'ಪುಷ್ಪ'- 2 ಅಖಾಡಕ್ಕೆ ಮೆಗಾಸ್ಟಾರ್? ಶೂಟಿಂಗ್ ತಡವಾಗಲು ಅದೇ ಕಾರಣನಾ?

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ' -2 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಮುಹೂರ್ತ ನೆರವೇರಿಸಿ ತಿಂಗಳಾದರೂ ಇನ್ನು ಶೂಟಿಂಗ್ ಶುರುವಾಗಿಲ್ಲ. ಶೀಘ್ರದಲ್ಲೇ ಚಿತ್ರೀಕರಣಕ್ಕೆ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆಯಂತೆ. ಅಕ್ಟೋಬರ್‌ನಲ್ಲಿ 'ಪುಷ್ಪ'ರಾಜ್ ಮತ್ತೆ ಕ್ಯಾಮರಾ ಮುಂದೆ ನಿಲ್ತಾನೆ ಎನ್ನುವ ಗುಸುಗುಸು ಶುರುವಾಗಿದೆ.

ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು. 350 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅಲ್ಲು ಅರ್ಜುನ್- ರಶ್ಮಿಕಾ ಜೋಡಿ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ರಕ್ತಚಂದನ ಸ್ಮಗ್ಮರ್ 'ಪುಷ್ಪ'ರಾಜ್ ಕಥೆಯನ್ನು ಎರಡು ಭಾಗಗಳಾಗಿ ಹೇಳಲಾಗ್ತಿದ್ದು, 2ನೇ ಭಾಗ ಭಾರೀ ಕುತೂಹಲ ಕೆರಳಿಸಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ.

ಮೂಹರ್ತ ನೆರವೇರಿಸಿದ್ದರೂ ಶೂಟಿಂಗ್ ಯಾಕೆ ಶುರು ಮಾಡಿಲ್ಲ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಗುತ್ತಿದೆ. ಅಲ್ಲು ಫ್ಯಾಮಿಲಿ ಹೈದರಾಬಾದ್‌ನಲ್ಲಿ ಒಂದು ಸಿನಿಸ್ಟುಡಿಯೋ ನಿರ್ಮಿಸಿದೆ. 'ಅಲ್ಲು ಸ್ಟುಡಿಯೋಸ್' ಈ ಹೆಸರಿನಲ್ಲಿ ಈ ಸ್ಟುಡಿಯೋ ತಲೆ ಎತ್ತಿದೆ. ಇದೀಗ ಸ್ಟುಡಿಯೋ ನಿರ್ಮಾಣವಾಗಿದ್ದು, ಅಕ್ಟೋಬರ್ 1ರಂದು ಆರಂಭಿಸಲು ಸಿದ್ಧತೆ ನಡೀತಿದೆಯಂತೆ. 'ಪುಷ್ಪ' -2 ಸಿನಿಮಾ ಶೂಟಿಂಗ್ ಮಾಡುವ ಮೂಲಕ ಶುಭಾರಂಭ ಮಾಡುವ ಪ್ರಯತ್ನ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆ ಪೂಜೆ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಬರ್ತಾರೆ ಎನ್ನಲಾಗ್ತಿದೆ.

Megastar Chiranjeevi will grace the inauguration ceremony of Allu studios

ಅಲ್ಲು ಅರ್ಜುನ್ ತಾತ ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯ ಹೆಸರಿನಲ್ಲಿಈ ಸ್ಟುಡಿಯೋ ನಿರ್ಮಾಣವಾಗಿದೆ. ಅಕ್ಟೋಬರ್ 1ರಂದು ರಾಮಲಿಂಗಯ್ಯ 100ನೇ ಜಯಂತೋತ್ಸವ ನಡೆಯಲಿದೆ. ಅದೇ ದಿನ ಸ್ಟುಡಿಯೋಗೆ ಚಾಲನೆ ಸಿಗಲಿದೆ. ಮೆಗಾಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ಸಂಬಂಧಿಕರು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿ ಮದುವೆ ಆಗಿದ್ದಾರೆ. ಚಿರಂಜೀವಿ ಉಪಸ್ಥಿತಿಯಲ್ಲಿ 'ಅಲ್ಲು ಸ್ಟುಡಿಯೋಸ್' ಆರಂಭಿಸುವ ಬಗ್ಗೆ ಚರ್ಚೆ ನಡೀತಿದೆಯಂತೆ. ಇನ್ನು ಮೆಗಾ ಫ್ಯಾಮಿಲಿ ಸದಸ್ಯರೆಲ್ಲಾ ಕಾರ್ಯಕ್ರಮಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

Megastar Chiranjeevi will grace the inauguration ceremony of Allu studios

ಸಿನಿಮಾ ನಿರ್ಮಾಣಕ್ಕೆ ಬೇಕಾದ ಸಕಲ ಸೌಕರ್ಯಗಳು ಒಂದೇ ಕಡೆ ಸಿಗುವಂತೆ 10 ಎಕರೆ ಜಾಗದಲ್ಲಿ 'ಅಲ್ಲು ಸ್ಟುಡಿಯೋಸ್' ನಿರ್ಮಾಣವಾಗಿದೆ. ಸಿನಿಮಾಗಳ ಜೊತೆಗೆ ವೆಬ್‌ ಸೀರಿಸ್, ಸೀರಿಯಲ್ ಶೂಟಿಂಗ್‌ಗೂ ಸ್ಟುಡಿಯೋ ಬಾಡಿಗೆ ಕೊಡ್ತಿದ್ದಾರೆ. ಹೈದರಾಬಾದ್‌ನಲ್ಲಿ ರಾಮೋಜಿ ಫಿಲ್ಮ್ ಸಿಟಿ ಜೊತೆಗೆ ಅಕ್ಕಿನೇನಿ ಫ್ಯಾಮಿಲಿಯ 'ಅನ್ನಪೂರ್ಣ ಸ್ಟುಡಿಯೋ,' ದಗ್ಗುಬಾಟಿ ಫ್ಯಾಮಿಲಿಯ 'ರಾಮಾನಾಯುಡು ಸ್ಟುಡಿಯೋ', ನಂದಮೂರಿ ಫ್ಯಾಮಿಲಿಯ 'ರಾಮಕೃಷ್ಣ ಸ್ಟುಡಿಯೋ'ಗಳಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಇದೇ ಸಾಲಿಗೆ 'ಅಲ್ಲು ಸ್ಟುಡಿಯೋ' ಕೂಡ ಸೇರಿಕೊಳ್ಳುತ್ತಿದೆ.

More from Filmibeat

English summary
Megastar Chiranjeevi will grace the inauguration ceremony of Allu studios. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X