ಒಡೆಯಿತೇ ಮೆಗಾ ಕುಟುಂಬ? ಅಲ್ಲು ಅರ್ಜುನ್ ವಿರುದ್ಧ ತಿರುಗಿ ಬಿದ್ದ ಮೆಗಾ ಫ್ಯಾನ್ಸ್
ತೆಲುಗು ಚಿತ್ರರಂಗವನ್ನು ಆಳುತ್ತಿರುವುದು ಎರಡು ಮುಖ್ಯ ಕುಟುಂಬ ಅದುವೇ ಮೆಗಾ ಕುಟುಂಬ ಹಾಗೂ ನಂದಮೂರಿ ಕುಟುಂಬ. ಈ ಎರಡೂ ಕುಟುಂಬಗಳಲ್ಲಿ ಮೆಗಾ ಕುಟುಂಬದ್ದೇ ಮೇಲುಗೈ ಎನ್ನಬಹುದು.
ಮೆಗಾಸ್ಟಾರ್ ಚಿರಂಜೀವಿ ಇಂದ ಆರಂಭಿಸಿ ಹಲವು ದೊಡ್ಡ ಸ್ಟಾರ್ ನಟರು ಮೆಗಾ ಕುಟುಂಬದಲ್ಲಿ ಇದ್ದಾರೆ. ಪವನ್ ಕಲ್ಯಾಣ್, ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ವರುಣ್ ತೇಜ್, ಸಾಯಿ ಧರಮ್ ತೇಜ್ ಇನ್ನೂ ಕೆಲವರು. ನಾಯಕ ನಟರು ಹೆಚ್ಚಿನ ಸಂಖ್ಯೆಯಲ್ಲಿರುವ ಕುಟುಂಬ ಇದು.
ಆದರೆ ಈಗ ಈ ಮೆಗಾ ಕುಟುಂಬ ಒಡೆದಿಯಾ? ಅಥವಾ ಬಿರುಕು ಮೂಡಿದೆಯಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಅಲ್ಲು ಅರ್ಜುನ್. ಮೆಗಾ ಫ್ಯಾನ್ಸ್ ಕೆಲವರು ಅಲ್ಲು ಅರ್ಜುನ್ ಅನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ, ಅಲ್ಲು ಅಭಿಮಾನಿಗಳು ಸಹ ಮೆಗಾ ಫ್ಯಾನ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಿಟ್ಟಾಡಿಸಿದ್ದಾರೆ.

ಅಲ್ಲು ಅರ್ಜುನ್ ವಿರುದ್ಧ ಮೆಗಾ ಅಭಿಮಾನಿಗಳು
ಮೆಗಾ ಅಭಿಮಾನಿಗಳ ವಿರುದ್ಧ 'ಏನೂ ಮಾಡಿಕೊಳ್ಳಲಾರರಿ' ಎಂಬರ್ಥ ಹೊಮ್ಮಿಸುವ ತೆಲುಗಿನ ವಾಕ್ಯವೊಂದರ ಹ್ಯಾಷ್ ಟ್ಯಾಗ್ ಅನ್ನು ಅಲ್ಲ ಅರ್ಜುನ್ ಅಭಿಮಾನಿಗಳು ಹರಿಬಿಡುತ್ತಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ ಮೆಗಾ ಅಭಿಮಾನಿಗಳು ಸಹ ಅಲ್ಲು ಅರ್ಜುನ್ ವಿರುದ್ಧ ಹಲವು ಆರೋಪಗಳನ್ನು, ಮೀಮ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳ ಬೆಂಬಲಕ್ಕೆ ಮಹೇಶ್ ಬಾಬು ಅಭಿಮಾನಿಗಳು, ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಧಾವಿಸಿದ್ದಾರೆ.

'ಚಪ್ಪನು ಬ್ರದರ್' ಎಂದಿದ್ದ ಅಲ್ಲು ಅರ್ಜುನ್
ಇದೆಲ್ಲ ಆರಂಭವಾಗಿದ್ದು ಕೆಲ ವರ್ಷಗಳ ಹಿಂದೆ, ಆಗ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಮಧ್ಯೆ ಮನಸ್ತಾಪ ಉದ್ಭವವಾಗಿತ್ತು. ಅದೇ ಸಮಯದಲ್ಲಿ ಅಲ್ಲು ಅರ್ಜುನ್ ನಟನೆಯ 'ಸರೈನೋಡು' ಸಿನಿಮಾ ಸೂಪರ್ ಹಿಟ್ ಆಗಿತ್ತು. ವಿಜಯವಾಡದಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲು ಅರ್ಜುನ್ ಚಿರಂಜೀವಿ ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳಿದರು. ಆಗ ವೇದಿಕೆ ಮುಂಭಾಗ ಕೆಲವರು ಪವರ್ ಸ್ಟಾರ್ ಎಂದು ಘೋಷಣೆಗಳನ್ನು ಕೂಗಿದರು ಆಗ ಅಲ್ಲು ಅರ್ಜುನ್, 'ಚಪ್ಪನು ಬ್ರದರ್' (ಅವರಿಗೆ ಥ್ಯಾಂಕ್ಸ್ ಹೇಳುವುದಿಲ್ಲ ಎಂಬರ್ಥದಲ್ಲಿ) ಎಂದಿದ್ದರು. ಆ ನಂತರ ಪವನ್ ಕಲ್ಯಾಣ್ ಅಭಿಮಾನಿಗಳು ಅಲ್ಲು ಅರ್ಜುನ್ ಅನ್ನು ಟ್ರೋಲ್ ಮಾಡುತ್ತಲೇ ಬರುತ್ತಿದ್ದಾರೆ.

ಫ್ಲೆಕ್ಸ್‌ನಲ್ಲಿ ಅಲ್ಲು ಅರ್ಜುನ್ ಫೋಟೊ ಇರಲಿಲ್ಲ
ಆ ನಂತರ ಪವನ್ ಹಾಗೂ ಚಿರಂಜೀವಿ ನಡುವಿನ ಮನಸ್ತಾಪ ದೂರಾಯಿತು. ಬಳಿಕ ಪವನ್ ಕಲ್ಯಾಣ್ ಚುನಾವಣೆಗೆ ಸ್ವಂತ ಪಕ್ಷದೊಡನೆ ಚುನಾವಣೆಗೆ ಸ್ಪರ್ಧಿಸಿದಾಗ, ಮೆಗಾ ಅಭಿಮಾನಿಗಳು ದೊಡ್ಡ ಸಮಾರಂಭ ಆಯೋಜಿಸಿದ್ದರು. ಆದರೆ ಆ ಸಮಾರಂಭಕ್ಕೆ ಅಲ್ಲು ಅರ್ಜುನ್‌ಗೆ ಆಹ್ವಾನ ನೀಡಿರಲಿಲ್ಲ, ಅಲ್ಲದೆ ಅಲ್ಲು ಅರ್ಜುನ್ ಫೋಟೊವನ್ನು ಸಹ ಯಾವುದೇ ಬ್ಯಾನರ್‌ನಲ್ಲಿ ಹಾಕಿರಲಿಲ್ಲ. ಯಾರೋ ಒಬ್ಬರು ಅಲ್ಲು ಅರ್ಜುನ್ ಹೇಳಿದ್ದ 'ಚಪ್ಪನು ಬ್ರದರ್' ಎಂಬುದನ್ನೇ ಒಂದು ಬ್ಯಾನರ್ ಮಾಡಿ ಹಾಕಿಸಿದ್ದು, ಸ್ಪಷ್ಟವಾಗಿ ಅಲ್ಲು ಅರ್ಜುನ್ ಅನ್ನು ಮೆಗಾ ಅಭಿಮಾನಿಗಳು ವಿರೋಧಿಸಿದ್ದನ್ನು ತೋರಿಸಿತ್ತು.

ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ
ಅಲ್ಲು ಅರ್ಜುನ್ ಇತ್ತೀಚೆಗೆ ಮೆಗಾ ಕುಟುಂಬದ ಪ್ರತಿಸ್ಪರ್ಧಿ ಕುಟುಂಬ ಎಂದೇ ಹೆಸರಾಗಿರುವ ನಂದಮೂರಿ ಕುಟುಂಬದ ಪ್ರಮುಖ ನಟ ನಂದಮೂರಿ ಬಾಲಕೃಷ್ಣ ಸಿನಿಮಾದ ಕಾರ್ಯಕ್ರಮಕ್ಕೆ ಹೋಗಿದ್ದು ಮೆಗಾ ಅಭಿಮಾನಿಗಳಿಗೆ ಇನ್ನಷ್ಟು ಬೇಸರ ತಂದಿದೆ. ಮೆಗಾ ಅಭಿಮಾನಿಗಳು ಅಲ್ಲು ಅರ್ಜುನ್ ಅನ್ನು ಟ್ರೋಲ್ ಮಾಡಲು ಆರಂಭಿಸುತ್ತಿದ್ದಂತೆ ಅಲ್ಲು ಅಭಿಮಾನಿಗಳು ಸಹ 'ಏಮ್ ಪೀಕಲೇರು ಬ್ರದರ್' ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಈ ಮೊದಲೇ ಹಲವಾರು ಬಾರಿ ಹೇಳಿರುವಂತೆ ಚಿರಂಜೀವಿ ಅವರ ಬನಹುಮೆಚ್ಚಿನ ನಟ, ಚಿರಂಜೀವಿಗೆ ಸಹ ಅಲ್ಲು ಅರ್ಜುನ್ ಎಂದರೆ ಬಹಳ ಅಚ್ಚು ಮೆಚ್ಚು. ಅವರಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ, ಆದರೆ ಅಭಿಮಾನಿಗಳು ಮಾತ್ರ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











