For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ-ಸಲ್ಮಾನ್‌ ಖಾನ್ ಕಾಂಬಿನೇಷನ್‌ ಸಕ್ಸಸ್: ಮೊದಲ ದಿನವೇ 'ಗಾಡ್‌ಫಾದರ್'ಗೆ ಜಾಕ್‌ಪಾಟ್!

  |

  ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್‌ ಸಿನಿಮಾ 'ಗಾಡ್‌ಫಾದರ್' ರಿಲೀಸ್ ಆಗಿದೆ. ವಿಜಯದಶಮಿ ಹಬ್ಬದಂದೇ ಗ್ರ್ಯಾಂಡ್‌ ಆಗಿ ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಿದೆ. ತೆಲುಗು ಹಾಗೂ ಹಿಂದಿ ಎರಡೂ ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗಿತ್ತು.

  ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ಗಾಡ್‌ ಫಾದರ್' ಮೊದಲ ದಿನ ತೆಲುಗಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಅದೇ ಹಿಂದಿಯಲ್ಲಿ ಈ ಸಿನಿಮಾದ ಕಲೆಕ್ಷನ್ ಡೌನ್ ಇದೆ. ಎರಡು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಸಖತ್ ಕಿಕ್ ಕೊಟ್ಟಿದೆ.

  God Father Movie Review: ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ಹೇಗಿದೆ?God Father Movie Review: ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ಹೇಗಿದೆ?

  ಮೋಹನ್ ರಾಜ ನಿರ್ದೇಶಿಸಿದ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. 'ಆಚಾರ್ಯ' ಸಿನಿಮಾ ಹೀನಾಯ ಸೋಲಿನ ಬಳಿಕ ರಿಲೀಸ್ ಆಗುತ್ತಿರೋ 'ಗಾಡ್‌ಫಾದರ್' ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಹಾಗಿದ್ರೆ, ಮೊದಲ ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಗಾಡ್‌ಫಾದರ್' ಮೊದಲ ದಿನದ ಕಲೆಕ್ಷನ್ ಎಷ್ಟು?

  'ಗಾಡ್‌ಫಾದರ್' ಮೊದಲ ದಿನದ ಕಲೆಕ್ಷನ್ ಎಷ್ಟು?

  ಮೆಗಾಸ್ಟಾರ್ ಚಿರಂಜೀವಿ ಲೆಟೆಸ್ಟ್ ಸಿನಿಮಾ 'ಗಾಡ್‌ಫಾದರ್' ಬಾಕ್ಸಾಫೀಸ್‌ ಕಲೆಕ್ಷನ್ ಅದ್ಭುತವಾಗಿದೆ. ಹಬ್ಬದ ದಿನವೇ ಬಿಡುಗಡೆಯಾಗಿದ್ದರಿಂದ ಸಿನಿಮಾ ಗಳಿಕೆ ನಿರೀಕ್ಷೆಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ದಿನ ವಿಶ್ವದಾದ್ಯಂತ ಸುಮಾರು 38 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಚಿರಂಜೀವಿ ಕಮ್ ಬ್ಯಾಕ್ ಮಾಡಿದ ಸಿನಿಮಾಗಳಲ್ಲೇ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡಿದೆ ಎನ್ನಲಾಗಿದೆ.

  ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಎಷ್ಟು?

  ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಎಷ್ಟು?

  'ಗಾಡ್‌ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಬಾಲಿವುಡ್ ಬಾಕ್ಸಾಫೀಸ್‌ ಮೇಲೆ ನಿರೀಕ್ಷೆ ಇಡಲಾಗಿತ್ತು. ಆದರೆ, 'ಗಾಡ್‌ಫಾದರ್'ಗೆ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹೆಚ್ಚು ಉಪಯೋಗಕ್ಕೆ ಬರಲಿಲ್ಲ. ಮೊದಲ ದಿನ ಉತ್ತರ ಭಾರತದಲ್ಲಿ ಈ ಸಿನಿಮಾ ಸುಮಾರು 2.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಸದ್ದು ಮಾತಾಡುತ್ತಾ? ಅನ್ನೋ ಕುತೂಹಲವಿದೆ.

  'ಆಚಾರ್ಯ' ಫಸ್ಟ್ ಡೇ ಕಲೆಕ್ಷನ್ ಉಡೀಸ್

  'ಆಚಾರ್ಯ' ಫಸ್ಟ್ ಡೇ ಕಲೆಕ್ಷನ್ ಉಡೀಸ್

  ಮೆಗಾಸ್ಟಾರ್ ಚಿರಂಜೀವಿಯ 'ಆಚಾರ್ಯ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. 'ಆಚಾರ್ಯ' ಮೊದಲ ದಿನ ವಿಶ್ವದಾದ್ಯಂತ ಸುಮಾರು 37 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದ್ರೀಗ 'ಗಾಡ್‌ಫಾದರ್' ಸಿನಿಮಾ ಆ ದಾಖಲೆಯನ್ನು ಉಡೀಸ್ ಮಾಡಿದೆ. ಮೊದಲ ದಿನವೇ 38 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ 'ಆಚಾರ್ಯ' ದಾಖಲೆಯನ್ನು ಮುರಿದು ಹಾಕಿದೆ. ಆದರೆ, ಮುಂದಿನ ನಾಲ್ಕು ದಿನಗಳು ಈ ಸಿನಿಮಾದ ಕಲೆಕ್ಷನ್ ಮೇಲೆ 'ಗಾಡ್‌ಫಾದರ್' ಹಿಟ್ ಅಥವಾ ಫ್ಲಾಪ್ ಅನ್ನೋದು ನಿರ್ಧಾರವಾಗಲಿದೆ.

  'ಗಾಡ್‌ಫಾದರ್‌'ನಲ್ಲಿ ದಿಗ್ಗಜರು

  'ಗಾಡ್‌ಫಾದರ್‌'ನಲ್ಲಿ ದಿಗ್ಗಜರು

  'ಗಾಡ್‌ಫಾದರ್' ಸಿನಿಮಾದ ಹೈಲೈಟ್ ಅಂದರೆ, ಸ್ಟಾರ್ ಕಾಸ್ಟ್. ಮೆಗಾಸ್ಟಾರ್ ಚಿರಂಜೀವಿ ಜೊತೆ ಸಲ್ಮಾನ್ ಖಾನ್, ನಯನತಾರಾ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್‌ ಈ ಸಿನಿಮಾದಲ್ಲಿದೆ. ಅಲ್ಲದೆ ಇದು ಮೋಹನ್ ಲಾಲ್ ಅಭಿನಯದ ಮಲಯಾಳಂ ಸಿನಿಮಾ 'ಲೂಸಿಫರ್' ರಿಮೇಕ್. ಇತ್ತ ಸುಕುಮಾರನ್ ನಿರ್ದೇಶನದ ಈ ಸಿನಿಮಾ ಆಗಿದ್ದರಿಂದ ನಿರೀಕ್ಷೆ ಹೆಚ್ಚಿದೆ. ಸದ್ಯ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಮುಂದಿನ ದಿನಗಳಲ್ಲಿ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋ ಕುತೂಹಲವಿದೆ.

  ಪವನ್ ಕಲ್ಯಾಣ್‌ಗಾಗಿ ಸಕ್ರಿಯ ರಾಜಕೀಯ ತೊರೆದ ಮೆಗಾಸ್ಟಾರ್‌! ಪವನ್ ಕಲ್ಯಾಣ್‌ಗಾಗಿ ಸಕ್ರಿಯ ರಾಜಕೀಯ ತೊರೆದ ಮೆಗಾಸ್ಟಾರ್‌!

  English summary
  Mega Star Chiranjeevi Starrer Godfather Box Office Collection Day 1, Know More.
  Thursday, October 6, 2022, 17:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X