ರಾಮ್ ಚರಣ್ ಹುಟ್ಟುಹಬ್ಬಕ್ಕೆ ವಿಶ್ ಮಾಡ್ಲಿಲ್ಲ ಅಲ್ಲು ಅರ್ಜುನ್; ಸ್ವಂತ ಮಾವನ ಮಗನ ಯಶಸ್ಸನ್ನೇ ಸಹಿಸುತ್ತಿಲ್ವಾ?
ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಪ್ರಸ್ತುತ ತೆಲುಗು ಚಿತ್ರರಂಗದ ಸ್ಟಾರ್ ನಟರು. ತೆಲುಗು ಸಿನಿಮಾಗಳ ಮೂಲಕವೇ ಪ್ಯಾನ್ ಇಂಡಿಯಾ ಹಂತವನ್ನು ತಲುಪಿರುವ ಈ ಇಬ್ಬರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲು ಅರ್ಜುನ್ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾದರೆ, ರಾಮ್ ಚರಣ್ ಮೆಗಾ ಸ್ಟಾರ್ ಚಿರಂಜೀವಿ ಅವರ ಪುತ್ರ.
ಅಲ್ಲು ಅರವಿಂದ್ ಅವರ ಸೋದರಿ ಸುರೇಖ ಕೊನಿಡೆಲಾ ಅವರನ್ನೇ ಮೆಗಾಸ್ಟಾರ್ ಚಿರಂಜೀವಿ ವಿವಾಹವಾಗಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಸಂಬಂಧಿಗಳಾಗಿದ್ದಾರೆ. ಇನ್ನು ನಿನ್ನೆ ( ಮಾರ್ಚ್ 27 ) ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಹುಟ್ಟುಹಬ್ಬವಿದ್ದರೆ, ಇಂದು ( ಮಾರ್ಚ್ 28 ) ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರರಂಗ ಪ್ರವೇಶಿಸಿ ಇಪ್ಪತ್ತು ವರ್ಷಗಳನ್ನು ಪೂರೈಸಿದ್ದಾರೆ.

ಅಲ್ಲು ಅರ್ಜುನ್ ತಾನು ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳನ್ನು ಪೂರೈಸುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇಂದು ನಾನು ಇಪ್ಪತ್ತು ವರ್ಷಗಳನ್ನು ಇಂಡಸ್ಟ್ರಿಯಲ್ಲಿ ಪೂರೈಸಿದ್ದು, ನಿಮ್ಮ ಪ್ರೀತಿಯಿಂದ ಆಶೀರ್ವದಿಸಲ್ಪಟ್ಟಿದ್ದೇನೆ, ಇಂಡಸ್ಟ್ರಿಯಲ್ಲಿನ ಎಲ್ಲಾ ಜನರಿಗೂ ನನ್ನ ಕೃತಜ್ಞತೆಗಳು. ನಾನಿವತ್ತು ಏನೇ ಆಗಿದ್ದರೂ ಅದಕ್ಕೆಲ್ಲಾ ಅಭಿಮಾನಿಗಳು, ಆರಾಧಕರು ಹಾಗೂ ಪ್ರೇಕ್ಷಕರು ನೀಡಿದ ಪ್ರೀತಿಯೇ ಕಾರಣ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಕಂಡ ಕೂಡಲೇ ರಶ್ಮಿಕಾ ಮಂದಣ್ಣ ಹಾಗೂ ಅಭಿಷೇಕ್ ಬಚ್ಚನ್ ರೀತಿಯ ಹಲವಾರು ಸ್ಟಾರ್‌ಗಳು ಅಲ್ಲು ಅರ್ಜುನ್‌ಗೆ ಶುಭ ಕೋರಿದ್ದರೆ, ರಾಮ್ ಚರಣ್ ಅಭಿಮಾನಿಗಳು ಮಾತ್ರ ಅಲ್ಲು ಅರ್ಜುನ್ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಕಾರಣ ನಿನ್ನೆ ರಾಮ್ ಚರಣ್ ಹುಟ್ಟುಹಬ್ಬದ ಸಲುವಾಗಿ ಅಲ್ಲು ಅರ್ಜುನ್ ವಿಶ್ ಮಾಡದೇ ಇರುವುದು. ಹೌದು, ಇಂದು ತನ್ನ ಸಿನಿಮಾ ಕ್ಷೇತ್ರದ ವಾರ್ಷಿಕೋತ್ಸವಕ್ಕೆ ಸ್ವತಃ ಪೋಸ್ಟ್ ಹಾಕಿಕೊಳ್ಳಲು ಸಮಯ ಇರುವ ಅಲ್ಲು ಅರ್ಜುನ್‌ಗೆ ನಿನ್ನೆ ನಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಸಮಯ ಇರಲಿಲ್ವ ಎಂದು ಕೆಟ್ಟದಾಗಿಯೇ ಕಾಮೆಂಟ್ ಹಾಕಿದ್ದಾರೆ. ಸ್ವಂತ ಮಗನ ಯಶಸ್ಸನ್ನೇ ಅಲ್ಲು ಅರ್ಜುನ್‌ಗೆ ಸಹಿಸಲಾಗ್ತಿಲ್ವಾ ಎಂದು ಟ್ರೋಲ್‌ಗಳಾಗುತ್ತಿವೆ.
ಇನ್ನು ಸಿನಿ ರಸಿಕರು ಈ ಕುರಿತು ಪ್ರತಿಕ್ರಿಯಿಸಿದ್ದು, ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಮಧ್ಯ ಬಿರುಕು ಮೂಡಿರಬಹುದು, ಎಲ್ಲವೂ ಸರಿ ಇದ್ದಿದ್ದರೆ ಸ್ವಂತ ಮಾವನ ಮಗನ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ವಿಶ್ ಮಾಡದೇ ಇರುತ್ತಿದ್ರಾ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಕರೆ ಮಾಡಿ ವಿಶ್ ಮಾಡಿರಬಹುದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲೇಬೇಕೆಂಬ ನಿಯಮವೇನಿಲ್ಲ, ವಿಶ್ ಮಾಡದಿದ್ದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂದೇನಿಲ್ಲ ಎಂದಿದ್ದಾರೆ.
ಇನ್ನು ರಾಮ್ ಚರಣ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಲ್ಲು ಅರ್ಜುನ್ ಅವರನ್ನು ಫಾಲೋ ಮಾಡುತ್ತಿದ್ದಾರೆ ಹಾಗೂ ಅಲ್ಲು ಅರ್ಜುನ್ ತಮ್ಮ ಅಲ್ಲು ಸಿರೀಶ್ ಅವರನ್ನೂ ಸಹ ಫಾಲೋ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಮಾತ್ರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಮ್ ಚರಣ್ ಅವರನ್ನು ಫಾಲೋ ಮಾಡುತ್ತಿಲ್ಲ. ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾ ಅವರನ್ನು ಹೊರತುಪಡಿಸಿ ಉಳಿದ ಯಾರನ್ನೂ ಸಹ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿಲ್ಲ.
ಅಲ್ಲು ಅರ್ಜುನ್ ನಡೆ ಮೆಗಾ ಫ್ಯಾನ್ಸ್ ಬಳಗದಲ್ಲಿ ಕೋಪ ಉಂಟು ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ತಮ್ಮದೇ ಚಿತ್ರ ಸರೈನೋಡು ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಮಾತನಾಡುವಾಗ ನೆರೆದಿದ್ದ ಅಭಿಮಾನಿಗಳು ಜೈ ಪವರ್ ಸ್ಟಾರ್ ಎಂದು ಕೂಗತೊಡಗಿದರು. ಈ ಮೂಲಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಮಾತನಾಡಿ ಎಂದು ಅಭಿಮಾನಿಗಳು ಪಟ್ಟುಹಿಡಿದಿದ್ದರು. ಆದರೆ ಅಲ್ಲು ಅರ್ಜುನ್ 'ಚೆಪ್ಪನು ಬ್ರದರ್' ( ಹೇಳುವುದಿಲ್ಲ ಬ್ರದರ್) ಎಂದು ಪ್ರತಿಕ್ರಿಯಿಸುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.


Click it and Unblock the Notifications











