Mega 156: ಮೆಗಾಸ್ಟಾರ್ ಚಿರಂಜೀವಿ- ಬಿಂಬಿಸಾರ ನಿರ್ದೇಶಕನ ಸಿನಿಮಾ ಈಗ 'ವಿಶ್ವಂಭರ'
ಬಿಂಬಿಸಾರ ಖ್ಯಾತಿಯ ನಿರ್ದೇಶಕ ವಸಿಷ್ಠ ನಿರ್ದೇಶನದ ಮುಂಬರುವ ಪೌರಾಣಿಕ ಫ್ಯಾಂಟಸಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೆಲಸ ಮಾಡಲಿದ್ದಾರೆ ಎಂದು ಈ ಹಿಂದೆಯೇ ಘೋಷಿಸಲಾಗಿತ್ತು. ಇದಕ್ಕೆ 'ಮೆಗಾ 156' ಎಂದು ತಾತ್ಕಲಿಕವಾಗಿ ಹೆಸರಿಡಲಾಗಿತ್ತು. ಈಗ ಚಿತ್ರತಂಡ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ವಸಿಷ್ಟ ಕಾಂಬಿನೇಷನ್‌ನ ಸಿನಿಮಾಕ್ಕೆ 'ವಿಶ್ವಂಭರ' ಎಂದು ಕರೆಯಲಾಗಿದೆ. ಈ ಚಿತ್ರವು 2025 ರ ಸಂಕ್ರಾಂತಿಗೆ ಚಿತ್ರಮಂದಿರಗಳಲ್ಲಿ ಬರಲಿದೆ ಎಂದೂ ಘೋಷಿಸಿದ್ದಾರೆ. 'ವಾಲ್ಟೇರ್ ವೀರಯ್ಯ' ಸಿನಿಮಾ ಬಿಡುಗಡೆಯಾದ ಎರಡು ವರ್ಷಗಳ ಬಳಿಕ ವಿಶ್ವಂಭರ ಬಿಡುಗಡೆಯಾಗಲಿದೆ.

'ವಾಲ್ಟೇರ್ ವೀರಯ್ಯ' ಸಿನಿಮಾ ಕಳೆದ ವರ್ಷ 2023 ರಲ್ಲಿ ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಕ್ಕೆ ಲಗ್ಗೆಯಿಟ್ಟಿತ್ತಯ. ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿಯೂ ಅಂತಹ ಕಮಾಲ್ ಮಾಡಲಿಲ್ಲ. ಈಗ ಮತ್ತೆ 'ವಿಶ್ವಂಭರ' ಮೂಲಕ ಚಿರು ಮತ್ತೊಂದು ದೊಡ್ಡ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿರಂಜಿವಿ ಮತ್ತು ನಟಿ ಶ್ರೀದೇವಿ ನಟಿಸಿದ್ದ ಸೂಪರ್ ಹಿಟ್ 'ಜಗದೇಕ ವೀರುಡು ಅತಿಲೋಕ ಸುಂದರಿ' ಸಿನಿಮಾದ ಬಳಿಕ ಚಿರಂಜೀವಿ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ವಿಶ್ವಂಭರ' ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿಯಾಗಿದೆ. ಯುವಿ ಕ್ರಿಯೇಷನನ್ಸ್‌ನ ವಿಕ್ರಮ್, ವಂಶಿ ಮತ್ತು ಪ್ರಮೋದ್ ಹಣ ಹಾಕುತ್ತಿದ್ದು, ಚಿರಂಜೀವಿ ವೃತ್ತಿ ಜೀವನದಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.
ಕೆ ರಾಘವೇಂದ್ರ ರಾವ್ ಅವರ ಜಗದೀಕ ವೀರುಡು ಅತಿಲೋಕ ಸುಂದರಿ (1991) ನಲ್ಲಿ ಕೊನೆಯದಾಗಿ ಪೌರಾಣಿಕ ಫ್ಯಾಂಟಸಿ ಚಿತ್ರದಲ್ಲಿ ಚಿರಂಜೀವಿ ಕಾಣಿಸಿಕೊಂಡಿದ್ದರು. ಆ ವೈಭವವನ್ನು ಮರಳಿ ತರುವುದಾಗಿ ಹಿಂದಿನ ಸಂದರ್ಶನಗಳಲ್ಲಿ ನಿರ್ದೇಶಕ ವಸಿಷ್ಠ ಘೋಷಿಸಿದ್ದಾರೆ. ಚಿರಂಜೀವಿ ಅವರ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ವಿಶ್ವಂಭರ ಸಿದ್ಧವಾಗಿದೆ.
ಈಗಾಗಲೇ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮರೆಡುಮಿಲ್ಲಿ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಟ ಚಿರಂಜೀವಿ ಇಲ್ಲದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ವಿಶ್ವಂಭರ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣವಿದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಚಿರಂಜೀವಿ ಹಿರಿಯ ಮಗಳು, ವಸ್ತ್ರ ವಿನ್ಯಾಸಕಿ ಮತ್ತು ನಿರ್ಮಾಪಕಿ ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಕೋಟಗಿರಿ ವೆಂಕಟೇಶ್ವರರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಚಿತ್ರಕ್ಕೆ ಸಂಕಲನಕಾರರು.
ಶ್ರೀ ಶಿವಶಕ್ತಿ ದತ್ತ ಮತ್ತು ಚಂದ್ರಬೋಸ್ ಗೀತರಚನೆಕಾರರಾಗಿದ್ದರೆ, ಶ್ರೀನಿವಾಸ್ ಗವಿರೆಡ್ಡಿ, ಗಂಟಾ ಶ್ರೀಧರ್, ನಿಮ್ಮಗಡ್ಡ ಶ್ರೀಕಾಂತ್ ಮತ್ತು ಮಯೂಖ್ ಆದಿತ್ಯ ಅವರು ಚಿತ್ರಕಥೆ ಸಹಾಯಕರಾಗಿದ್ದಾರೆ. 2025 ರ ಸಂಕ್ರಾಂತಿ 'ವಿಶ್ವಂಭರ' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.
ಯುವಿ ಕ್ರಿಯೇಷನ್ಸ್ ಕಳೆದ ವರ್ಷ ಅನುಷ್ಕಾ ಶೆಟ್ಟಿ ಮತ್ತು ನವೀನ್ ಪೋಲಿಶೆಟ್ಟಿ ನಟಿಸಿದ್ದ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಮೂಲಕ ಹಿಟ್ ಗಳಿಸಿದೆ. ಗಮನಿಸಬೇಕಾದ ಅಂಶವೆಂದರೆ, ಯುವಿ ಕ್ರಿಯೇಷನ್ಸ್‌ನ ವಂಶಿ ಮತ್ತು ಪ್ರಮೋದ್ ಇತ್ತೀಚೆಗೆ ನಟ ರಾಮ್ ಚರಣ್ ಜೊತೆ ಪಾಲುದಾರಿಕೆ ಹೊಂದಿದ್ದು, ವಿ ಮೆಗಾ ಕ್ರಿಯೇಷನ್ಸ್ ಎಂಬ ಹೊಸ ಪ್ರೊಡಕ್ಷನ್ ಬ್ಯಾನರ್ ಅನ್ನು ರಚಿಸಿದ್ದಾರೆ. ರಾಮ್ ಚರಣ್ ಈ ಹಿಂದೆ ತಮ್ಮ ತಂದೆ ಚಿರಂಜೀವಿ ಅವರ ಖೈದಿ 150 (2017), ಸೈರಾ ನರಸಿಂಹ ರೆಡ್ಡಿ (2019) ಮತ್ತು ಆಚಾರ್ಯ (2022) ಚಿತ್ರಗಳನ್ನು ನಿರ್ಮಿಸಿದ್ದಾರೆ.


Click it and Unblock the Notifications










