ಅಪ್ಪ ಮೆಗಸ್ಟಾರ್.. ಮಗ ಮೆಗಾ ಪವರ್‌ಸ್ಟಾರ್ ಇವರಿಬ್ಬರ ಆಸ್ತಿಯ ಮೌಲ್ಯ ಎಷ್ಟು? ಯಾರು ಶ್ರೀಮಂತರು?

By ಫಿಲ್ಮಿಬೀಟ್ ಡೆಸ್ಕ್

ತಂದೆ-ಮಗ ಇಬ್ಬರೂ ತೆಲುಗು ಚಿತ್ರರಂಗದ ಇಬ್ಬರು ಪವರ್‌ಫುಲ್ ಸ್ಟಾರ್‌ಗಳು. ಅಪ್ಪ ಟಾಲಿವುಡ್‌ನ ಮೆಗಾಸ್ಟಾರ್. ಮಗ ಮೆಗಾ ಪವರ್‌ಸ್ಟಾರ್. ಇಬ್ಬರಿಗೂ ಅಸಂಖ್ಯಾತ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ನಟನರಾಗಿ ಗ್ಲೋಬಲ್ ಲೆವೆಲ್‌ನಲ್ಲಿ ಫ್ಯಾನ್ಸ್ ಅನ್ನು ಹೊಂದಿದ್ದಾರೆ.

ಇದೊಂತರ ಅಪರೂಪದ ಸನ್ನಿವೇಶ. ಅಪ್ಪನಿಗೆ ಮಗ ಪೈಪೋಟಿ ಕೊಡುತ್ತಾರೆ. ಸೀನ್ ಕಟ್ ಮಾಡಿದರೆ, ಮಗನಿಗೆ ಅಪ್ಪನೇ ಪೈಪೋಟಿ ಕೊಡುತ್ತಾರೆ. ಯಾವುದೇ ಚಿತ್ರರಂಗದಲ್ಲಿ ಇಂತಹ ಸನ್ನಿವೇಶಗಳು ಬರುವುದು ತೀರಾ ಅಪರೂಪ. ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್‌ ನಡುವೆ ಇಂತಹದ್ದೊಂದು ಆರೋಗ್ಯಕರ ಕಾಂಪಿಟೇಷನ್ ಇದ್ದೇ ಇದೆ. ಚಿರಂಜೀವಿ 69ನೇ ವಯಸ್ಸಿನಲ್ಲೂ ಮಗನೇ ನಾಚುವಂತೆ ಹೆಜ್ಜೆ ಹಾಕುತ್ತಾರೆ.

Megastar Chiranjeevi and Ram Charan who is richest net worth details

ಹೌದು, ಚಿರಂಜೀವಿಗೆ ಈಗ 69 ವರ್ಷ. ಆದರೆ, ಅವರ ಎನರ್ಜಿ ನೋಡಿದರೆ, 40 ವರ್ಷದ ನಟನಲ್ಲಿ ಇದ್ದಷ್ಟಿಗೆ. ಇಂದಿಗೂ ನಾಯಕಿಯೊಂದು ತೆರೆಮೇಲೆ ರೊಮ್ಯಾನ್ಸ್ ಮಾಡಿ ಜೈ ಎನಿಸಿಕೊಂಡಿರುವ ನಟ ಚಿರಂಜೀವಿ. ಹಾಗಂತ ರಾಮ್ ಚರಣ್ ಏನೂ ಕಮ್ಮಿಯಿಲ್ಲ. 40ನೇ ವಯಸ್ಸಿನಲ್ಲಿ ಅಪ್ಪನಿಗೆ ಸರಿ ಸಮನಾಗಿ ಬೆಳೆದು ನಿಂತಿದ್ದಾರೆ. ಕೇವಲ ನಟನಾಗಿ ಅಷ್ಟೇ ಅಲ್ಲ. ಉದ್ಯಮಿಯಾಗಿಯೂ ಬೆಳೆದಿದ್ದಾರೆ. ಹಾಗಿದ್ದರೆ, ಇವರಿಬ್ಬರಲ್ಲಿ ಶ್ರೀಮಂತರು ಯಾರು?

ಚಿರಂಜೀವಿ ಆಸ್ತಿ ಮೌಲ್ಯ ಎಷ್ಟು?

ಚಿರಂಜೀವಿ ಟಾಲಿವುಡ್‌ನ ಮೆಗಾಸ್ಟಾರ್. ಒಂದುಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ. 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಚಿರಂಜೀವಿ ಎಂದು ಹಲವು ಮಾಧ್ಯಮಗಳು ವರದಿಯಾಗಿದೆ. ಡ್ಯಾನ್ಸ್, ಆಕ್ಷನ್, ಆಕ್ಟಿಂಗ್ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಶ್ರೇಯಸ್ಸು ಚಿರಂಜೀವಿಗೂ ಸಲ್ಲುತ್ತೆ. ಟಾಲಿವುಡ್‌ನಲ್ಲಿ ಮೆಗಾ ಯಶಸ್ಸು ಕಂಡ ನಟ ಚಿರಂಜೀವಿ.

Megastar Chiranjeevi and Ram Charan who is richest net worth details

ಟೈಮ್ಸ್ ಆಫ್ ಇಂಡಿಯಾ, ನ್ಯೂಸ್ 18 ವರದಿಯ ಪ್ರಕಾರ 2024ರ ಹೊತ್ತಿಗೆ ಚಿರಂಜೀವಿ ಆಸ್ತಿಯ ಮೌಲ್ಯ 1650 ಕೋಟಿ ರೂಪಾಯಿ. ಚಿರಂಜೀವಿ ಬಳಿ ಜುಬಿಲಿ ಹಿಲ್ಸ್‌ನಲ್ಲಿ ಭವ್ಯ ಬಂಗಲೆ ಇದೆ. ಬೆಂಗಳೂರು ಹಾಗೂ ಚೆನ್ನೈನಲ್ಲಿ ಫಾರ್ಮ್ ಹೌಸ್ ಅನ್ನು ಹೊಂದಿದ್ದಾರೆ. ರೋಲ್ಸ್‌ ರಾಯ್ಸ್‌, ರೇಂಜ್ ರೋವರ್, ಲ್ಯಾಂಡ್ ಕ್ಯೂಸರ್ ಅಂತಹ ದುಬಾರಿ ಕಾರುಗಳಿವೆ. ಇಷ್ಟೇ ಅಲ್ಲ ಹಲವು ಕಡೆಗಳಲ್ಲಿ ಹೂಡಿಕೆಯನ್ನೂ ಮಾಡಿದ್ದಾರೆ. ಇಷ್ಟೇ ಅಲ್ಲದೆ ಚಿರಂಜೀವಿ ಬಳಿ ದುಬಾರಿ ವೆಚ್ಚದ ಖಾಸಗಿ ವಿಮಾನ ಕೂಡ ಇದೆ.

ರಾಮ್ ಚರಣ್ ಆಸ್ತಿ ಮೌಲ್ಯ ಎಷ್ಟು?

ಇನ್ನು ಮಗ ರಾಮ್‌ ಚರಣ್‌ ಬಳಿ ಹೆಚ್ಚು ಕಡಿಮೆ ಅಪ್ಪನಷ್ಟೇ ಆಸ್ತಿಯಿದೆ. RRR ಸಿನಿಮಾ ಬಳಿಕ ರಾಮ್ ಚರಣ್ ಜನಪ್ರಿಯತೆ ದುಪ್ಪಟ್ಟಾಗಿದೆ. ಈಗ ಅವರು ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ದುಬಾರಿ ಸಂಭಾವನೆ ಪಡೆಯುವ ನಟ, ಕೇವಲ ಸಿನಿಮಾದಿಂದ ಅಷ್ಟೇ ಅಲ್ಲ. ಈಗಾಗಲೇ ಹೂಡಿಕೆ ಮಾಡಿರುವ ಹಲವು ಕಂಪನಿಗಳಿಂದ ಲಾಭವನ್ನು ಗಳಿಸಿದ್ದಾರೆ. RRR ಬಳಿಕ ತೆರೆಕಂಡ ಬಳಿಕ ಎರಡು ಸೋಲುಗಳನ್ನು ಕಂಡಿದ್ದರೂ, ಮುಂಬರುವ ಸಿನಿಮಾ ಪೆದ್ದಿ ಬಗ್ಗೆ ನಿರೀಕ್ಷೆ ಈಗಾಗಲೇ ಗರಿಗೆದರಿದೆ.

ಇನ್ನು , ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ರಾಮ್ ಚರಣ್ ಬಳಿಕ1350 ಕೋಟಿ ರೂಪಾಯಿದೆ. ರಿಯಲ್ ಎಸ್ಟೇಟ ಹಾಗೂ ಸಿನಿಮಾಗಳ ನಿರ್ಮಾಣದಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಇರುವ ಭವ್ಯ ಬಂಗಲೆಯ ಬೆಲೆ 38 ಕೋಟಿ ರೂಪಾಯಿ. ಇದು ಅಪ್ಪ ಹಾಗೂ ಮಗ ಇಬ್ಬರಿಗೂ ಸೇರಿದೆ. ಇನ್ನು ಟ್ರೂ ಜೆಟ್ ಎನ್ನುವ ವಿಮಾನ ಸಂಸ್ಥೆಯಲ್ಲಿ ರಾಮ್ ಚರಣ್ ಕೂಡ ಹೂಡಿಕೆ ಮಾಡಿದ್ದರು. ಬಳಿಕ ಆ ಸಂಸ್ಥೆಯನ್ನು ವಿನ್‌ಏರ್ ಕಂಪನಿಗೆ ಮಾರಾಟ ಮಾಡಲಾಗಿತ್ತು. ಇದರೊಂದಿಗೆ ಹಲವು ಸ್ಟಾರ್ಟ್‌ಅಪ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. 40ನೇ ವಯಸ್ಸಿನಲ್ಲಿ ರಾಮ್ ಚರಣ್ ತಂದೆಯಷ್ಟೇ ಯಶಸ್ಸು ಗಳಿಸಿ ಮುನ್ನುಗ್ಗುತ್ತಿದ್ದಾರೆ.

More from Filmibeat

English summary
Megastar Chiranjeevi and Ram Charan who is richest? net worth details;
Read more about: chiranjeevi ram charan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X