ಮದುವೆ ಆಗುವ ಹುಡುಗ ಹೇಗಿರಬೇಕು? ನಟಿ ಪೂಜಾ ಹೆಗ್ಡೆ ಷರತ್ತುಗಳೇನು?

ನಟಿ ಪೂಜಾ ಹೆಗ್ಡೆ ಒಳ್ಳೆಯ ಸಂಬಧವೊಂದು ಬಂದಿದೆ. ಆದರೆ ಪೂಜಾಗೆ, ತನ್ನನ್ನು ಮದುವೆ ಆಗುವ ಹುಡುಗ ಹೀಗೆಯೇ ಇರಬೇಕು ಎನ್ನುವ ಷರತ್ತುಗಳು ತುಂಬಾ ಇವೆ.

'ಹುಡುಗ ಕೇರಿಂಗ್ ಆಗಿರಬೇಕು, ಎಲ್ಲಾ ಕೆಲಸವನ್ನು ಹಂಚಿಕೊಂಡು ಮಾಡಬೇಕು, ತುಂಬಾ ಪ್ರೀತಿಸಬೇಕು, ಕೂಡು ಕುಟುಂಬ ಆಗಿರಬಾರದು' ಹೀಗೆ ಹಲವು ಷರತ್ತುಗಳಿಟ್ಟಿದ್ದಾರೆ ನಟಿ ಪೂಜಾ ಹೆಗ್ಡೆ.

ಪೂಜಾ ಹೆಗ್ಡೆ ಸಿಗುತ್ತಾರೆಂದರೆ ಎಂಥಹಾ ಷರತ್ತಿಗೂ ಓಕೆ ಎಂದಿರಾ? ಈ ಷರತ್ತುಗಳೆಲ್ಲ ಸಿನಿಮಾಕ್ಕೆ ಮಾತ್ರ ಸೀಮಿತ. ಹೌದು, ಪೂಜಾ ಹೆಗ್ಡೆಗೆ ಸಂಬಂಧ ಬಂದಿರುವುದು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ. ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಮೆಚ್ಚುಗೆ ಗಳಿಸಿದೆ.

ಬ್ಯಾಚುಲರ್ ಆಗಿರುವುದು ಅಖಿಲ್

ಬ್ಯಾಚುಲರ್ ಆಗಿರುವುದು ಅಖಿಲ್

ಸಿನಿಮಾದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವುದು ನಟ ನಾಗಾರ್ಜುನ ಕೊನೆಯ ಪುತ್ರ ಅಖಿಲ್. ನಾಯಕ ಮದುವೆಯಾಗಲು ಹೆಣ್ಣು ಹುಡುಕುವ ತಮಾಷೆ ಹಾಗೂ ಭಾವನಾತ್ಮಕ ಕಥನವನ್ನು ಹೊಂದಿದೆ ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್ ಸಿನಿಮಾ.

ಹುಡುಗನನ್ನು ಕಾಲಿನ ಶೂ ಗೆ ಹೋಲಿಸುವ ಪೂಜಾ ಹೆಗ್ಡೆ

ಹುಡುಗನನ್ನು ಕಾಲಿನ ಶೂ ಗೆ ಹೋಲಿಸುವ ಪೂಜಾ ಹೆಗ್ಡೆ

ಟ್ರೇಲರ್‌ನಲ್ಲಿನ ಕೆಲ ಪಂಚಿಂಗ್‌ ಡೈಲಾಗ್‌ಗಳನ್ನು, ತಮಾಷೆಯ ದೃಶ್ಯಗಳು ಗಮನ ಸೆಳೆಯುತ್ತವೆ. 'ನನ್ನನ್ನು ಮದುವೆ ಆಗಲಿರುವ ಹುಡುಗ ನನ್ನ ಕಾಲಿನ ಶೂ ಗೆ ಸಮಾನ' ಎಂದು ಪೂಜಾ ಹೆಗ್ಡೆ ವೇದಿಕೆ ಮೇಲೆ ನಿಂತು ಹೇಳುವ ಡೈಲಾಗ್ ಸಖತ್ ಆಗಿದೆ.

ಅಖಿಲ್ ಕೇಳುವ ಸಾಮಾನ್ಯ ಪ್ರಶ್ನೆ ಇದು

ಅಖಿಲ್ ಕೇಳುವ ಸಾಮಾನ್ಯ ಪ್ರಶ್ನೆ ಇದು

ಮದುವೆ ಆಗಲು ಹೆಣ್ಣು ಹುಡುಕುವ ಬ್ಯಾಚುಲರ್ ಆಗಿದ್ದಾರೆ ನಟ ಅಖಿಲ್. 'ಮದುವೆಯಿಂದ ನೀವು ಏನು ನಿರೀಕ್ಷಿಸುತ್ತೀರಿ?' ಎಂಬುದು ಆತನ ಸಾಮಾನ್ಯ ಪ್ರಶ್ನೆ. ಇದಕ್ಕೆ ಪೂಜಾ ಕೊಡುವ ಉತ್ತರ, 'ಇಡ್ಲಿ, ವಡೆ, ಸಾಂಬಾರ್'.
ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಖಿಲ್, ತುಸು ರೊಮ್ಯಾಂಟಿಕ್ ಸಹ, ಆತನಿಗೆ ಸಂಜೆಗಳೇ ಹೆಚ್ಚು ಇಷ್ಟವಂತೆ, ಏಕೆಂದರೆ ಸಂಜೆ ನಂತರವೇ ಅಲ್ಲವೆ ರಾತ್ರಿ ಬರುವುದು!

Recommended Video

ಜಗಮೆಚ್ಚಿದ ನಿರ್ದೇಶಕ Rajamouli ಮೇಲೆ ಕಂಪ್ಲೇಂಟ್ | Filmibeat Kannada
ಭಾಸ್ಕರ್ ನಿರ್ದೇಶನ

ಭಾಸ್ಕರ್ ನಿರ್ದೇಶನ

ಇನ್ನು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾವನ್ನು ಭಾಸ್ಕರ್ ನಿರ್ದೇಶಿಸಿದ್ದಾರೆ. ಸಿನಿಮಾದ ನಿರ್ಮಾಪಕ ಬನ್ನಿ ವಾಸ್, ವಾಸು ವರ್ಮಾ, ಅಲ್ಲು ಅರವಿಂದ್. ಸಿನಿಮಾದಲ್ಲಿ ಪೂಜಾ ಹೆಗ್ಡೆ, ಅಖಿಲ್ ಹೊರತಾಗಿ ವೆನ್ನೆಲ ಕಿಶೋರ್, ಅಮಾನಿ, ಮುರಳಿ ಶರ್ಮಾ ಇನ್ನೂ ಹಲರಿದ್ದಾರೆ.

More from Filmibeat

English summary
Akhil and Pooja Hegde's most eligible bachelor movie trailer out recently. Akhil and Pooja stunning in trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X