For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಹಿನ್ನೆಡೆ: ಸಮಂತಾ ಅತ್ಯಂತ ಜನಪ್ರಿಯ ನಟಿ!

  |

  ಭಾರತದಲ್ಲಿ ಬಾಲಿವುಡ್ ಬಿಟ್ಟರೆ, ಅತೀ ಹೆಚ್ಚು ಕಲೆಕ್ಷನ್ ತಂದುಕೊಡುವ ಚಿತ್ರರಂಗ ಟಾಲಿವುಡ್‌. ಇಲ್ಲಿ ಸಿನಿಮಾದಿಂದ ಸಿನಿಮಾಗೆ, ಹೀರೊಗಳಿಂದ ಹೀರೊಗಳಿಗೆ, ನಾಯಕಿಯರಿಂದ ನಾಯಕಿಯರಿಗೆ ಕಾಂಪಿಟೇಷನ್ ಇರುತ್ತೆ. ಪ್ರತಿ ತಿಂಗಳೂ ನಟ-ನಟಿಯರ ಜನಪ್ರಿಯತೆ ಬದಲಾಗುತ್ತಲೇ ಇರುತ್ತೆ.

  ಓರ್ಮ್ಯಾಕ್ಸ್ ಅನ್ನೋ ಸಂಸ್ಥೆ ಪ್ರತಿ ತಿಂಗಳು ಭಾರತದ ಪ್ರತಿಯೊಂದು ಚಿತ್ರರಂಗದಲ್ಲಿ ಯಾವ ನಟ-ನಟಿಯರ ಜನಪ್ರಿಯತೆ ಹೇಗಿದೆ? ಅನ್ನೋ ಪಟ್ಟಿಯನ್ನು ರಿಲೀಸ್ ಮಾಡುತ್ತೆ. ಹಾಗೇ ಆಗಸ್ಟ್ ತಿಂಗಳಲ್ಲಿ ಟಾಲಿವುಡ್‌ನಲ್ಲಿ ಅತೀ ಜನಪ್ರಿಯತೆಯನ್ನು ಗಳಿಸಿರೋ ಟಾಪ್ 10 ನಟಿಯರ ಪಟ್ಟಿಯನ್ನು ರಿಲೀಸ್ ಮಾಡಿದೆ.

  ಈ ಪಟ್ಟಿಯಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಹೊರಬಿದ್ದಿದೆ. ರಶ್ಮಿಕಾ ಮಂದಣ್ಣಗೆ ತೀವ್ರ ಹಿನ್ನೆಲೆಯಾಗಿದೆ. ಸಮಂತಾ ಅತ್ಯಂತ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಬಿದ್ದಿದ್ದೇಗೆ? ಸಮಂತಾ ಎದ್ದಿದ್ದೇಗೆ? ಯಾವ ಯಾವ ಸ್ಥಾನದಲ್ಲಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಸಮಂತಾ ನಂ 1

  ಸಮಂತಾ ನಂ 1

  ಓರ್ಮ್ಯಾಕ್ಸ್ ರಿಲೀಸ್ ಮಾಡಿರೋ ಆಗಸ್ಟ್ ತಿಂಗಳ ಸರ್ವೆಯಲ್ಲಿ ಸಮಂತಾ ಅತ್ಯಂತ ಜನಪ್ರಿಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಆಗಸ್ಟ್ ತಿಂಗಳಲ್ಲಿ ಟಾಲಿವುಡ್‌ನಲ್ಲಿ ಸಮಂತಾನೇ ನಂ 1. ಸಮಂತಾ ಡಿವೋರ್ಸ್ ಆದಲ್ಲಿಂದ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಜೊತೆ ಸಮಂತಾ ಕೈ ತುಂಬಾ ಸಿನಿಮಾಗಳಿವೆ. ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವಂತೆ ಬಾಲಿವುಡ್‌ಗೂ ಸಿನಿಮಾಗಳಲ್ಲೂ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. 'ಯಶೋದಾ' ಹಾಗೂ 'ಶಾಕುಂತಲಾ' ಸಿನಿಮಾಗಳು ಹಲ್‌ಚಲ್ ಎಬ್ಬಿಸಿವೆ. ಈ ಕಾರಣಕ್ಕೆ ಸಮಂತಾ ಸದಾ ಚರ್ಚೆಯಲ್ಲಿದ್ದಾರೆ.

  ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕಾನೂನು ಸಮರ: ಅಂತಹದ್ದೇನಾಯ್ತು?ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕಾನೂನು ಸಮರ: ಅಂತಹದ್ದೇನಾಯ್ತು?

  ಟಾಪ್ 10 ನಟಿಯರು ಯಾರು?

  ಟಾಪ್ 10 ನಟಿಯರು ಯಾರು?

  ಸಮಂತಾ ನಂ 1 ಸ್ಥಾನಕ್ಕೇರಿದ್ದಾರೆ. ಇವರೊಂದಿಗೆ ಇನ್ನೂ 9 ಮಂದಿ ಟಾಲಿವುಡ್ ನಟಿಯರು ಬೇರೆ ಬೇರೆ ಸ್ಥಾನದಲ್ಲಿದ್ದಾರೆ. ಕಾಜಲ್ ಅಗರ್ವಾಲ್, ಅನುಷ್ಕಾ ಶೆಟ್ಟಿ, ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ಸೇರಿದಂತೆ ಪೂಜಾ ಹೆಗ್ಡೆ ಈ ಪಟ್ಟಿಯಲ್ಲಿದ್ದಾರೆ. ಆ ಪಟ್ಟಿ ಹೀಗಿದೆ.

  ಆಗಸ್ಟ್ ತಿಂಗಳ ಜನಪ್ರಿಯರ ತೆಲುಗು ನಟಿಯರ ಪಟ್ಟಿ

  1 ಸಮಂತಾ
  2 ಕಾಜಲ್ ಅಗರ್ವಾಲ್
  3 ಅನುಷ್ಕಾ ಶೆಟ್ಟಿ
  4 ಸಾಯಿ ಪಲ್ಲವಿ
  5 ಪೂಜಾ ಹೆಗ್ಡೆ
  6 ಕೀರ್ತಿ ಸುರೇಶ್
  7 ತಮನ್ನಾ
  8 ರಶ್ಮಿಕಾ ಮಂದಣ್ಣ
  9 ಕೃತಿ ಶೆಟ್ಟಿ
  10 ರಾಶಿ ಖನ್ನ

  8ನೇ ಸ್ಥಾನಕ್ಕಿಳಿದ ರಶ್ಮಿಕಾ ಮಂದಣ್ಣ

  8ನೇ ಸ್ಥಾನಕ್ಕಿಳಿದ ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ ಸದ್ಯ ಬಹುಬೇಡಿಕೆಯ ನಟಿ. ಉತ್ತರ ಭಾರತದಿಂದ ಹಿಡಿದು ದಕ್ಷಿಣ ಭಾರತದವರೆಗೂ ರಶ್ಮಿಕಾ ಚಿರಪರಿಚಿತ. ಆದರೆ, ಆಗಸ್ಟ್ ತಿಂಗಳ ಸರ್ವೆಯಲ್ಲಿ ರಶ್ಮಿಕಾ ಮಂದಣ್ಣ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಿನಿಮಾಗಳಿಂದ ದೂರ ಉಳಿದಿರೋ ಕಾಜಲ್ ಅಗರ್ವಾಲ್, ಅನುಷ್ಕಾ ಶೆಟ್ಟಿ ಕೂಡ ರಶ್ಮಿಕಾ ಮಂದಣ್ಣರನ್ನು ಬೀಟ್ ಮಾಡಿದ್ದಾರೆ. ರಶ್ಮಿಕಾ ಟಾಲಿವುಡ್‌ಗಿಂತ ಬಾಲಿವುಡ್‌ನಲ್ಲೇ ಹೆಚ್ಚು ಸಿನಿಮಾ ಮಾಡುತ್ತಿರೋದ್ರಿಂದ ಈ ಕುಸಿತ ಕಂಡಿರಬಹುದು ಎಂದು ಅಂದಾಜಿಸಲಾಗಿದೆ.

  ಸಮಂತಾ ಫ್ಯಾನ್ಸ್‌ಗೆ ಖುಷಿ

  ಸಮಂತಾ ಫ್ಯಾನ್ಸ್‌ಗೆ ಖುಷಿ

  ಓರ್ಮ್ಯಾಕ್ಸ್ ಸರ್ವೆಯನ್ನು ನೋಡಿ ಸಮಂತಾ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಮದುವೆ, ವಿಚ್ಛೇದನದ ಬಳಿಕವೂ ಸಮಂತಾ ಜನಪ್ರಿಯತೆ ಸ್ಪಲ್ಪನೂ ಕಡಿಮೆಯಾಗಿಲ್ಲ. ಅಲ್ಲದೆ ಸಮಂತಾ ಬಳಿ ಇರುವಷ್ಟು ಸಿನಿಮಾ ಬೇರೆ ಯಾರೊಂದಿಗೂ ಇಲ್ಲ. ಯಶೋದಾ, ಶಾಕುಂತಲಂ, ಖುಷಿ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ. ಅದರಲ್ಲೂ ಮೊದಲು 'ಯಶೋದಾ' ರಿಲೀಸ್ ಆಗಲಿದೆ.

  English summary
  Ormax Most Popular Female Stars Telugu In August is Samantha And Others List, Know More.
  Sunday, September 18, 2022, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X