For Quick Alerts
  ALLOW NOTIFICATIONS  
  For Daily Alerts

  'ಲವ್ ಮಾಕ್ಟೇಲ್' ತೆಲುಗು ರಿಮೇಕ್ ಗೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿ

  |

  ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡ ಲವ್ ಮಾಕ್ಟೇಲ್ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿರುವ ವಿಚಾರ ಹಳೆದು. ತೆಲುಗು ಲವ್ ಮಾಕ್ಟೇಲ್ ನಲ್ಲಿ ನಿಧಿಮಾ ಪಾತ್ರದಲ್ಲಿ ನಟಿ ತಮನ್ನಾ ಕಾಣಿಸಿಕೊಂಡರೆ, ಆದಿ ಪಾತ್ರದಲ್ಲಿ ನಟ ಸತ್ಯದೇವ್ ಬಣ್ಣಹಚ್ಚುತ್ತಿದ್ದಾರೆ.

  ಅಂದ್ಹಾಗೆ ತೆಲುಗು ರಿಮೇಕ್ ಗೆ ಕನ್ನಡದ ನಿರ್ದೇಶಕ ನಾಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ ಹೊರ ಬಿದ್ದಿದೆ. ಚಿತ್ರಕ್ಕೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿಯಾಗಿದೆ. ಹೌದು, ಚಿತ್ರದಲ್ಲಿ ನಟಿ ಮೇಘಾ ಆಕಾಶ್ ನಟಿಸುತ್ತಿದ್ದಾರೆ. ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಅಂದರೆ ಮೇಘಾ, ಕನ್ನಡದಲ್ಲಿ ಅದಿತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ರಚನಾ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. 2017ರಲ್ಲಿ ಚಿತ್ರರಂಗ ಪ್ರವೇಶ ಮಾಡಿರುವ ಮೇಘಾ ಆಕಾಶ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಾಗಶೇಖರ್ ನಿರ್ದೇಶನದ ಲವ್ ಮಾಕ್ಟೇಲ್ ರಿಮೇಕ್ ನಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಅಂದ್ಹಾಗೆ ಚಿತ್ರದ ಕಥೆ ಕೇಳಿ ತುಂಬಾ ಇಷ್ಟಪಟ್ಟಿದ್ದಾರಂತೆ. ಈ ಸಿನಿಮಾದಲ್ಲಿ ನಟಿಸಲು ಸಖತ್ ಉತ್ಸುಕರಾಗಿದ್ದಾರಂತೆ ಎಂದು ಹೇಳಲಾಗುತ್ತಿದೆ.

  ಇನ್ನೂ ಉಳಿದಂತೆ ಸಿನಿಮಾದಲ್ಲಿ ಯಾರೆಲ್ಲ್ ನಟಿಸಲಿದ್ದಾರೆ ಎನ್ನುವುದು ಬಹಿರಂಗವಾಗ ಬೇಕಿದೆ. 2020 ಫೆಬ್ರವರಿಯಲ್ಲಿ ರಿಲೀಸ್ ಆದ ಲವ್ ಮಾಕ್ಟೇಲ್ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ. ಪ್ರೀತಿ, ಹಾಸ್ಯ, ಭಾವನಾತ್ಮಕ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು.

  ಇದೀಗ ಲವ್ ಮಾಕ್ಟೇಲ್ ಪಾರ್ಟ್-2 ಸಿದ್ಧವಾಗುತ್ತಿದೆ. ಈಗಾಗಲೇ 60ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ರಿಲೀಸ್ ಪ್ಲಾನ್ ಮಾಡಿದೆ. ಸದ್ಯ ತೆಲುಗಿನಲ್ಲಿ ತಯಾರಾಗುತ್ತಿರುವ ಕನ್ನಡದ ಲವ್ ಮಾಕ್ಟೇಲ್ ಅನ್ನು ತೆಲುಗು ಚಿತ್ರಪ್ರಿಯರು ಇಷ್ಟಪಡುತ್ತಾರಾ ಎಂದು ಕಾದುನೋಡಬೇಕು.

  English summary
  Actress Megha Akash to join Tamannah and Satyadev's love mocktail remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X