'ಮೆಗಾ ವಿಕ್ಟರಿ ಮಾಸ್' ಸಾಂಗ್ ರಿಲೀಸ್; ಚಿರು- ವೆಂಕಿ ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ

ಈ ಬಾರಿ ಸಂಕ್ರಾಂತಿ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಜೊತೆಗೆ ದಳಪತಿ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಸುಗ್ಗಿ ಸಂಭ್ರಮದಲ್ಲಿ ತೆರೆಗಪ್ಪಳಿಸುತ್ತಿವೆ. ಇದೆಲ್ಲದರ ನಡುವೆ ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ.

ಅನಿಲ್ ರಾವಿಪುಡಿ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮೆಡಿ ಎಂಟರ್‌ಟೈನರ್ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಾಕ್ಕಿದೆ. ಕಳೆದ ವರ್ಷ ಸುಗ್ಗಿ ಸಂಭ್ರಮದಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ಬಂದು 300 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಈ ಬಾರಿ ಚಿರಂಜೀವಿ ಜೊತೆ ಅನಿಲ್ ರಾವಿಪುಡಿ ಹೊಸ ಸಿನಿಮಾ ಹೊತ್ತು ಬರ್ತಿದ್ದಾರೆ.

Mega Victory Mass Song Steals the Show Mana Shankaravar Prasad Garu Sparks Sankranti Fever

'ಮನ ಶಂಕರವರಪ್ರಸಾದ್ ಗಾರು' ಚಿತ್ರದಲ್ಲಿ ಚಿರಂಜೀವಿ ಜೊತೆಗೆ ನಯನತಾರ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ 'ಮೀಸಾಲ ಪಿಲ್ಲ' ಹಾಗೂ 'ಸಸಿರೇಖ' ಹಾಡುಗಳು ಹಿಟ್ ಆಗಿದೆ. ಹೊಸ ವರ್ಷದ ಹೊಸ್ತಿಲ್ಲಲ್ಲಿ ಚಿತ್ರದ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಕೂಡ ಚಿರಂಜೀವಿ ಜೊತೆ ನಟಿಸಿರೋದು ವಿಶೇಷ.

'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದಲ್ಲಿ ವೆಂಕಟೇಶ್ ಹೀರೊ ಆಗಿ ನಟಿಸಿದ್ದರು. ಇದೀಗ 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ವಿಕ್ಟರಿ ವೆಂಕಟೇಶ್ ಕಾಂಬಿನೇಷನ್ ತೆರೆಮೇಲೆ ಮ್ಯಾಜಿಕ್ ಮಾಡೋದು ಗ್ಯಾರಂಟಿ. ಇವರಿಬ್ಬರನ್ನು ಒಟ್ಟಿಗೆ ಸೇರಿಸಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲು ಅನಿಲ್ ಅಂಡ್ ಟೀಮ್ ಸಿದ್ಧವಾಗಿದೆ.

ಸತತ ಸೋಲುಗಳಿಂದ ಕಂಗೆಟ್ಟ ಚಿರಂಜೀವಿ ಇದೀಗ ಫ್ಯಾಮಿಲಿ ಆಡಿಯನ್ಸ್ ಮನಗೆಲ್ಲಲು ಬರ್ತಿದ್ದಾರೆ. ಸದ್ಯ 'ಮೆಗಾ ವಿಕ್ಟರಿ ಮಾಸ್' ಸಾಂಗ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಚಿರಂಜೀವಿ- ವೆಂಕಟೇಶ್ ಒಟ್ಟಿಗೆ ಹೆಜ್ಜೆ ಹಾಕಿ ರಂಜಿಸಿದ್ದಾರೆ. ಚಿರು ಅಂದ್ರೆ ಡ್ಯಾನ್ಸ್, ಡ್ಯಾನ್ಸ್ ಅಂದ್ರೆ ಚಿರು. ಇನ್ನು ವೆಂಕಿ ಕೂಡ ಕೈ ಜೋಡಿಸಿದ್ರೆ ಕೇಳ್ಬೇಕಾ? ಸಾಂಗ್ ಅಭಿಮಾನಿಗಳ ಮನಗೆದ್ದಿದೆ.

ಭೀಮ್ಸ್ ಸಿಸಿರೊಲಿಯೊ ಸಂಗೀತದ ಹಾಡಿಗೆ ಕಾಸರ್ಲ ಶ್ಯಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಹಾಗೂ ವಿಶಾಲ್ ದದ್ಲಾನಿ ಹಾಡಿರುವ ಹಾಡಿಗೆ ವಿಜಯ್ ಪೊಲಕಿ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಬಿಂದಾಸ್ ಗೆಟಪ್‌ಗಳಲ್ಲಿ ಚಿರು- ವೆಂಕಿ ಒಂದಷ್ಟು ಡ್ಯಾನ್ಸರ್ಸ್ ಜೊತೆ ಜಬರ್ದಸ್ತ್ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ.

ಜನವರಿ 12ರಂದು 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಬಿಡುಗಡೆ ಆಗಲಿದೆ. ಚಿರಂಜೀವಿ ನಿಜವಾದ ಹೆಸರು ಶಂಕರವರಪ್ರಸಾದ್. ಚಿತ್ರರಂಗಕ್ಕೆ ಬಂದಾಗ ತಮ್ಮ ಹೆಸರು ಬದಲಿಸಿಕೊಂಡಿದ್ದರು. ಇದೀಗ ತಮ್ಮದೇ ಹೆಸರಿನ ಟೈಟಲ್ ಇರುವ ಸಿನಿಮಾದಲ್ಲಿ ನಟಿಸಿರೋದು ವಿಶೇಷ. ಶೈನ್ ಸ್ಕ್ರೀನ್ಸ್ ಎಂಡ್ ಗೋಲ್ಡ್ ಬಾಕ್ಸ್ ಅಂಟರ್ಟೆನ್ಮೆಂಟ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಚಿತ್ರದ ಟೀಸರ್ ಹಾಗೂ ಸಾಂಗ್ಸ್ ಹಿಟ್ ಆಗಿದ್ದು ಶೀಘ್ರದಲ್ಲೇ ಟ್ರೈಲರ್ ಬಿಡುಗಡೆ ಆಗಲಿದೆ.

ಅನಿಲ್ ರಾವಿಪುಡಿ ನಿರ್ದೇಶನದ ಸಿನಿಮಾಗಳೆಲ್ಲಾ ಗೆದ್ದಿವೆ. ಕಾಮಿಡಿ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಅನಿಲ್ ನಿಸ್ಸೀಮರು. ಚಿರಂಜೀವಿ ಕಾಮಿಡಿ ಟೈಮಿಂಗ್ ಕೂಡ ಚೆನ್ನಾಗಿರುತ್ತಾರೆ. ಈ ಹಿಂದೆ ಅವರ ಕಾಮಿಡಿ ಸನ್ನಿವೇಶಗಳು ಪ್ರೇಕ್ಷಕರನ್ನು ಬಹಳ ರಂಜಿಸಿತ್ತು. ಇದೀಗ ಅನಿಲ್ ನಿರ್ದೇಶನದಲ್ಲಿ ಚಿರು ಕಾಮಿಡಿ ಕಿಕ್ ಹೇಗಿರುತ್ತದೆ ಎಂದು ನೋಡಲು ಸಿನಿರಸಿಕರು ಕಾಯುವಂತಾಗಿದೆ.

ಸಂಕ್ರಾಂತಿ ಸಂಭ್ರಮದಲ್ಲಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರ್ತಾರೆ. ಹಾಗಾಗಿ ದೊಡ್ಡ ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದಲ್ಲಿ 'ಮ್ಯಾಂಗೋ ಪಚ್ಚ' ಸಿನಿಮಾ ಸುಗ್ಗಿ ಸಂಭ್ರಮಕ್ಕೆ ತೆರೆಗೆ ಬರಲಿದೆ.

More from Filmibeat

Read more about: tollywood chiranjeevi venkatesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X