Mink Pub: ಪಬ್ ಪ್ರಕರಣ: ವರದಿಗಾರನನ್ನು ಹೀನಾ-ಮಾನ ಬೈದ ನಟಿ

ಕೆಲವು ದಿನಗಳ ಹಿಂದೆ ಯುಗಾದಿ ಹಬ್ಬದ ದಿನ ಹೈದರಾಬಾದ್‌ ಪೊಲೀಸ್ ಇಲಾಖೆಯ ವಿಶೇಷ ಟಾಸ್ಕ್ ಪೋರ್ಸ್ ನಗರದ ಐಶಾರಾಮಿ ಪಬ್ ಒಂದರ ಮೇಲೆ ದಾಳಿ ನಡೆಸಿ ಸುಮಾರು 150 ಮಂದಿ ವಿವಿಐಪಿಗಳನ್ನು ವಶಕ್ಕೆ ಪಡೆದಿತ್ತು.

ವಶಕ್ಕೆ ಪಡೆದವರಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಸಹ ಇದ್ದರು. ಇವರು ಮಾತ್ರವೇ ಅಲ್ಲದೆ ಹಲವು ನಟ-ನಟಿಯರು, ರಾಜಕಾರಣಿಗಳ ಮಕ್ಕಳು ಅದರಲ್ಲಿದ್ದರು ಎಂದು ವರದಿ ಯಾಗಿತ್ತು. ಈ ರೇಡ್‌ ತೆಲುಗು ರಾಜ್ಯಗಳಲ್ಲಿ ಸಂಚಲನ ಸೃಷ್ಟಿಸಿತ್ತು, ಜೊತೆಗೆ ಅಷ್ಟೆ ಬೇಗ ಮರೆರಯಾಗಿಯೂ ಬಿಟ್ಟಿತು.

ದಾಳಿ ವೇಳೆ ಸಿಕ್ಕವರಲ್ಲಿ ನಟಿ ಹೇಮಾ ಸಹ ಇದ್ದರು ಎಂದು ಸುದ್ದಿ ಹರಿದಾಡಿತ್ತು. ಆದರೆ ಇದನ್ನು ಅಲ್ಲಗಳೆದ ನಟಿ ಹೇಮಾ ಆ ನಂತರ ತಾವೇ ಖುದ್ದಾಗಿ ಪೊಲೀಸ್ ಠಾಣೆ ಬಳಿ ಹೋಗಿ ಮಾಧ್ಯಮಗಳನ್ನು ಕರೆಸಿ ಸ್ಪಷ್ಟನೆ ನೀಡಿದರು. ನಾನು ಅಂದು ಪಬ್‌ನಲ್ಲಿ ಇದ್ದೆನೋ ಇಲ್ಲವೊ ಪೊಲೀಸರನ್ನು ನೀವೇ ಕೇಳಿ ಎಂದು ಸಹ ಹೇಳಿದ್ದರು.

Mink Pub Case: Actress Hema Lambasted On Reporter

ಅಷ್ಟಕ್ಕೆ ನಿಲ್ಲದೆ, ಹೇಮಾ ಪಬ್‌ ರೇಡ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿ ಮಾಡಿದ್ದ ಟಿವಿ ಮಾಧ್ಯಮದ ವರದಿಗಾರನೊಬ್ಬನ ವಿರುದ್ಧ ವಾಚಾಮಗೋಚರವಾಗಿ ವಾಗ್ದಾಳಿಯನ್ನೂ ಮಾಡಿದ್ದರು. ಆದರೆ ಟಿವಿ ವಾಹಿನಿಗಳಲ್ಲಿ ಇದು ಪ್ರಸಾರವಾಗಿರಲಿಲ್ಲ.

ಇದರಿಂದ ಇನ್ನಷ್ಟು ಸಿಟ್ಟಿಗೇರಿದ ನಟಿ ಹೇಮಾ, ಇದೀಗ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿ, ಆ ವರದಿಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವರದಿಗಾರ ಹಾಗೂ ತಾನು ಪಬ್‌ ರೇಡ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ವರದಿ ಪ್ರಸಾರ ಮಾಡಿದ್ದ ಚಾನೆಲ್‌ ವಿರುದ್ಧ ದೂರು ನೀಡಿದ್ದೇನೆ. ಆದರೆ ಮಹಿಳಾ ಪೊಲೀಸ್ ಠಾಣೆಯ ಎಸ್‌ಪಿ ರವರು, ವರದಿಗಾರನನ್ನು ಕರೆಸಿ ಕ್ಷಮೆ ಕೇಳಿಸುತ್ತೇನೆ ಎಂದಿದ್ದರು. ನಾನು ಒಪ್ಪಿಕೊಂಡಿದ್ದೆ. ಆದರೆ ಕರೆ ಮಾಡಿದರೆ ಈಗ ಬರುವೆ ಆಗ ಬರುವೆ ಎಂದು ಕತೆ ಹೇಳುತ್ತಾ ಓಡಾಡುತ್ತಿದ್ದಾನೆ. ಅವನಿಗೆ (ವರದಿಗಾರನಿಗೆ) ನಾಚಿಕೆ ಇದ್ದರೆ ನನ್ನ ಎದುರು ಬಂದು ನಿಲ್ಲಲಿ ಎಂದು ಹೇಮಾ ಸವಾಲು ಎಸೆದಿದ್ದಾರೆ.

Mink Pub Case: Actress Hema Lambasted On Reporter

ಅದೇ ಸಂದರ್ಶನದಲ್ಲಿ ಮಾತನಾಡಿರುವ ಹೇಮಾ, ''ಬೇಸರವಾದಾಗ ಪಬ್‌ಗೆ ಹೋಗುವ ಅಭ್ಯಾಸ ನನಗೆ ಇದೆ. ಆದರೆ ಪಬ್ ರೇಡ್ ಆದ ದಿನ ನಾನು ಆ ಪಬ್‌ನಲ್ಲಿ ಇರಲಿಲ್ಲ. ನಾನು ನನ್ನ ಪತಿಯೊಂದಿಗೆ ಬೇರೆ ಸ್ಥಳದಲ್ಲಿ ಇದ್ದೆ'' ಎಂದಿದ್ದಾರೆ.

ಪಬ್ ದಾಳಿಯ ವೇಳೆ ಮೆಗಾಸ್ಟಾರ್ ಕುಟುಂಬದ ನಿಹಾರಿಕಾರನ್ನು ವಶಪಡಿಸಿಕೊಳ್ಳಲಾಗಿತ್ತು, ಈ ಬಗ್ಗೆ ಮಾತನಾಡಿದ್ದ ನಿಹಾರಿಕಾ ತಂದೆ ನಟ ನಾಗಬಾಬು, ''ಮಗಳು ಮಿಂಕ್ ಪಬ್‌ನಲ್ಲಿ ಇದ್ದಿದ್ದು ನಿಜ, ಪೊಲೀಸರು ವಶಪಡಿಸಿಕೊಂಡಿದ್ದು ಸಹ ನಿಜ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಡ್ರಗ್ಸ್ ಸೇವಿಸಿಲ್ಲ. ಈ ಹಿಂದೆಯೂ ಎಂದೂ ಆಕೆ ಡ್ರಗ್ಸ್ ಸೇವಿಸಿಲ್ಲ'' ಎಂದಿದ್ದರು.

ಏಪ್ರಿಲ್ 04 ರಂದು ಹೈದರಾಬಾದ್‌ನ ಮಿಂಕ್ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಅವಧಿ ಮೀರಿ ಪಬ್ ನಡೆಸುತ್ತಿದ್ದ ಕಾರಣಕ್ಕೆ ಈ ದಾಳಿ ನಡೆಸಲಾಗಿತ್ತು. ಮಿಂಕ್ ಪಬ್ ವಿವಿಐಪಿ ಪಬ್ ಆಗಿದ್ದು, ಸಿನಿಮಾ ತಾರೆಯರು, ರಾಜಕಾರಣಿಗಳ ಮಕ್ಕಳು ಈ ಪಬ್‌ಗೆ ಭೇಟಿ ನೀಡುತ್ತಾರೆ. ಪಬ್‌ಗೆ ಒಟಿಪಿ ಮಾದರಿ ಎಂಟ್ರಿ ಇದ್ದು ಹಲವು ಐಶಾರಾಮಿ ಸೌಲಭ್ಯಗಳು ಪಬ್ ಒಳಗೆ ಇವೆ.

More from Filmibeat

English summary
Mink Pub case: Actress Hema lambasted on reporter who reported Hema is also detained by police in pub case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X