For Quick Alerts
  ALLOW NOTIFICATIONS  
  For Daily Alerts

  ಜಗನ್ ವಿರುದ್ಧ ಅಸಮಧಾನ ಟಿಡಿಪಿಯಿಂದ ಮೋಹನ್ ಬಾಬು ಸ್ಪರ್ಧೆ!

  |

  ಟಾಲಿವುಡ್‌ ದಿಗ್ಗಜ ಮೋಹನ್ ಬಾಬು ಚುನಾವಣೆಗೆ ಸ್ಫರ್ಧೆ ಮಾಡುವ ಬಗ್ಗೆ ಪ್ರಬಲವಾದ ಮಾತುಗಳು ಕೇಳಿ ಬರುತ್ತಿದೆ. ರಾಜಕೀಯ ಮುಖಂಡರೊಂದಿಗೆ ಸದಾ ಗುರುತಿಸಿಕೊಂಡಿರೋ ಮೋಹನ್ ಬಾಬು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದು ಪಕ್ಕಾ ಎನ್ನಲಾಗಿದೆ.

  ಮೋಹನ್ ಬಾಬು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ತುಂಬಾ ಹುಷಾರಾಗಿ ಹೆಜ್ಜೆ ಇಡುತ್ತಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆಲುಗು ದೇಶಂ ಪಕ್ಷದೊಂದಿಗೆ ಮೋಹನ್ ಬಾಬು ಹೆಚ್ಚು ಗುರುತಿಸಿಕೊಂಡಿರೋದು ಇಷ್ಟೆಲ್ಲಾ ಚರ್ಚೆಗೆ ಗ್ರಾಸವಾಗಿದೆ.

  ರಾಜಕೀಯ ಮುಖಂಡನ ಮಗಳ ಜೊತೆ ನಟ ಮಂಚು ಮನೋಜ್ 2ನೇ ಮದುವೆ?ರಾಜಕೀಯ ಮುಖಂಡನ ಮಗಳ ಜೊತೆ ನಟ ಮಂಚು ಮನೋಜ್ 2ನೇ ಮದುವೆ?

  ಇದಕ್ಕೆ ಸರಿಯಾಗಿ ಮೋಹನ್ ಬಾಬು ಚಿತ್ತೂರು ಜಿಲ್ಲೆಯಿಂದ ವಿಧಾನಸಭೆಗೆ ಸ್ಪರ್ಧೆ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ರಾಜಕೀಯ ಮುಖಂಡ ಗೋಣೆ ಪ್ರಕಾಶ್ ರಾವ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೋಹನ್ ಬಾಬು ನಡೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ಮೋಹನ್ ಬಾಬು ಈ ಬಾರಿ ಚುನಾವಣೆಗೆ ಸ್ಪರ್ಧಿಸೋದು ಬಹುತೇಕ ಪಕ್ಕಾ ಅಂತ ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

  ರಾಜ್ಯಸಭೆ ಪ್ರವೇಶಿಸಿದ್ದರು ಮೋಹನ್ ಬಾಬು

  ಮೋಹನ್ ಬಾಬು ರಾಜಕೀಯ ಹೊಸದೇನು ಅಲ್ಲ. ತೆಲುಗು ಚಿತ್ರರಂಗ ಮೇರು ನಟ ಎನ್‌ಟಿಆರ್ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಮೋಹನ್ ಬಾಬು ಟಿಡಿಪಿ ಪರ ಕೆಲಸ ಮಾಡಿದ್ದರು. ಪಕ್ಷ ಆರಂಭ ಆದಲ್ಲಿಂದ ಮೋಹನ್ ಬಾಬು ಸೇವೆ ಸಲ್ಲಿಸುತ್ತಲೇ ಬಂದಿದ್ದರು. ಹೀಗಾಗಿ ಅವರನ್ನು ಗುರುತಿಸಿ ಟಿಡಿಪಿಯಿಂದ ರಾಜ್ಯ ಸಭೆಗೆ ಕಳುಹಿಸಿಕೊಡಲಾಗಿತ್ತು.

  ಆದರೆ ಇತ್ತೀಚೆಗೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೋಹನ್ ಬಾಬು ಟಿಡಿಪಿಯಿಂದ ದೂರ ಉಳಿದಿದ್ದರು. ಚಂದ್ರಬಾಬು ನಾಯ್ಡು ಹಾಗೂ ಟಿಡಿಪಿ ಎರಡರಿಂದಲೂ ಮೋಹನ್ ಬಾಬು ಅಂತರ ಕಾಯ್ದುಕೊಂಡಿದ್ದರು. ಆದರೆ, ಇತ್ತೀಚೆಗೆ ಮತ್ತೆ ಎಲ್ಲವೂ ಸರಿ ಹೋಗಿದೆ ಎನ್ನಲಾಗಿದೆ.

  ಚಂದ್ರಗಿರಿ ಕ್ಷೇತ್ರದಿಂದ ಮೋಹನ್ ಬಾಬು ಸ್ಪರ್ಧೆ?

  ಇತ್ತೀಚೆಗೆ ಮೋಹನ್ ಬಾಬು ಹಾಗೂ ಚಂದ್ರಬಾಬು ನಾಯ್ಡು ಭೇಟಿ ಮಾಡಿದ್ದಾರೆ. ತಿರುಪತಿ ಬಳಿ ನಿರ್ಮಿಸಲಾದ ಸಾಯಿಬಾಬಾ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಇಬ್ಬರು ಮುಖಾ ಮುಖಿಯಾಗಿದ್ದರು. ಅಲ್ಲದೆ ಈ ಭೇಟಿಗೂ ಮುನ್ನವೇ ಚಂದ್ರಬಾಬು ನಾಯ್ಡು ಹಾಗೂ ಟಿಡಿಪಿ ನಾಯಕರ ಜೊತೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಸಿರುವುದು ಸುದ್ದಿಯಾಗಿತ್ತು. ಆ ವೇಳೆ ಭೇಟಿ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಮೋಹನ್ ಬಾಬು ಹೇಳಿಕೆ ನೀಡಿದ್ದರು.

  Mohan Babu Contesting Election From TDP From Chandragiri Constituency

  ಈ ನಡುವೆ ತೆಲಂಗಾಣದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಗೋನೆ ಪ್ರಕಾಶ್ ರಾವ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ. ಮೋಹನ್ ಬಾಬು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ. ಚಂದ್ರಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆಂದು ಕಮೆಂಟ್ ಮಾಡಿದ್ದಾರೆ.

  ಮೋಹನ್ ಬಾಬು ಅಸಮಧಾನ

  ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವರ್ತನೆ ಬಗ್ಗೆ ಮೋಹನ್ ಬಾಬು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ವೈಎಸ್ ಜಗನ್ ಯಾರ ಬಗ್ಗೆನೂ ಕ್ಯಾರೇ ಅನ್ನುತ್ತಿಲ್ಲ. ರಾಜಕೀಯ ಹೊರತುಪಡಿಸಿ ಜನರಿಗೆ ಆದ್ಯತೆ ನೀಡಲಾಗಿಲ್ಲ ಎಂಬುದು ಅಸಮಧಾನಕ್ಕೆ ಕಾರಣ ಎನ್ನಲಾಗಿದೆ.

  ಹೀಗಾಗಿ ಮೋಹನ್ ಬಾಬು ಈಗ ಚಂದ್ರಬಾಬು ನಾಯ್ಡು ಜೊತೆ ಕೈ ಜೋಡಿಸಿದ್ದಾರೆ ಎಂದು ಪ್ರಕಾಶ್ ರಾವ್ ಕಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಈಗ ರಾಜಕೀಯ ವಲಯಗಳಲ್ಲಿ ಚರ್ಚೆಯನ್ನು ಹುಟ್ಟಾಕಿದೆ.

  English summary
  Mohan Babu Contesting Election From TDP From Chandragiri Constituency, Know More.
  Friday, September 9, 2022, 22:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X