ಮದುವೆ ಜೊತೆ ಮಕ್ಕಳ ಬಗ್ಗೆಯೂ ಮಾತನಾಡಿದ ನಟ ವಿಜಯ್ ದೇವರಕೊಂಡ!

ಸತತ ಸೋಲುಗಳನ್ನು ಕಾಣುತ್ತಿರುವ ನಟ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಸಿನಿಮಾ ಖುಷಿ. ಚಿತ್ರ ಪ್ರಚಾರದಲ್ಲಿರುವ ನಟ ತನ್ನ ವೈಯಕ್ತಿಕ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ. ಮದುವೆ ಬಗ್ಗೆ ಮಾತನಾಡಿರುವ ಅವರು, ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ.

ವಿಜಯ್ ದೇವರಕೊಂಡ, ಸಮಂತಾ ರುತ್ ಪ್ರಭು ಅಭಿನಯದ ಖುಷಿ ಚಿತ್ರ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರದ ಭಾಗವಾಗಿ, ನೀಥೋನ್ ಡ್ಯಾನ್ಸ್‌ನ ಅಂತಿಮ ಸಂಚಿಕೆಗೆ ವಿಜಯ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಟ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

 Mom is asking for grandchildren says actor Vijay Deverakonda

ಮೊಮ್ಮಕ್ಕಳನ್ನು ಕೇಳುತ್ತಿದ್ದಾರೆ ನನ್ನ ತಾಯಿ!

ಮದುವೆ ಮಾಡಿಕೊಳ್ಳುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರೆ ಎಂದು ವಿಜಯ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ನನಗೆ ಕೆಲವು ಷರತ್ತುಗಳು ಇವೆ ಎಂಬ ವಿಷಯವನ್ನು ಅವರು ತಿಳಿಸಿದ್ದಾರೆ. ಇದರ ಜೊತೆಗೆ ನನ್ನ ತಾಯಿ ಈಗಾಗಲೇ ಮೊಮ್ಮಕ್ಕಳು ಬೇಕು ಎಂದು ಕೇಳುತ್ತಿದ್ದಾರೆ ಎಂದು ನಸುನಕ್ಕಿದ್ದಾರೆ.

ಈ ವೇಳೆ ಹಿರಿಯ ನಟಿ ರಾಧಾ, ತಮ್ಮ ತಂದೆ ತಾಯಿಗೆ ಬೇಕಾದ ಖುಷಿಯನ್ನು ನೀಡಿ ಎಂದು ಸಲಹೆ ನೀಡಿದ್ದಾರೆ. "ನಾನು ತನ್ನ ಮದುವೆಯನ್ನು ನಿಧಾನ ಮಾಡುವ ಮೂಲಕ ತನ್ನ ಹೆತ್ತವರಿಗೆ ಸಂತೋಷವನ್ನು ನೀಡುತ್ತಿದ್ದೇನೆ" ಎಂದು ವಿಜಯ್ ದೇವರಕೊಂಡ ತಮಾಷೆ ಮಾಡಿದ್ದಾರೆ.

 Mom is asking for grandchildren says actor Vijay Deverakonda

ಖುಶಿ ಸಿನಿಮಾ ಬಗ್ಗೆ

ವಿಜಯ್ ದೇವರಕೊಂಡ ಅಭಿನಯದ ಖುಷಿ ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಸಮಂತಾ ರುತ್ ಪ್ರಭು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಶಿವನಿರ್ವಾಣ ನಿರ್ದೇಶಿಸುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ.

ಸಮಂತಾ ಮತ್ತು ನಿರ್ದೇಶಕ ಶಿವ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. "ಸಿನಿಮಾ ಚಿತ್ರೀಕರಣದ ಸಂಪೂರ್ಣ ಪ್ರಕ್ರಿಯೆಯು ನನ್ನ ನೆಚ್ಚಿನ ನೆನಪುಗಳಲ್ಲಿ ಒಂದಾಗಿ ಶಾಶ್ವತವಾಗಿರಲಿದೆ. ನಾನು ಹೆಚ್ಚು ಸಮಯ ಕಳೆದ ಶಿವ ಮತ್ತು ಸಮಂತಾ ಇಬ್ಬರು ವ್ಯಕ್ತಿಗಳ ಜೊತೆಗಿನ ಹೆಚ್ಚು ನೆನಪುಗಳು ಇವೆ. ಇಬ್ಬರೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿಕೊಂಡಿದ್ದೇನೆ" ಎಂದು ಭಾವುಕರಾಗಿ ಮಾತನಾಡಿದ್ದಾರೆ.

More from Filmibeat

English summary
'Mom is asking for grandchildren' says actor Vijay Deverakonda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X