For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್‌ನಲ್ಲಿ ಚಿರಂಜೀವಿ ಫಾಲೋ ಮಾಡೋದು ಒಬ್ಬರನ್ನೇ: ಅವರು ಯಾರು ಗೊತ್ತೆ?

  |

  ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳು, ಅಭಿಮಾನಿ ಸಂಘಗಳುಳ್ಳ ನಟರಲ್ಲಿ ಒಬ್ಬರು ತೆಲುಗಿನ ಮೆಗಾಸ್ಟಾರ್ ಚಿರಂಜೀವಿ. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುವ ಚಿರಂಜೀವಿ ಅವರಿಗೆ ಅಲ್ಲಿಯೂ ದೊಡ್ಡ ಸಂಖ್ಯೆಯ ಹಿಂಬಾಲಕರೇ ಇದ್ದಾರೆ.

  ನಟ ಚಿರಂಜೀವಿ ಅವರನ್ನು ಟ್ವಿಟ್ಟರ್‌ನಲ್ಲಿ 9 ಲಕ್ಷ ಮಂದಿಗೂ ಹೆಚ್ಚು ಜನ ಹಿಂಬಾಲಿಸುತ್ತಾರೆ. ಚಿರಂಜೀವಿ ಮಾಡುವ ಪೋಸ್ಟ್‌ಗಳನ್ನು ನೋಡುತ್ತಾರೆ ಪ್ರತಿಕ್ರಿಯಿಸುತ್ತಾರೆ. ಚಿರಂಜೀವಿ ಅವರು ಟ್ವಿಟ್ಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ.

  ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ-ನಟಿಯರು ತಮ್ಮದೇ ಉದ್ಯಮದ ಇತರರನ್ನು ಹಿಂಬಾಲಿಸುವುದು, ಬೇರೆಯವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವುದು ಸಾಮಾನ್ಯ. ಆದರೆ ನಟ ಚಿರಂಜೀವಿ ತುಸು ಭಿನ್ನ. ಲಕ್ಷಗಟ್ಟಲೆ ಹಿಂಬಾಲಕರನ್ನು (ಫಾಲೋವರ್ಸ್) ಹೊಂದಿರುವ ಚಿರಂಜೀವಿ ತಾವು ಮಾತ್ರ ಒಬ್ಬರನ್ನಷ್ಟೆ ಫಾಲೋ ಮಾಡುತ್ತಾರೆ.

  ಚಿರಂಜೀವಿ ಫಾಲೋ ಮಾಡುವುದು ಒಬ್ಬರು ಮಾತ್ರ

  ಚಿರಂಜೀವಿ ಫಾಲೋ ಮಾಡುವುದು ಒಬ್ಬರು ಮಾತ್ರ

  ಚಿರಂಜೀವಿ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುವುದು ಕೇವಲ ಒಬ್ಬರನ್ನೇ. ಅವರ ಹೆಸರು ರಾಮಜೋಗಯ್ಯ ಶಾಸ್ತ್ರಿ. ತೆಲುಗಿನ ಸಿನಿಮಾ ಗೀತೆ ರಚನೆಕಾರ ಆಗಿರುವ ರಾಮಜೋಗಯ್ಯ ಶಾಸ್ತ್ರಿ ಒಬ್ಬರನ್ನಷ್ಟೆ ಚಿರಂಜೀವಿ ಫಾಲೋ ಮಾಡುತ್ತಾರೆ.

  'ಕಿಂಗ್' ನಟಿಸಿದ್ದ ರಾಮಜೋಗಯ್ಯ ಶಾಸ್ತ್ರಿ

  'ಕಿಂಗ್' ನಟಿಸಿದ್ದ ರಾಮಜೋಗಯ್ಯ ಶಾಸ್ತ್ರಿ

  2008 ರಲ್ಲಿ ಬಿಡುಗಡೆ ಆದ ನಾಗಾರ್ಜುನ ನಟನೆಯ 'ಕಿಂಗ್' ಸಿನಿಮಾದ ಹಾಸ್ಯದೃಶ್ಯವೊಂದರಲ್ಲಿ ಬ್ರಹ್ಮಾನಂದಂ ಅವರ ಸಹಾಯಕನ ಪಾತ್ರದಲ್ಲಿ ರಾಮಜೋಗಯ್ಯ ಶಾಸ್ತ್ರಿ ನಟಿಸಿದ್ದರು. ಆ ಸಿನಿಮಾದಲ್ಲಿ ಅವರ ಹೆಸರು ಶಾಸ್ತ್ರಿಯೇ ಆಗಿತ್ತು. ಆ ನಂತರ ಹಲವಾರು ಸೂಪರ್-ಡೂಪರ್ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ಬರೆದಿದ್ದಾರೆ ರಾಮಜೋಗಯ್ಯ ಶಾಸ್ತ್ರಿ.

  ರಾಮ್ ಚರಣ್ ಅನ್ನು ಸಹ ಅನ್‌ಫಾಲೋ ಮಾಡಿದ್ದರು

  ರಾಮ್ ಚರಣ್ ಅನ್ನು ಸಹ ಅನ್‌ಫಾಲೋ ಮಾಡಿದ್ದರು

  ಮೆಗಾಸ್ಟಾರ್ ಚಿರಂಜೀವಿ ಟ್ವಿಟ್ಟರ್‌ಗೆ ಬಂದಾಗ ತಮ್ಮ ಪುತ್ರ ರಾಮ್‌ ಚರಣ್ ತೇಜ ಅವರನ್ನಷ್ಟೆ ಫಾಲೋ ಮಾಡುತ್ತಿದ್ದರು. ಆದರೆ ಅದೇನಾಯಿತೋ ಏನೋ ಅವರನ್ನೂ ಅನ್‌ಫಾಲೋ ಮಾಡಿಬಿಟ್ಟರು ಚಿರು. ಆ ನಂತರ ಬಹಳ ತಿಂಗಳುಗಳ ಕಾಲ ಯಾರನ್ನೂ ಫಾಲೋ ಮಾಡುತ್ತಿರಲಿಲ್ಲ. ಈಗ ಕೆಲವು ದಿನಗಳ ಹಿಂದಿನಿಂದ ರಾಮ ಜೋಗಯ್ಯ ಶಾಸ್ತ್ರಿ ಅವರ ಟ್ವಿಟ್ಟರ್‌ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

  ಸರ್ಕಾರದ ನಿರ್ಧಾರಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು? | Filmibeat Kannada
  ಬಹಳ ದೊಡ್ಡ ಗೌರವವನ್ನು ಚಿರಂಜೀವಿ ನೀಡಿದ್ದಾರೆ: ಶಾಸ್ತ್ರಿ

  ಬಹಳ ದೊಡ್ಡ ಗೌರವವನ್ನು ಚಿರಂಜೀವಿ ನೀಡಿದ್ದಾರೆ: ಶಾಸ್ತ್ರಿ

  ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಟ್ವಿಟ್ಟರ್‌ ಖಾತೆಯನ್ನು ಫಾಲೋ ಮಾಡುತ್ತಿರುವುದರ ಬಗ್ಗೆ ಮಾತನಾಡಿರುವ ರಾಮಜೋಗಯ್ಯ ಶಾಸ್ತ್ರಿ ಭಾವುಕರಾಗಿದ್ದಾರೆ, 'ಈ ಸಂಗತಿ ನನಗೆ ಅತೀವ ಸಂತೋಶ ತಂದಿದೆ. ಬಹಳ ದೊಡ್ಡ ಗೌರವವನ್ನು ಚಿರಂಜೀವಿ ಅವರು ನನ್ನಂಥ ಸಾಮಾನ್ಯನಿಗೆ ನೀಡಿದ್ದಾರೆ' ಎಂದಿದ್ದಾರೆ ರಾಮಜೋಗಯ್ಯ ಶಾಸ್ತ್ರಿ.

  English summary
  Telugu actor Megastar Chiranjeevi follows only one person on twitter that is lyricist Ramajogayya Sastry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X