ಆಚಾರ್ಯ ಸಿನಿಮಾದ ಒಂದು ಸೆಟ್ ನ ಬಜೆಟ್ ಎಷ್ಟು ಗೊತ್ತೆ?
ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಸಿನಿಮಾ ಈಗಾಗಲೇ ಸುದ್ದಿಯಲ್ಲಿದೆ. ಕೊರಟಾಲ ಶಿವ ನಿರ್ದೇಶಿಸುತ್ತಿರುವ ಈ ಸಿನಿಮಾ ಚಿರು ಈಗಲೇ ಸಖತ್ ಕ್ರೇಜ್ ಹುಟ್ಟಿಸಿದೆ ಎರಡು ತೆಲುಗು ರಾಜ್ಯದಲ್ಲಿ.
ಈಗಾಗಲೇ ಶೇ 40% ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ. ಉಳಿದ ಭಾಗಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲಾಗುತ್ತಿದೆ.
ಸಿನಿಮಾಕ್ಕಾಗಿ ಇತ್ತೀಚೆಗೆ ಬೃಹತ್ ಆದ ಸೆಟ್ ಒಂದನ್ನು ನಿರ್ಮಿಸಲಾಗಿದ್ದು, ಸೆಟ್‌ನ ಬಜೆಟ್ ಗಾಬರಿ ಹುಟ್ಟಿಸುವಂತಿದೆ.

ಸಿನಿಮಾದ ಕತೆಗನುಸಾರವಾಗಿ ಕೇರಳದ ಹಳ್ಳಿಯೊಂದರ ಸೆಟ್ ಬೇಕಿತ್ತು. ಈ ಮೊದಲು ಕೇರಳಕ್ಕೆ ಹೋಗಿ ಚಿತ್ರೀಕರಣ ಮಾಡುವ ಉಮೇದಿನಲ್ಲಿದ್ದ ಚಿತ್ರತಂಡ ನಂತರ ತಮ್ಮ ಯೋಜನೆ ಬದಲಾಯಿಸಿ, ಹೈದರಾಬಾದ್‌ನಲ್ಲಿಯೇ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸುತ್ತಿದ್ದಾರೆ.
ಒಂದು ದೇವಸ್ಥಾನ ಹಾಗೂ ಕೆಲವು ಮನೆಗಳ ಈ ಸೆಟ್‌ಗೆ ಖರ್ಚು ಮಾಡಿರುವುದು ಬರೋಬ್ಬರಿ 20 ಕೋಟಿ ರೂಪಾಯಿ. ದೇವಸ್ಥಾನ ಒಂದರ ನಿರ್ಮಾಣಕ್ಕೆ ಸುಮಾರು 6 ಕೋಟಿ ಖರ್ಚು ಮಾಡಿದೆಯಂತೆ ಚಿತ್ರತಂಡ.
ಚಿರಂಜೀವಿ ಅವರ ಈ ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಅವರ ಪುತ್ರ ರಾಮ್ ಚರಣ್ ತೇಜ. ಹಾಗಾಗಿಯೇ ಸಿನಿಮಾದ ಗುಣಮಟ್ಟದಲ್ಲಿ ಯಾವುದೇ ಕಾಂಪ್ರೊಮೈಸ್ ಮಾಡಿಕೊಳ್ಳದೆ ಸಿನಿಮಾಕ್ಕೆ ಬೇಕಾದ ಎಲ್ಲವನ್ನೂ ಒದಗಿಸುತ್ತಿದ್ದಾರೆ.
Recommended Video
ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಮದುವೆಯಾಗಿ ಹನಿಮೂನ್ ಮುಗಿಸಿ ಬಂದಿರುವ ಕಾಜಲ್, ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ತಮಿಳಿನ ರೋಜಾ ಖ್ಯಾತಿಯ ನಟ ಅರವಿಂದ ಸ್ವಾಮಿ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











