For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಚಿತ್ರೀಕರಣಕ್ಕೆ ಮೈಕ್ ಟೈಸನ್ ಎಂಟ್ರಿ: ಅಮೆರಿಕಾದಲ್ಲಿ ಶೂಟಿಂಗ್

  |

  ವಿಜಯ್ ದೇವರಕೊಂಡ ನಟನೆ 'ಲೈಗರ್' ಚಿತ್ರದಲ್ಲಿ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ನಟಿಸುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚಿಗಷ್ಟೆ ಅಧಿಕೃತವಾಗಿತ್ತು. ಆದರೆ, ಮೈಕ್ ಟೈಸನ್ ಯಾವಾಗ ಈ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ ಎನ್ನುವ ಮಾಹಿತಿ ಇರಲಿಲ್ಲ. ಈಗ ಮೈಕ್ ಟೈಸನ್ ಎಂಟ್ರಿಗೆ ಸಮಯ ಬಂದಿದೆ.

  ಸದ್ಯದ ವರದಿ ಪ್ರಕಾರ ಅಮೆರಿಕಾದಲ್ಲಿ ನಡೆಯಲಿರುವ ಲೈಗರ್ ಚಿತ್ರೀಕರಣದಲ್ಲಿ ಮೈಕ್ ಟೈಸನ್ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಶೀಘ್ರದಲ್ಲಿ ಲೈಗರ್ ಚಿತ್ರತಂಡ ಯುಎಸ್‌ಎಗೆ ತೆರಳಲಿದೆ. ಯುಎಸ್‌ಎನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ದೇವರಕೊಂಡ ಮತ್ತು ಮೈಕ್ ಟೈಸನ್ ಮುಖಾಮುಖಿ ದೃಶ್ಯಗಳಲ್ಲಿ ಸೆರೆಹಿಡಿಯಲಾಗುವುದು.

  'ಲೈಗರ್' ಚಿತ್ರಕ್ಕೂ ಮೊದಲು 'ಬಾಕ್ಸಿಂಗ್ ಲೆಜೆಂಡ್' ಕನ್ನಡದಲ್ಲಿ ನಟಿಸಬೇಕಿತ್ತಂತೆ!'ಲೈಗರ್' ಚಿತ್ರಕ್ಕೂ ಮೊದಲು 'ಬಾಕ್ಸಿಂಗ್ ಲೆಜೆಂಡ್' ಕನ್ನಡದಲ್ಲಿ ನಟಿಸಬೇಕಿತ್ತಂತೆ!

  ಇದು ಚಿತ್ರದ ಪ್ರಮುಖ ದೃಶ್ಯಗಳಾಗಿದ್ದು, ಅದಕ್ಕಾಗಿ ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಪ್ಲಾನ್ ಮಾಡಿದೆ. ಈ ಚಿತ್ರೀಕರಣ ಮುಗಿಸಿ ಬಂದ್ಮೇಲೆ ಲೈಗರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಮುಂದೆ ಓದಿ....

  ವೀಸಾ ಅನುಮತಿಗೆ ಕಾಯುತ್ತಿದೆ ಚಿತ್ರತಂಡ

  ವೀಸಾ ಅನುಮತಿಗೆ ಕಾಯುತ್ತಿದೆ ಚಿತ್ರತಂಡ

  ತೆಲುಗಿನ ವೆಬ್‌ಸೈಟ್ ಹಾಗೂ ಕೆಲವು ಚಿತ್ರ ವಿಶ್ಲೇಷಕರು ವರದಿ ಮಾಡಿರುವಂತೆ, ವೀಸಾ ಕ್ಲಿಯರೆನ್ಸ್‌ಗಾಗಿ ಲೈಗರ್ ಚಿತ್ರತಂಡ ಕಾಯುತ್ತಿದೆ. ವೀಸಾಗೆ ಗ್ರೀನ್ ಸಿಗ್ನಿಲ್ ಸಿಗುತ್ತಿದ್ದಂತೆ ಅಮೆರಿಕಾಗೆ ಚಿತ್ರತಂಡ ಹಾರಲಿದೆ. ಯುಎಸ್‌ಎ ಭಾಗದ ಚಿತ್ರೀಕರಣ ಮುಗಿಸಿದರೆ, ಬಹುತೇಕ ಶೂಟಿಂಗ್ ಪೂರ್ಣಗೊಂಡಂತೆ. ಈಗಾಗಲೇ ವಿಜಯ್ ದೇವರಕೊಂಡ ಅವರ ಭಾಗದ ಬಹುತೇಕ ಶೂಟಿಂಗ್ ಮುಗಿದಿದೆ. ಮೈಕ್ ಟೈಸನ್ ಜೊತೆಗಿನ ದೃಶ್ಯಗಳು ಈಗ ಬಾಕಿ ಉಳಿದುಕೊಂಡಿದೆ.

  'ಲೈಗರ್' ಚಿತ್ರತಂಡ ಸೇರಿಕೊಂಡ 'ಭೂಮಿ ಮೇಲಿನ ಅತಿ ಕೆಟ್ಟ ಮನುಷ್ಯ''ಲೈಗರ್' ಚಿತ್ರತಂಡ ಸೇರಿಕೊಂಡ 'ಭೂಮಿ ಮೇಲಿನ ಅತಿ ಕೆಟ್ಟ ಮನುಷ್ಯ'

  ಮೈಕ್ ಟೈಸನ್ ಮೊದಲ ಭಾರತೀಯ ಚಿತ್ರ

  ಮೈಕ್ ಟೈಸನ್ ಮೊದಲ ಭಾರತೀಯ ಚಿತ್ರ

  ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ 'ಬಾಕ್ಸಿಂಗ್ ಲೆಜೆಂಡ್' ಮೈಕ್ ಟೈಸನ್ ನಟಿಸುತ್ತಿದ್ದಾರೆ. ಮೈಕ್ ಟೈಸನ್‌ಗೆ ಇದು ಮೊದಲ ಭಾರತೀಯ ಚಿತ್ರ ಎನ್ನುವುದು ವಿಶೇಷ. ಮೊದಲ ಸಲ ಭಾರತೀಯ ಚಿತ್ರದಲ್ಲಿ ಅದರಲ್ಲೂ ತೆಲುಗು ಮತ್ತು ಹಿಂದಿಯಲ್ಲಿ ಬರಲಿರುವ ನಿರೀಕ್ಷೆಯ ಚಿತ್ರದಲ್ಲಿ ಮೈಕ್ ಟೈಸನ್ ಅಭಿನಯಿಸುತ್ತಿರುವ ಬಗ್ಗೆ ಚಿತ್ರಪ್ರೇಮಿಗಳು ಥ್ರಿಲ್ ಆಗಿದ್ದಾರೆ.

  ಅನನ್ಯ ಪಾಂಡೆ ನಾಯಕಿ

  ಅನನ್ಯ ಪಾಂಡೆ ನಾಯಕಿ

  'ಲೈಗರ್' ಚಿತ್ರವೂ ಬಾಕ್ಸಿಂಗ್ ಕುರಿತಾದ ಸಿನಿಮಾ. ಸದ್ಯದ ಮಾಹಿತಿ ಪ್ರಕಾರ ಮೈಕ್ ಟೈಸನ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದೇವರಕೊಂಡ ಮತ್ತು ಅನನ್ಯ ಪಾಂಡೆ ಮೊದಲ ಕಾಂಬಿನೇಷನ್ ಸಿನಿಮಾ ಆಗಿರುವುದರಿಂದ ಸಹಜವಾಗಿ ಈ ಜೋಡಿ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು ನಟಿ ಚಾರ್ಮಿ ಮತ್ತು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ಪ್ರಮುಖ ದೃಶ್ಯವೊಂದರ ಚಿತ್ರೀಕರಣ ಗೋವಾದಲ್ಲಿ ನಡೆದಿದ್ದು, ಬಾಕ್ಸಿಂಗ್ ರಿಂಗ್‌ಗಳ ಸೆಟ್‌ ಹಾಕಿ ಶೂಟಿಂಗ್ ಮಾಡಲಾಗಿದೆ. ವಿಜಯ್ ಮತ್ತು ಅನನ್ಯ ಪಾಂಡೆ ದೃಶ್ಯಗಳು ಸಹ ಇಲ್ಲಿ ಶೂಟ್ ಮಾಡಲಾಗಿದೆ.

  ಮೈಕ್ ಟೈಸನ್ ಸಿನಿಮಾಗಳು

  ಮೈಕ್ ಟೈಸನ್ ಸಿನಿಮಾಗಳು

  ಅಂದ್ಹಾಗೆ, ಮೈಕ್ ಟೈಸನ್‌ಗೆ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಅವರು ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬ್ಲ್ಯಾಕ್ ಆಂಡ್ ವೈಟ್', 'ಹ್ಯಾಂಗ್‌ ಓವರ್', 'ರಾಕಿ ಬಲ್ಬೋವಾ', 'ಸ್ಕೇರಿ ಮೂವಿ', 'ಗ್ರಡ್ಜ್ ಮ್ಯಾಚ್', 'ಐಪಿ ಮ್ಯಾನ್ 3', 'ಚೈನಾ ಸೇಲ್ಸ್ ಮ್ಯಾನ್', 'ಕಿಕ್‌ಬಾಕ್ಸರ್; ರಿಟ್ಯಾಲಿಯೇಷನ್', 'ಗರ್ಲ್ಸ್ 2', 'ಹ್ಯಾಮ್ಲೆಟ್ ಫರಾನ್' ಸಿನಿಮಾಗಳಲ್ಲಿ ಮೈಕ್ ಟೈಸನ್ ನಟಿಸಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

  English summary
  Vijay Deverakonda's Liger team is waiting for the visa clearance, major part of the film needs to be shot in America. Mike Tyson to join in this schedule.
  Saturday, October 9, 2021, 14:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X