Miss Shetty Mr. Polishetty: ಮಹಿಳೆಯರಿಗಾಗಿ ವಿಶೇಷ ಘೋಷಣೆ ಮಾಡಿದ ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ ಮತ್ತು ನವೀನ್ ಪೋಲಿಶೆಟ್ಟಿ ಅಭಿನಯದ "ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ" ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರವು ಈಗಾಗಲೇ ಹಾಕಿದ ಬಂಡವಾಳವನ್ನು ವಾಪಸ್ ಪಡೆದಿದೆ. ಐದು ವರ್ಷಗಳ ನಂತರ ಅನುಷ್ಕಾ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ.
'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಶಾರುಖ್ ಖಾನ್ ಅಭಿನಯದ ಬ್ಲಾಕ್‌ಬಸ್ಟರ್ ಜವಾನ್‌ನಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ, ಅನುಷ್ಕಾ ಶೆಟ್ಟಿ ಅವರ ಚಲನಚಿತ್ರವು ತನ್ನದೇ ಆದ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ತೆಲುಗು ಮಾತನಾಡುವ ಪ್ರದೇಶಗಳಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ.

ಹಾಸ್ಯ ಮತ್ತು ರೋಮಾನ್ಸ್ ಆಚೆಗೆ, ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಲನಚಿತ್ರವು ಸ್ತ್ರೀವಾದ, ಮದುವೆ ಬೇಡ ಮಗು ಮಾತ್ರ ಬೇಕು ಎಂದು ಬಯಸುವ ಆಧುನಿಕ ಮಹಿಳೆಯರು ಮತ್ತು ವೀರ್ಯದಾನದ ವಿಚಾರದ ಬಗ್ಗೆ ಮಾತನಾಡುತ್ತದೆ. ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿರುವ ನಟಿ ಅನುಷ್ಕಾ ಶೆಟ್ಟಿ ಮಹಿಳೆಯರಿಗಾಗಿ ಹೊಸ ಘೋಷಣೆ ಮಾಡಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾದ ವಿಶೇಷ ಬೆಳಗಿನ ಪ್ರದರ್ಶನವನ್ನು ಘೋಷಿಸಿದ್ದಾರೆ. ತಮ್ಮ Instagram ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡು ರಾಜ್ಯಗಳಾದ್ಯಂತ ಮಹಿಳೆಯರಿಗೆ ವಿಶೇಷ ಪ್ರದರ್ಶನ ಮೀಸಲಿಡಲಾಗಿದೆ.
ಅನುಷ್ಕಾ ಶೆಟ್ಟಿ ತನ್ನ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರೇಕ್ಷಕರ ಅಗಾಧ ಪ್ರೀತಿ ಮತ್ತು ಮೆಚ್ಚುಗೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ಎಲ್ಲಾ ಮಹಿಳೆಯರಿಗೆ ಈ ವಿಶೇಷ ಪ್ರದರ್ಶನದ ಭಾಗವಾಗಲು ಪ್ರೀತಿಯಿಂದ ಆಹ್ವಾನವನ್ನು ನೀಡಿದ್ದಾರೆ.
"ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರತಿಕ್ರಿಯೆಯನ್ನು ನೋಡಿ ಹೃದಯ ಖುಷಿಪಟ್ಟಿದೆ. ಈ ಸಂಭ್ರಮವನ್ನು ಆಚರಿಸಲು, ನಾವು ಈ ಗುರುವಾರದಂದು ಆಂಧ್ರ ಪ್ರದೇಶ / ತೆಲಂಗಾಣದಾದ್ಯಂತ ಮಹಿಳೆಯರಿಗಾಗಿ ವಿಶೇಷ ಬೆಳಗಿನ ಪ್ರದರ್ಶನವನ್ನು ಆಯೋಜಿಸುತ್ತಿದ್ದೇವೆ. ನಿಮ್ಮೆಲ್ಲರನ್ನೂ ಥಿಯೇಟರ್‌ನಲ್ಲಿ ಭೇಟಿಯಾಗೋಣ" ಎಂದಿದ್ದಾರೆ.

ಅನುಷ್ಕಾ ಶೆಟ್ಟಿ ತಮ್ಮ ಫೋಸ್ಟ್ ನಲ್ಲಿ ತೆಲಂಗಾಣದ ಏಳು ಥಿಯೇಟರ್‌ಗಳಲ್ಲಿ ಬೆಳಗಿನ ಪ್ರದರ್ಶನಗಳು ಮತ್ತು ಆಂಧ್ರಪ್ರದೇಶದಲ್ಲಿ ಹನ್ನೊಂದು ಕಡೆ ಸಿನಿಮಾ ಪ್ರದರ್ಶನ ಆಯೋಜನೆ ಮಾಡಲಾಗಿದೆ ಎಂದು ವಿಡಿಯೋ ಮತ್ತು ಪೋಸ್ಟರ್‌ಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ
ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಅನ್ವಿತಾ (ಅನುಷ್ಕಾ) ಸುತ್ತ ಕೇಂದ್ರೀಕರಿಸಿದೆ. ಯುಕೆನಲ್ಲಿ ನೆಲೆಸಿದ್ದ ಮಾಸ್ಟರ್ ಶೆಫ್ ಅನ್ವಿತಾ ರವಳಿ ಶೆಟ್ಟಿ, ತನ್ನ ತಾಯಿಯ ಅನಾರೋಗ್ಯದ ಕಾರಣ ಭಾರತಕ್ಕೆ ಬರುತ್ತಾಳೆ. ತಾಯಿಯ ಅಗಲಿಕೆ ಬಳಿಕ ತನಗೊಬ್ಬ ಸಂಗಾತಿ, ಕುಟುಂಬ ಬೇಕು, ಆದರೆ ಮದುವೆ, ರಿಲೇಷನ್‌ಶಿಪ್ ಬೇಡ ಎಂದುಕೊಳ್ಳುತ್ತಾಳೆ.
ನಾಯಕ ಸಾಫ್ಟ್‌ವೇರ್ ಉದ್ಯೋಗಿ ಸಿದ್ದು ಪೋಲಿಶೆಟ್ಟಿಗೆ ಸ್ಟ್ಯಾಂಡಪ್ ಕಾಮೆಡಿಯನ್ ಆಗುವ ಕನಸು. ಅನ್ವಿತಾಗೆ ಆತ ಬಹಳ ಇಂಟ್ರೆಸ್ಟಿಂಗ್ ಅನ್ನಿಸುತ್ತಾನೆ. ಸಿದ್ದು ಅನ್ವಿತಾ ಪ್ರೀತಿಲಿ ಬೀಳ್ತಾನೆ. ಆದರೆ ತನ್ನಿಂದ ಆಕೆ ಏನು ಬಯಸುತ್ತಿದ್ದಾಳೆ ಅನ್ನೋದು ಗೊತ್ತಾದಾಗ ಆತ ಶಾಕ್ ಆಗುತ್ತಾನೆ. ಮಾಸ್ಟರ್ ಶೆಫ್ ಅನ್ವಿತಾ ಮದುವೆಯಾಗದೇ ತಾಯಿಯಾಗಳು ಬಯಸುತ್ತಾಳೆ. ಸ್ಟ್ಯಾಂಡಪ್ ಕಾಮೆಡಿಯನ್ ಸಿದ್ದುನ ಗರ್ಭಧಾರಣೆಗಾಗಿ ತನ್ನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಇದು ಯಾವ ತಿರುವು ಪಡೆಯುತ್ತದೆ ಎಂಬುದು ಸಿನಿಮಾದ ಕತೆ.
ಈ ಚಿತ್ರ ತೆಲುಗು ಸಿನಿ ರಂಗದ ಸೂಪರ್ ಸ್ಟಾರ್‌ಗಳಾದ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು, ರವಿತೇಜ, ಎಸ್‌ಎಸ್ ರಾಜಮೌಳಿ ಮತ್ತು ಇನ್ನೂ ಅನೇಕ ಪ್ರಮುಖ ಸೆಲೆಬ್ರಿಟಿಗಳಿಂದ ಪ್ರಶಂಸೆ ಮತ್ತು ಮನ್ನಣೆಯನ್ನು ಗಳಿಸಿದೆ. ಐದು ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡ ಅನುಷ್ಕಾ ಶೆಟ್ಟಿಗೆ ಇದೊಂದು ಸಕತ್ ಕಮ್ ಬ್ಯಾಕ್.


Click it and Unblock the Notifications











