟಿಆರ್ ಮೌನ

  ಜೂ. ಎನ್‌ಟಿಆರ್ ಅಭಿಮಾನಿಗಳು ತಮಗೆ ಹಾಕಿರುವ ಬೆದರಿಕೆಗಳ ಸ್ಕ್ರೀನ್ ಶಾಟ್ ತೆಗೆದು ಹಂಚಿಕೊಳ್ಳುತ್ತಿರುವ ಮೀರಾ, ಅದನ್ನು ಪೊಲೀಸರಿಗೂ ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸಹಾಯದಿಂದ ಮೀರಾ ದೂರು ಸಲ್ಲಿಸಿದ್ದಾರೆ. ಆದರೆ, ಇದರ ಬಗ್ಗೆ ಇದುವರೆಗೂ ಜೂ. ಎನ್‌ಟಿಆರ್ ಮೌನ ಮುರಿಯದೆ ಇರುವುದು ಅಚ್ಚರಿ ಮೂಡಿಸಿದೆ.

  ಪ್ರಿಯಾಂಕಾ ಚೋಪ್ರಾ ಚಿಕ್ಕಪ್ಪನಿಗೆ ಚಾಕು ತೋರಿಸಿ ದೋಚಿದ ದುಷ್ಕರ್ಮಿಗಳುಪ್ರಿಯಾಂಕಾ ಚೋಪ್ರಾ ಚಿಕ್ಕಪ್ಪನಿಗೆ ಚಾಕು ತೋರಿಸಿ ದೋಚಿದ ದುಷ್ಕರ್ಮಿಗಳು

  English summary
  Meera Chopra allegation against Jr NTR fans: Jr NTR's co-star in Oosaravalli movie Payal Ghosh said Tarak knows how to respect women.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X