ಸಿನಿಮಾರಂಗಕ್ಕೆ ಬರಲಿದ್ದಾರೆ ಫೆಮಿನಾ ಮಿಸ್ ಇಂಡಿಯಾ 'ಸಿನಿ ಶೆಟ್ಟಿ'!
ಕರಾವಳಿಗರ ಮನಗೆದ್ದ ಸುಂದರಿ ಸಿನಿ ಶೆಟ್ಟಿ. ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮೂಲತಃ ಉಡುಪಿಯವರು. ಆದರೆ ಬೆಳೆದಿದ್ದು ಮಾತ್ರ ಮುಂಬೈನಲ್ಲಿ. ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡು ಕರಾವಳಿಗೆ ಹೆಮ್ಮೆ ತಂದಿದ್ದಾರೆ.
ಮುಂಬೈನ ಜಿಯೋ ವಲ್ಡ್ ಕನ್ವೆಂನ್ಷನ್ ಸೆಂಟರ್‌ನಲ್ಲಿ ಜುಲೈ 3 ರಂದು ನಡೆದ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿ ಕರಾವಳಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಿನಿ ಶೆಟ್ಟಿ ಮುಂಬೈನಲ್ಲಿ ಅಕೌಂಟಿಂಗ್ ಹಾಗೂ ಫೈನಾನ್ಸ್ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ.
ಬಹುತೇಕ ನಟಿಯರು ಫ್ಯಾಷನ್ ಲೋಕದಲ್ಲಿ ಈ ರೀತಿಯ ಕಿರೀಟ ಮುಡಿಗೇರಿಸಿಕೊಂಡ ಬಳಿಕ, ಸಿನಿಮಾ ರಂಗದತ್ತ ಮುಖ ಮಾಡುತ್ತಾರೆ. ಅಂತೆಯೇ ನಟಿ ಸಿನಿ ಶೆಟ್ಟಿ ಸದ್ಯದಲ್ಲಿಯೇ ಸಿನಿಮಾ ರಂಗಕ್ಕೆ ಬರುವ ಸೂಚನೆ ಕೊಟ್ಟಿದ್ದಾರೆ. ಇದೀಗ ಸಿನಿ ಶೆಟ್ಟಿ ಹೇಳಿಕೆಯೊಂದು ವೈರಲ್ ಆಗಿದೆ.

ಸಿನಿ ಶೆಟ್ಟಿ ಸಿನಿಮಾ ಎಂಟ್ರಿ!
ಸಿನಿ ಶೆಟ್ಟಿ ಫ್ಯಾಷನ್ ಜೊತೆಗೆ ಕಲೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ ಕಲಿತಿದ್ದಾರೆ. ಸದ್ಯ ಕಿರೀಟ ಗೆದ್ದಿರುವ ಸಿನಿ ಶೆಟ್ಟಿ ಸಿನಿಮಾ ಮಾಡುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿ, ಚಿಕ್ಕದೊಂದು ಸುಳಿವು ಕೊಟಿದ್ದಾರೆ. ಇತ್ತೀಚೆಗಷ್ಟೇ ಮಾನುಶಿ ಚಿಲ್ಲರ್, ಅಕ್ಷಯ್ ಕುಮಾರ್ ಜೊತೆಗೆ ಪೃಧ್ವಿರಾಜ್ ಸಿನಿಮಾದಲ್ಲಿ ನಟಿಸಿದ್ದರು. ಈಗ ಸಿನಿ ಶೆಟ್ಟಿ ಸರದಿ. ಆದರೆ ಈಕೆ ಸೌತ್ ಸಿನಿಮಾದಲ್ಲಿ ನಟಿಸುವ ಸೂಚನೆ ಕೊಟ್ಟಿದ್ದಾರೆ.

ಸಿನಿ ಶೆಟ್ಟಿಗೆ ವಿಜಯ್ ದೇವರಕೊಂಡ ಇಷ್ಟ!
ಸೌತ್ ಸಿನಿ ಶೆಟ್ಟಿ ಸಿನಿಮಾರಂಗದ ಬಗ್ಗೆ, ಸಿನಿಮಾರಂಗದ ಕಲಾವಿದರ ಬಗ್ಗೆ ಮಾತನಾಡಿದ್ದಾರೆ. ಇನ್ನು ತನಗೆ ಯಾವ ಹೀರೊ ಇಷ್ಟ ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ. ಸಿನಿ ಶೆಟ್ಟಿಗೆ ನಟ ವಿಜಯ್ ದೇವರಕೊಂಡ ಅಂದರೆ ತುಂಬಾ ಇಷ್ಟವಂತೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಸಿನಿ ಶೆಟ್ಟಿ ಮೊದಲ ಸಿನಿಮಾ ವಿಜಯ್ ದೇವರಕೊಂಡ ಜೊತೆಗೆ ಎನ್ನುವ ಸುದ್ದಿ ಕೂಡ ಹಬ್ಬಿದೆ. ಆದರೆ ಅದಕ್ಕೂ ಮೊದಲ ಆಕೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಿದೆ.

ಮಿಸ್ ವರ್ಲ್ಡ್ ಸ್ಪರ್ಧೆಗೆ ಸಿನಿ ಶೆಟ್ಟಿ!
ಸಿನಿ ಶೆಟ್ಟಿ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಕೂಡ. ಈ ಬಾರಿಯೂ ಗೆಲ್ಲಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿ ಶೆಟ್ಟಿ ಅಜ್ಜಿಯ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ. ಚಿಕ್ಕ ವಯಸ್ಸನಲ್ಲಿ ಅಜ್ಜಿ ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು. ನನಗೆ ಈ ಪಟ್ಟ ಸಿಕ್ಕಿದ್ದಕ್ಕೆ ಅಜ್ಜಿಗೆ ಬಹಳ ಖುಷಿ ಇದೆ.

ಕರಾವಳಿಯಲ್ಲಿ ಸಿನಿ ಶೆಟ್ಟಿ!
ಇನ್ನೂ ಸಿನಿ ಶೆಟ್ಟಿ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ ಆದುದರಿಂದ ಕನ್ನಡ ಅಷ್ಟಾಗಿ ಮಾತನಾಡಲು ಬರುವುದಿಲ್ಲ. ಸ್ಪಷ್ಟವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ. ಇನ್ನೂ ತವರೂರಿಗೆ ಆಗಮಿಸಿದ ಸಿನಿ ಶೆಟ್ಟಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಅಲ್ಲಿನ ಜನತೆ ಕೂಡ ಊರಿನ ಹುಡುಗಿಯ ಜೊತೆ ಫೋಟೊ ತೆಗೆಸಿಕೊಂಡಿದ್ದು, ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಹುಟ್ಟಿದ ಊರಿನ ಗರಿಮೆ ಹೆಚ್ಚು ಮಾಡಿರುವ ಸಿನಿ ಶೆಟ್ಟಿಯನ್ನು ಜನ ಕೊಂಡಾಡುವಂತಾಗಿದೆ.


Click it and Unblock the Notifications











