For Quick Alerts
  ALLOW NOTIFICATIONS  
  For Daily Alerts

  ತಲೆ ಬೋಳಿಸಿಕೊಂಡ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ಮೆಗಾಸ್ಟಾರ್ ಚಿರಂಜೀವಿ

  |

  ಮೆಗಾಸ್ಟಾರ್ ಚಿರಂಜೀವಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಚಿರಂಜೀವಿ ಸಂಪೂರ್ಣ ಬೋಳು ತಲೆ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಹೊಸ ಸ್ಟೈಲ್ ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳು ಸೇರಿದಂತೆ ಟಾಲಿವುಡ್ ನ ಅನೇಕ ಸ್ಟಾರ್ಸ್ ಕಾಮೆಂಟ್ ಮಾಡಿ ಅಚ್ಚರಿ ವ್ಯಕ್ತಪಡಸಿದ್ದರು.

  65 ವರ್ಷದ ನಟ ಚಿರಂಜೀವಿ ದಿಢೀರ್ ಲುಕ್ ಬದಲಾಯಿಸಿಕೊಂಡಿದ್ದೇಕೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಹೊಸ ಸಿನಿಮಾಗಾಗಿ ಗೆಟಪ್ ಬದಲಾಯಿಸಿಕೊಂಡ್ರಾ ಅಥವಾ ಬೇರೆ ಇನ್ನೇನಾದರೂ ಇದೆಯಾ ಎನ್ನುವುದನ್ನು ಚಿರಂಜೀವಿ ಬಹಿರಂಗಪಡಿಸಿಲ್ಲ. ಆದರೀಗ ಬೋಳು ತಲೆಯ ಹಿಂದಿನ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  ತಲೆ ಬೋಳಿಸಿಕೊಂಡು ಸನ್ಯಾಸಿಯಾದ್ರಾ ಮೆಗಾಸ್ಟಾರ್ ಚಿರಂಜೀವಿ?

  'ನಾನು ಸನ್ಯಾಸಿ ರೀತಿ ಯೋಚಿಸಬಲ್ಲೆನೇ..'

  'ನಾನು ಸನ್ಯಾಸಿ ರೀತಿ ಯೋಚಿಸಬಲ್ಲೆನೇ..'

  ಕಪ್ಪು ಬಣ್ಣದ ಗಾಗಲ್ ಧರಿಸಿರುವ, ಬೋಳುತಲೆಯ ಹೊಸ ಲುಕ್ ನ ಫೋಟೋವನ್ನು ಚಿರಂಜೀವಿ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಫೋಟೋ ಜೊತೆಗೆ 'ಅರ್ಬನ್ ಮಾಂಕ್' ಎಂದು ಕ್ಯಾಪ್ಷನ್ ಸಹ ನೀಡಿದ್ದರು. ಅಲ್ಲದೆ 'ನಾನು ಸನ್ಯಾಸಿ ರೀತಿ ಯೋಚಿಸಬಲ್ಲೆನೇ' ಎಂದು ಪ್ರಶ್ನೆಯನ್ನು ಮಾಡಿದ್ದರು. ಈ ಲುಕ್, ಚಿರಂಜೀವಿ ಕ್ಯಾಪ್ಷನ್ ಅಭಿಮಾನಿಗಳನ್ನು ನಿದ್ದೆಗೆಡಿಸಿತ್ತು.

  ಮೇಕಪ್ ಕಲಾವಿದರ ಕೈ ಚಳಕ

  ಮೇಕಪ್ ಕಲಾವಿದರ ಕೈ ಚಳಕ

  ನಟಿ ಚಿರಂಜೀವಿ ಬೋಳು ತಲೆಯ ರಹಸ್ಯವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಚಿರಂಜೀವಿ ಹೊಸ ಲುಕ್ ಗೆ ಮೇಕಪ್ ಕಲಾವಿದರ ಕೈ ಚಳಕ ಎನ್ನುವುದು ಗೊತ್ತಾಗಿದೆ. ಪ್ರಾಸ್ತೆಟಿಕ್ ಮೇಕಪ್ ಸಹಾಯದಿಂದ ಈ ಗೆಟಪ್ ತಯಾರಿಸಲಾಗಿದೆ. ಬೋಳು ತಲೆಯ ಹಾಗೆ ಕಾಣಿಸುವ ಮೇಕಪ್ ಮಾಡಿದ ತಂತ್ರಜ್ಞರಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ಯಾವ ಸಿನಿಮಾಗೆ ಈ ಲುಕ್ ಎನ್ನುವುದನ್ನು ರಿವೀಲ್ ಮಾಡಿಲ್ಲ.

  ಮೆಗಾಸ್ಟಾರ್ ಚಿರಂಜೀವಿ 'ಆಚಾರ್ಯ' ಸಿನಿಮಾದಲ್ಲಿ ಕನ್ನಡದ ನಟಿ?

  ವೈರಲ್ ಆದ ವಿಡಿಯೋ

  ವೈರಲ್ ಆದ ವಿಡಿಯೋ

  'ಅರ್ಬನ್ ಮಾಂಕ್' ಆಗಿ ತಯಾರಿಸುತ್ತಿರುವ ವಿಡಿಯೋವನ್ನು ಚಿರಂಜೀವಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿ 'ವಾವ್..!' ಎನ್ನುತ್ತಿದ್ದಾರೆ. ಈ ಫೋಟೋ ಶೇರ್ ಮಾಡಿದ ಬಳಿಕ ಅಭಿಮಾನಿಗಳು ಬಾಸ್ ಈಸ್ ಬ್ಯಾಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ಅಪ್ಪನ ಹೊಸ ಲುಕ್ ನೋಡಿ ರಾಮ್ ಚರಣ್ ಹೇಳಿದ್ದೇನು?

  ಅಪ್ಪನ ಹೊಸ ಲುಕ್ ನೋಡಿ ರಾಮ್ ಚರಣ್ ಹೇಳಿದ್ದೇನು?

  ನಟ ಚಿರಂಜೀವಿ ಹೊಸ ಲುಕ್ ನೋಡಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದರು. ಅನೇಕ ತೆಲುಗು ಸ್ಟಾರ್ಸ್ ಅಚ್ಚರಿ ಪಡುತ್ತಿದ್ದರು. ಮೆಗಾಸ್ಟಾರ್ ಫೋಟೋಗೆ ಮಗ ರಾಮ್ ಚರಣ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪಾ..ನಾನು ಏನು ನೋಡಿದೆ? ಎಂದು ಅಚ್ಚರಿಯ ಕಾಮೆಂಟ್ ಮಾಡಿದ್ದರು. ಕಲ್ಯಾಣ್ ದೇವ್, ನಾಗಬಾಬು ಸೇರಿದಂತೆ ಅನೇಕರು ಚಿರು ಹೊಸ ಸ್ಟೈಲ್ ಗೆ ಫಿದಾ ಆಗಿದ್ದರು.

  ವೇದಾಲಂ ರೀಮೇಕ್‌ನಲ್ಲಿ ಮೆಗಾಸ್ಟಾರ್: ತಂಗಿ ಪಾತ್ರಕ್ಕೆ ಸ್ಟಾರ್ ನಟಿ!

  'ಆಚಾರ್ಯ' ಸಿನಿಮಾದಲ್ಲಿ ಬ್ಯುಸಿ

  'ಆಚಾರ್ಯ' ಸಿನಿಮಾದಲ್ಲಿ ಬ್ಯುಸಿ

  ಚಿರಂಜೀವಿ ಸದ್ಯ 'ಆಚಾರ್ಯ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಗೂ ಮೊದಲೇ ಚಿತ್ರೀಕರಣ ಪ್ರಾರಂಭಿಸಿದ್ದ ಸಿನಿಮಾತಂಡ ಲಾಕ್ ಡೌನ್ ಬಳಿಕ ಮತ್ತೆ ಶೂಟಿಂಗ್ ಗೆ ತೆರಳಲಿಲ್ಲ. ಆಚಾರ್ಯ ಸಿನಿಮಾ ಪುತ್ರ ರಾಮ್ ಚರಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಇದಾದ ಬಳಿಕ ಮಲಯಾಳಂ ಸೂಪರ್ ಹಿಟ್ 'ಲೂಸಿಫರ್' ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮಿಳಿನ 'ವೇದಲಂ' ಸಿನಿಮಾದ ರಿಮೇಕ್ ಸಹ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ 'ಆಚಾರ್ಯ' ಬಳಿಕ ಮುಂದಿನ ಸಿನಿಮಾದ ಬಗ್ಗೆ ಚಿರಂಜೀವಿ ಅಧಿಕೃತವಾಗಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ.

  English summary
  Megastar Chiranjeevi Reveals the secret behind his latest urban monk look. Chiranjeevi Shared a video, his makeup artists can be seen applying a bald cap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X