ತಲಾ ಅಜಿತ್ ಅಭಿನಯದ ಈ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಮೆಗಾಸ್ಟಾರ್
ತಮಿಳಿನ ಖ್ಯಾತ ನಟ ಅಜಿತ್ ಅಭಿನಯದ ಸೂಪರ್ ಹಿಟ್ 'ವೇದಲಂ' ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ. ತೆಲುಗು ರಿಮೇಕ್ ಬಗ್ಗೆ ಈಗಾಗಲೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. 2015ರಲ್ಲಿ ರಿಲೀಸ್ ವೇದಲಂ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ ಸಿನಿಮಾ. ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ವೇದಲಂ ತೆಲುಗು ಚಿತ್ರರಂಗದಲ್ಲಿಯೂ ಅಬ್ಬರಿಸಲಿದೆ ಎನ್ನುವ ಮಾತು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಇನ್ನೂ ತೆಲುಗಿನಲ್ಲಿ ಸಿನಿಮಾ ಸೆಟ್ಟಿರಿಲ್ಲ.
Recommended Video
ಸದ್ಯ ವೇದಲಂ ತೆಲುಗು ರಿಮೇಕ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ತಲಾ ಅಜಿತ್ ಅಭಿನಯದ ವೇದಲಂ ತೆಲುಗು ರಿಮೇಕ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಜಿತ್ ಪಾತ್ರದಲ್ಲಿ ಮೆಗಾಸ್ಟಾರ್ ಮಿಂಚಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ.
ಈ ಮೊದಲು ವೇದಲಂ ತೆಲುಗು ರಿಮೇಕ್ ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ 'ಜಿಲ್ಲಾ' ಸಿನಿಮಾ ಖ್ಯಾತಿಯ ನಿರ್ದೇಶಕ ನಿಸನ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಪವನ್ ಕಲ್ಯಾಣ್ ಬದಲು ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವೇದಲಂ ತೆಲುಗು ರಿಮೇಕ್ ಗೆ ನಿರ್ದೇಶಕ ಮೆಹರ್ ರಮೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಪವನ್ ಕಲ್ಯಾಣ್ ಅಭಿನಯಿಸಬೇಕಿದ್ದ ಸಿನಿಮಾ ಚಿರಂಜೀವಿ ಪಾಲಾಗಿದ್ದೇಕೆ ಎನ್ನುವುದು ಬಹಿರಂಗವಾಗಿಲ್ಲ. ಆದರೆ ವೇದಲಂ ಸಿನಿಮಾದಲ್ಲಿ ಚಿರಂಜೀವಿ ಅಭಿನಯಿಸುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಚಿರಂಜೀವಿ ಹುಟ್ಟುಹಬ್ಬದ ದಿನ ಸಿನಿಮಾ ಅಧಿಕೃತವಾಗಿ ಬಹಿರಂಗವಾಗಲಿದೆಯಂತೆ.


Click it and Unblock the Notifications











