ತೆಲುಗು ಚಿತ್ರರಂಗದಲ್ಲಿ 'ಗಾಡ್ ಫಾದರ್' ಆದ ಮೆಗಾಸ್ಟಾರ್ ಚಿರಂಜೀವಿ

ತೆಲುಗಿನ ಖ್ಯಾತ ನಟ, ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ಇನ್ನೊಂದೆ ದಿನ ಬಾಕಿ ಇದ. ಆಗಸ್ಟ್ 22 ನಟ ಚಿರಂಜೀವಿ ಅವರ ಜನ್ಮದಿನ. 66ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮೆಗಾಸ್ಟಾರ್ ಗೆ ಅಭಿಮಾನಿಗಳ ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಳೆಯೇ ಹರಿದುಬರುತ್ತಿದೆ. ಇನ್ನು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಏನೆಲ್ಲ ವಿಶೇಷತೆ ಇರಲಿದೆ, ಯಾವೆಲ್ಲ ಸರ್ಪ್ರೈಸ್ ಅಭಿಮಾನಿಗಳಿಗೆ ಕಾದಿದೆ ಎನ್ನುವುದು ಸಹ ಸದ್ಯದ ಕುತೂಹಲ.

ಹುಟ್ಟುಹಬ್ಬ ಆಚರಣೆಗೆ ಒಂದು ದಿನಕ್ಕೂ ಮೊದಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುವ ಮೂಲಕ ಪ್ರೀತಿ, ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಚಿರಂಜೀವಿ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಈ ವರ್ಷ ಕೂಡ ಚಿರಂಜೀವಿ ಸರಳವಾಗಿ ಕುಟುಂಬದ ಜೊತೆ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ಕಾರಣದಿಂದ ಎಲ್ಲಾ ಸಂಭ್ರಮ, ಅದ್ದೂರಿತನಕ್ಕೆ ಬ್ರೇಕ್ ಬಿದ್ದಿದೆ. ಹಾಗಾಗಿ ಮೆಗಾಸ್ಟಾರ್ ಹುಟ್ಟುಹಬ್ಬ ಸರಳವಾಗಿ ಇರಲಿದೆ ಎನ್ನಲಾಗುತ್ತಿದೆ. ಈ ನಡುವೆ ಮೆಗಾಸ್ಟಾರ್ 'ಗಾಡ್ ಫಾದರ್' ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಕ್ಕಿದೆ. ಮುಂದೆ ಓದಿ..

153ನೇ ಸಿನಿಮಾ 'ಗಾಡ್ ಫಾದರ್'

153ನೇ ಸಿನಿಮಾ 'ಗಾಡ್ ಫಾದರ್'

ಚಿರಂಜೀವಿ ನಟನೆಯ 153ನೇ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಆಗಿದ್ದು, ಹೊಸ ಸಿನಿಮಾಗೆ ಗಾಡ್ ಫಾದರ್ ಎಂದು ಟೈಟಲ್ ಇಡಲಾಗಿದೆ. ಹುಟ್ಟುಹಬ್ಬದ ಮುನ್ನದಿನವೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಲೂಸಿಫರ್ ಸಿನಿಮಾದ ರಿಮೇಕ್

ಲೂಸಿಫರ್ ಸಿನಿಮಾದ ರಿಮೇಕ್

ನಿರ್ದೇಶಕ ಮೋಹನ್ ರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಗಾಡ್ ಫಾದರ್' ಚಿತ್ರದ ಪೋಸ್ಟರ್ ಮೆಗಾಸ್ಟಾರ್ ಲುಕ್ ರಿವೀಲ್ ಆಗಿಲ್ಲ. ಆದರೆ ಬ್ಯಾಕ್ ಪೋಸ್ ನಲ್ಲಿ ಗನ್ ಹಿಡಿದು ನಿಂತಿದ್ದಾರೆ. ಅಂದಹಾಗೆ ಗಾಡ್ ಫಾದರ್ ಮಲಯಾಳಂನ ಸೂಪರ್ ಹಿಟ್ ಲೂಸಿಫರ್ ಸಿನಿಮಾದ ರಿಮೇಕ್ ಆಗಿದೆ. ರಿಮೇಕ್ ನಲ್ಲಿ ಕೆಲವು ಬದಲಾವಣೆಯೊಂದಿಗೆ ಸಿನಿಮಾ ಪ್ರಾರಂಭಿಸಿದ್ದಾರೆ ನಿರ್ದೇಶಕ ಮೋಹನ್ ರಾಜ್.

ಗಾಡ್ ಫಾದರ್ ಚಿತ್ರೀಕರಣ ಪ್ರಾರಂಭವಾಗಿದೆ

ಗಾಡ್ ಫಾದರ್ ಚಿತ್ರೀಕರಣ ಪ್ರಾರಂಭವಾಗಿದೆ

ಗಾಡ್ ಫಾದರ್ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್ ಎಸ್ ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಹೈ ವೋಲ್ಟೇಜ್ ಆಕ್ಷನ್ ದೃಶ್ಯದ ಮೂಲಕ ಚಿತ್ರೀಕರಣ ಆರಂಭಮಾಡಿದ್ದಾರೆ. ಇಂದು ಚಿರಂಜೀವಿ ಕಡೆಯಿಂದ ಸಖತ್ ಗಿಫ್ಟ್ ಸಿಕ್ಕಿದ ಖುಷಿಯಲ್ಲಿರುವ ಅಭಿಮಾನಿಗಳು ಹುಟ್ಟುಹಬ್ಬದ ದಿನ ಏನೆಲ್ಲ ಇರಲಿದೆ ಎಂದು ಕಾಯುತ್ತಿದ್ದಾರೆ.

ಆಚಾರ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ

ಆಚಾರ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ

ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ಆಚಾರ್ಯ ಚಿತ್ರದಲ್ಲಿ ಚಿರಂಜೀವಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಫಸ್ಟ್ ಮತ್ತು ಟೀಸರ್ ಬಿಡುಗಡೆಯಾಗಿದೆ. ಹುಟ್ಟುಹಬ್ಬದ ದಿನ ಚಿತ್ರದಿಂದ ಮತ್ತೊಂದು ಪೋಸ್ಟರ್ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

ಅಭಿಮಾನಿಗಳಲ್ಲಿ ಚಿರಂಜೀವಿ ವಿಶೇಷ ಮನವಿ

ಅಭಿಮಾನಿಗಳಲ್ಲಿ ಚಿರಂಜೀವಿ ವಿಶೇಷ ಮನವಿ

ಇನ್ನು ಹುಟ್ಟುಹಬ್ಬ ಆಚರಣೆಯ ಒಂದು ದಿನ ಮುಂಚೆಯೇ ಚಿರಂಜೀವಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಪ್ಲಾನ್ ಮಾಡಿರುವ ಮೆಗಾಸ್ಟಾರ್ ಪರಿಸರ ಕಾಳಜಿ ಮೆರೆದಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಸಿಗಳನ್ನು ನೆಜುವಂತೆ ಕೇಳಿಕೊಂಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿ 3 ಸಿಸಿಗಳನ್ನು ನೆಟ್ಟು ಟ್ಯಾಗ್ ಮಾಡಿ ಎಂದು ಹೇಳಿದ್ದಾರೆ. ಈ ಬಗ್ಗೆ ಮೆಗಾಸ್ಟಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಸಸಿ ನೆಟ್ಟು ಟ್ಯಾಗ್ ಮಾಡಿ ಎಂದ ಮೆಗಾಸ್ಟಾರ್

ಸಸಿ ನೆಟ್ಟು ಟ್ಯಾಗ್ ಮಾಡಿ ಎಂದ ಮೆಗಾಸ್ಟಾರ್

"ನಾವೆಲ್ಲರೂ ಪ್ರಕೃತಿ ತಾಯಿಗೆ ಋಣಿಯಾಗಿದ್ದೇವೆ. ಹವಮಾನ ಬದಲಾವಣೆ, ವಾಯು ಮಾಲಿನ್ಯ ವಿರುದ್ಧ ಹೋರಾಡಲು ಸಸಿಗಳನ್ನು ನೆಡೋಣ ಮತ್ತು ಮರಗಳನ್ನು ಬೆಳೆಸೋಣ. ಈ ವರ್ಷ ನನ್ನ ಹುಟ್ಟುಹಬ್ಬದಂದು ಪ್ರೀತಿಯ ಅಭಿಮಾನಿಗಳಿಗೆ 3 ಸಸಿಗಳನ್ನು ನೆಡುವಂತೆ ಮನವಿ ಮಾಡಿಕೊಳ್ಳುತ್ತೇನೆ. #HaraHaiTohBharaHai ಟ್ಯಾಗ್ ಮಾಡಿ. ಗೋಗ್ರೀನ್ ಅಭಿಯಾನವನ್ನು ಬೆಂಬಲಿಸೋಣ" ಎಂದು ಮೆಗಾಸ್ಟಾರ್ ಬರೆದುಕೊಂಡಿದ್ದಾರೆ.

More from Filmibeat

English summary
Megastar Chiranjeevi 153rd movie Titled Godfather.153 movie Title poster reveals for his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X