For Quick Alerts
  ALLOW NOTIFICATIONS  
  For Daily Alerts

  'ಲೈಗರ್': ವಿಜಯ್ ದೇವರಕೊಂಡಗಿಂತಲೂ ಹೆಚ್ಚಿನ ಸಂಭಾವನೆ ಪಡೆದ ಮೈಕ್ ಟೈಸನ್

  By ಫಿಲ್ಮಿಬೀಟ್ ಡೆಸ್ಕ್
  |

  ತೆಲುಗು ಸೆನ್ಸೇಶನ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ 'ಲೈಗರ್​' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೊರೊನಾ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಮಾಡಿರುವ ಸಿನಿಮಾತಂಡ ಇತ್ತೀಚಿಗಷ್ಟೆ ಚಿತ್ರದ ಬಗ್ಗೆ ಸಖತ್ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ಚಿತ್ರದಲ್ಲಿ ಬಾಕ್ಸಿಂಗ್​ ಲೆಜೆಂಡ್​ ಮೈಕ್​ ಟೈಸನ್​ ನಟಿಸುವ ವಿಚಾರವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

  ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಚಿತ್ರಕ್ಕೆ ಸದ್ಯ ಎಂಟ್ರಿ ಕೊಟ್ಟಿರುವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಸಂಭಾವನೆ ವಿಚಾರ ಇದೀಗ ಸದ್ದು ಮಾಡುತ್ತಿದೆ. ಟಾಲಿವುಡ್ ನಲ್ಲಿಗ ಅವರ ಸಂಭಾವನೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಈ ಸಿನಿಮಾಗೆ ಟೈಸನ್ ಹೀರೋ ವಿಜಯ್ ದೇವರಕೊಂಡ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಅಂದಹಾಗೆ ಲೈಗರ್ ನಲ್ಲಿ ಮೈಕ್​ ಟೈಸನ್ ಕಾಣಿಸಿಕೊಳ್ಳುವುದು ಅತಿಥಿ ಪಾತ್ರದಲ್ಲಿ.​ ಕ್ಲೈಮ್ಯಾಕ್ಸ್​ಗಿಂತಲೂ ಮುನ್ನ ಬರುವ ಒಂದು ದೃಶ್ಯದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಪುಟ್ಟ ಪಾತ್ರಕ್ಕಾಗಿ ಅವರು ದುಬಾರಿ ಸಂಭಾವನೆಯನ್ನು ಜೇಬಿಗೆ ಇಳಿಸುತ್ತಿರುವುದು ಅಚ್ಚರಿ ಮೂಡಿಸಿದೆ. ವಿಜಯ್​ ದೇವರಕೊಂಡ ಅವರ ಸಂಬಳಕ್ಕಿಂತಲೂ ದೊಡ್ಡ ಮೊತ್ತ ಎಂಬ ಸುದ್ದಿ ಕೇಳಿಬಂದಿದೆ. ಆದರೆ ನಿರ್ದಿಷ್ಟವಾಗಿ ಎಷ್ಟು ಎಂಬುದು ಬಹಿರಂಗವಾಗಿಲ್ಲ.

  ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಲೈಗರ್ ಸಿನಿಮಾವನ್ನು ನಿರ್ದೇಶಕ ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​, ಅಪೂರ್ವ ಮೆಹ್ತಾ, ಹೀರೂ ಯಶ್​ ಜೋಹರ್​ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ಮೈಕ್​ ಟೈಸನ್​ ಭಾಗದ ಚಿತ್ರೀಕರಣ ನೆಡೆಯಲಿದ್ದು ಅದಕ್ಕಾಗಿ ಅವರು ಅಮೆರಿಕದಿಂದ ಗೋವಾಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

  ಮೈಕ್ ಟೈಸನ್ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಅವರು ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬ್ಲ್ಯಾಕ್ ಆಂಡ್ ವೈಟ್', 'ಹ್ಯಾಂಗ್‌ ಓವರ್', 'ರಾಕಿ ಬಲ್ಬೋವಾ', 'ಸ್ಕೇರಿ ಮೂವಿ', 'ಗ್ರಡ್ಜ್ ಮ್ಯಾಚ್', 'ಐಪಿ ಮ್ಯಾನ್ 3', 'ಚೈನಾ ಸೇಲ್ಸ್ ಮ್ಯಾನ್', 'ಕಿಕ್‌ಬಾಕ್ಸರ್; ರಿಟ್ಯಾಲಿಯೇಷನ್', 'ಗರ್ಲ್ಸ್ 2', 'ಹ್ಯಾಮ್ಲೆಟ್ ಫರಾನ್' ಸಿನಿಮಾಗಳಲ್ಲಿ ಮೈಕ್ ಟೈಸನ್ ನಟಿಸಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

  ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಸಿನಿಮಾವು ಪ್ರಸ್ತುತ ಗೋವಾದಲ್ಲಿ ಕೆಲವು ಭರ್ಜರಿ ಆಕ್ಷನ್ ಸೀನ್‌ಗಳನ್ನು ಚಿತ್ರಿಸಿಕೊಳ್ಳುತ್ತಿದೆ.

  English summary
  Mike Tyson getting more remuneration than Actor Vijay Deverakonda.
  Thursday, September 30, 2021, 15:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X