ಗುಟ್ಟಾಗಿ ಮೆಹ್ರೀನ್ ಪಿರ್ಜಾದಾ ಮದುವೆ? ಕೊನೆಗೂ ಮೌನ ಮುರಿದ 'ನೀ ಸಿಗೊವರೆಗೂ' ಸಿನಿಮಾ ನಟಿ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲ ಇರುವುದು ಸಹಜ. ಅದರಲ್ಲೂ ಸ್ಟಾರ್ ನಟಿಯರು ಯಾರನ್ನು ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಸದಾ ಕಾಡುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳು ಕೆಲವೊಮ್ಮೆ ನಿಜವಾದರೆ ಇನ್ನು ಕೆಲವು ಬಾರಿ ಬರಿ ವದಂತಿಗಳಾಗಿಯೇ ಉಳಿದುಬಿಡುತ್ತವೆ.

ಇತ್ತೀಚಿನ ದಿನಗಳಲ್ಲಿ ಟಾಲಿವುಡ್‌ ಖ್ಯಾತ ನಟಿಯೊಬ್ಬರ ಬಗ್ಗೆ ಇಂತಹದ್ದೇ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಅವರು ಈಗಾಗಲೇ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಒಂದಲ್ಲ ಒಂದು ರೀತಿಯ ಚರ್ಚೆಗಳು ನಡೆಯುತ್ತಲೇ ಇದ್ದವು.

Mehreen Pirzada has finally responded to the rumors circulating about her alleged secret marriage

ಗಾಸಿಪ್‌ಗಳಿಗೆ ಆಹಾರವಾಗಿದ್ದ ಈ ನಟಿ ಇಷ್ಟು ದಿನ ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ. ತಮ್ಮ ಬಗ್ಗೆ ಹಬ್ಬಿರುವ ಎಲ್ಲಾ ಸುಳ್ಳು ಸುದ್ದಿಗಳಿಗೆ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ ಪಂಜಾಬಿ ಮೂಲದ ಸೌಂದರ್ಯರಾಶಿ ಮೆಹ್ರೀನ್ ಪೀರ್ಜಾದಾ.

ಎಲ್ಲಾ ಗಾಸಿಪ್‌ಗೆ ಬ್ರೇಕ್

ಮೆಹ್ರೀನ್ ಪೀರ್ಜಾದಾ ಕಳೆದ 2 ವರ್ಷಗಳಿಂದ ಸಿನಿಮಾಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಈ ಹಿಂದೆ ಅವರಿಗೆ ನಿಶ್ಚಿತಾರ್ಥವಾಗಿ ಅದು ಮುರಿದುಬಿದ್ದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆ ಘಟನೆಯ ನಂತರ ಮೆಹ್ರೀನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಹರಡಿದ್ದವು.

ಅಷ್ಟೇ ಅಲ್ಲದೆ ಮೆಹ್ರೀನ್ ಗುಟ್ಟಾಗಿ ವಿವಾಹವಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ ಮಾಡಿದ್ದರಿಂದ ಈ ಅನುಮಾನಗಳು ದಟ್ಟವಾಗಿದ್ದವು. ಈಗ ಮೆಹ್ರೀನ್ ಈ ಎಲ್ಲಾ ಗೊಂದಲಗಳಿಗೆ ನೇರವಾಗಿಯೇ ಉತ್ತರ ನೀಡಿದ್ದಾರೆ.

Mehreen Pirzada has finally responded to the rumors circulating about her alleged secret marriage

ನಾನು ಯಾರನ್ನು ಮದುವೆಯಾಗಿಲ್ಲ

ಮದುವೆ ವದಂತಿಗಳ ಬಗ್ಗೆ ಮಾತನಾಡಿದ ಮೆಹ್ರೀನ್ "ನಾನು ಯಾರನ್ನು ಮದುವೆಯಾಗಿಲ್ಲ. ಪ್ರಸ್ತುತ ನಾನು ಸಿಂಗಲ್ ಆಗಿದ್ದೇನೆ. ನನ್ನ ಮದುವೆ ಬಗ್ಗೆ ನಡೆಯುತ್ತಿರುವ ಎಲ್ಲಾ ಚರ್ಚೆಗಳು ಸುಳ್ಳು. ಎರಡು ವರ್ಷಗಳಿಂದ ನನ್ನ ಬಗ್ಗೆ ತಪ್ಪು ಮಾಹಿತಿಗಳು ಹರಡುತ್ತಿವೆ. ಅದಕ್ಕೆ ಈಗ ತೆರೆ ಎಳೆಯಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಸಿನಿಮಾ ರಂಗದಲ್ಲಿ ನಟಿಯರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು ಸುಲಭ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ನನ್ನ ಜೀವನದಲ್ಲಿ ಏನಾದರೂ ವಿಶೇಷ ನಡೆದರೆ ನಾನೇ ಅಧಿಕೃತವಾಗಿ ತಿಳಿಸುತ್ತೇನೆ. ಅಲ್ಲಿಯವರೆಗೆ ದಯವಿಟ್ಟು ಇಂತಹ ವದಂತಿಗಳನ್ನು ನಂಬಬೇಡಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೆಲಸದ ಮೇಲೆ ಮೆಹ್ರೀನ್ ಗಮನ...

ಸದ್ಯ ಮೆಹ್ರೀನ್ ಪೀರ್ಜಾದಾ ತಮ್ಮ ಸಿನಿಮಾಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಕೆಲವು ದಿನಗಳ ಕಾಲ ಅವರು ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು. ಈಗ ಮತ್ತೆ ಫಾರ್ಮ್ಗೆ ಮರಳಲು ಸಿದ್ಧರಾಗುತ್ತಿದ್ದಾರೆ. ಉತ್ತಮ ಕಥೆಗಳಿಗಾಗಿ ಅವರು ಕಾಯುತ್ತಿದ್ದಾರೆ ಎಂಬ ಮಾಹಿತಿ ಇದೆ.

ಮೆಹ್ರೀನ್ ಈ ಸ್ಪಷ್ಟನೆಯಿಂದ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವದಂತಿಗಳಿಗೆ ಕಿವಿಗೊಡದೆ ತಮ್ಮ ನೆಚ್ಚಿನ ನಟಿಯನ್ನು ಮತ್ತೆ ಬೆಳ್ಳಿತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೆಹ್ರೀನ್ ಈ ದಿಟ್ಟ ನಿಲುವಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ 'ನೀ ಸಿಗೊವರೆಗೂ' ಎಂಬ ಚಿತ್ರದಲ್ಲಿ ಆಕೆ ನಟಿಸಿದ್ದಾರೆ. ಶಿವಣ್ಣನ ಜೋಡಿಯಾಗಿ ಮಿಂಚಿದ್ದಾರೆ.

More from Filmibeat

English summary
For the first time, Mehreen Pirzada reacted to reports suggesting she had tied the knot secretly.
Read more about: actress tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X