For Quick Alerts
  ALLOW NOTIFICATIONS  
  For Daily Alerts

  ಅಲ್ಲು ಸ್ಟುಡಿಯೋ ಉದ್ಘಾಟನೆ ಮಾಡಿದ ಮೆಗಾಸ್ಟಾರ್ ಚಿರಂಜೀವಿ!

  |

  ಈಗಾಗಲೇ ಟಾಲಿವುಡ್‌ ಮಂದಿಗೆ ಅಲ್ಲು ಅರವಿಂದ್ ನಿರ್ಮಿಸಿರುವ ಹೊಸ ಸ್ಟುಡಿಯೋ ಬಗ್ಗೆ ಗೊತ್ತೇ ಇದೆ. ಹೈದರಾಬಾದ್‌ ಹೊರವಲಯದಲ್ಲಿ ಅಲ್ಲು ಸ್ಟುಡಿಯೋ ನಿರ್ಮಾಣ ಆಗಿದೆ. ಇಂದು (ಅಕ್ಟೋಬರ್ 01)ರಂದು ಅಲ್ಲು ರಾಮಲಿಂಗಯ್ಯ ಅವರ 100 ಜನ್ಮ ದಿನೋತ್ಸವ ಈ ಕಾರಣಕ್ಕಾಗಿಯೇ ಅಲ್ಲು ಸ್ಟುಡಿಯೋವನ್ನು ಉದ್ಘಾಟನೆ ಮಾಡಲಾಗಿದೆ.

  ಅಲ್ಲು ಸ್ಟುಡಿಯೋ ಉದ್ಘಾಟನೆ ಸಮಯದಲ್ಲಿ ಮೆಗಾ ಸ್ಟಾರ್ ಚಿರಂಜೀವಿಗೆ ಅಲ್ಲು ಫ್ಯಾಮಿಲಿ ಸಾಥ್ ನೀಡಿತ್ತು. ಅಲ್ಲು ಅರ್ಜುನ್, ಅಲ್ಲು ಸಿರೀಶ್, ಅಲ್ಲು ಅರವಿಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ವಿಶೇಷ ದಿನದಂದು ಹೈದರಾಬಾದ್‌ನಲ್ಲಿ ಗ್ರ್ಯಾಂಡ್ ಆಗಿಯೇ ಸ್ಟುಡಿಯೋವನ್ನು ಉದ್ಘಾಟನೆ ಮಾಡಲಾಗಿದೆ.

  ಮಗಳ ಎದುರು ಸೋತ 'ಪುಷ್ಪ'ರಾಜ್: ವಿಡಿಯೋ ವೈರಲ್ಮಗಳ ಎದುರು ಸೋತ 'ಪುಷ್ಪ'ರಾಜ್: ವಿಡಿಯೋ ವೈರಲ್

  ಅಲ್ಲು ಸ್ಟುಡಿಯೋ ನಿರ್ಮಾಣ ಆಗಿದ್ದು ಮೆಗಾ ಫ್ಯಾಮಿಲಿ ಹಾಗೂ ಮೆಗಾ ಕುಟುಂಬಕ್ಕೆ ಹರ್ಷ ತಂದಿದೆ. ಈ ಸ್ಟುಡಿಯೋವನ್ನು ಸುಮಾರು 7 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಹೈದರಾಬಾದ್‌ನ ಔಟರ್‌ ರಿಂಗ್ ರೋಡ್‌ಗೆ ಹೊಂದಿಕೊಂಡಿದೆ ಎನ್ನಲಾಗಿದೆ. ವಿಸ್ತಾರವಾದ ಪ್ರವೇಶದಲ್ಲಿ ಸ್ಟುಡಿಯೋ ಕಟ್ಟಿರೋದ್ರಿಂದ ಶೂಟಿಂಗ್‌ಗೆ ಹೆಚ್ಚು ಅನುಕೂಲ ಮಾಡಿಕೊಡಲಾಗಿದೆ.

  ಇನ್ನೊಂದು ಕಡೆ ಅಲ್ಲು ಸ್ಟುಡಿಯೋ ಆರಂಭ ಆಗುತ್ತಿದ್ದಂತೆ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಶೂಟಿಂಗ್ ಆರಂಭ ಆಗಲಿದೆ. ಅಲ್ಲು ಸ್ಟುಡಿಯೋದಲ್ಲಿ ಶೂಟಿಂಗ್ ಆರಂಭ ಆಗುತ್ತಿರೋ ಮೊದಲ ಸಿನಿಮಾ 'ಪುಷ್ಪ 2' ಎನ್ನಲಾಗಿದೆ. 'ಪುಷ್ಪ 2' ಸಿನಿಮಾದ ಶೂಟಿಂಗ್‌ಗಾಗಿ ಅಗತ್ಯ ಸೌಲಭ್ಯಗಳನ್ನು ಮಾಡಿಕೊಡಲಾಗಿದೆ. ಹೀಗಾಗಿ ಶೀಘ್ರವೇ ಶೂಟಿಂಗ್ ಆರಂಭ ಆಗಲಿದೆ.

  ವಿಶ್ವದ ಗಮನ ಸೆಳೆದ ಅಲ್ಲು ಅರ್ಜುನ್ 'ಪುಷ್ಪ': ಹೊಸ ಸಾಧನೆಯೇನು?ವಿಶ್ವದ ಗಮನ ಸೆಳೆದ ಅಲ್ಲು ಅರ್ಜುನ್ 'ಪುಷ್ಪ': ಹೊಸ ಸಾಧನೆಯೇನು?

  'ಪುಷ್ಪ 2' ಸಿನಿಮಾದ ನಿರ್ದೇಶಕ ಸುಕುಮಾರ್ ಎರಡನೇ ಪಾರ್ಟ್ ಅನ್ನು ಶೀಘ್ರವೇ ಶುರು ಮಾಡಲಿದ್ದಾರೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಖಳನಾಯಕನ ಪಾತ್ರದಲ್ಲಿ ಫಹಾದ್‌ ಫಾಸಿಲ್ ಇನ್ನಷ್ಟು ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಇನ್ನು ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

  Mega Star Chiranjeevi Inaugurated Allu Studio Outskirts of Hyderabad

  ಅಲ್ಲು ಸ್ಟುಡಿಯೋ ನಿರ್ಮಾಣದಿಂದ ಟಾಲಿವುಡ್ ಅಷ್ಟೇ ಅಲ್ಲ. ಕನ್ನಡ ಹಾಗೂ ತಮಿಳು ಸಿನಿಮಾಗಳಿಗೂ ಅನುಕೂಲ ಆಗಲಿದೆ. ಕನ್ನಡ ಸಿನಿಮಾಗಳು ರಾಮೋಜಿ ಫಿಲ್ಮ್ ಸಿಟಿ, ಅನ್ನಪೂರ್ಣ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುತ್ತವೆ. ಈಗ ಅಲ್ಲು ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಲು ಅವಕಾಶ ಸಿಕ್ಕಂತಾಗಿದೆ.

  ನಿರ್ಮಾಪಕರ ತಲೆನೋವು ಹೆಚ್ಚಿಸಿದ ನ್ಯಾಶನಲ್​ ಕ್ರಶ್ ಸಂಭಾವನೆ..!ನಿರ್ಮಾಪಕರ ತಲೆನೋವು ಹೆಚ್ಚಿಸಿದ ನ್ಯಾಶನಲ್​ ಕ್ರಶ್ ಸಂಭಾವನೆ..!

  English summary
  Mega Star Chiranjeevi Inaugurated Allu Studio Outskirts of Hyderabad, Know More.
  Saturday, October 1, 2022, 18:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X