ನಟಿ ನಿಶ್ವಿಕಾ ನಾಯ್ಡುಗೆ ಆ ಮೆಗಾ ಚಾನ್ಸ್ ಸಿಗಲೇ ಇಲ್ಲ!

ಕನ್ನಡ ನಟಿ ನಿಶ್ವಿಕಾ ನಾಯ್ಡು ಇತ್ತ ಸಿನಿಮಾಗಳಲ್ಲಿ ಅತ್ತ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಪರಭಾಷೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ನಿಶ್ವಿಕಾ ಟಾಲಿವುಡ್ ಎಂಟ್ರಿ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿತ್ತು. ಚಿರಂಜೀವಿ ಸಿನಿಮಾದಲ್ಲಿ ಆಕೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿತ್ತು. ಅದು ಸುಳ್ಳಾಗಿದೆ.

ವಸಿಷ್ಠ ಮಲ್ಲಿಡಿ ನಿರ್ದೇಶನದ ಸೋಶಿಯೋ ಫ್ಯಾಂಟಸಿ ಸಿನಿಮಾ 'ವಿಶ್ವಂಭರ'. ಮೆಗಾಸ್ಟಾರ್ ಚಿರಂಜೀವಿ ಹೀರೊ ಆಗಿ ನಟಿಸುತ್ತಿರುವ ಸಿನಿಮಾ ಇದು. ಆಶಿಕಾ ರಂಗನಾಥ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ತ್ರಿಷಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Mouni Roy Bags Special Song Opposite Chiranjeevi Replacing Nishvika Naidu

'ವಿಶ್ವಂಭರ' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಯಾರು ಹೆಚ್ಚು ಹಾಕುತ್ತಾರೆ ಎಂದು ಭಾರೀ ಚರ್ಚೆ ನಡೆದಿತ್ತು. ಸಾಕಷ್ಟು ನಟಿಯರ ಹೆಸರು ಕೇಳಿಬಂದಿತ್ತು. ಕನ್ನಡ ನಟಿ ನಿಶ್ವಿಕಾ ನಾಯ್ಡು ಹೆಸರು ಮುಂಚೂಣಿಯಲ್ಲಿತ್ತು. ಆದರೆ ಈಗ ಮೌನಿ ರಾಯ್ ಚಿತ್ರದಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಡಿನ ಚಿತ್ರೀಕರಣ ನಡೆದಿದೆ. ಚಿರು ಜೊತೆ ಇರುವ ಫೋಟೊವನ್ನು ಮೌನಿ ರಾಯ್ ಹಂಚಿಕೊಂಡಿದ್ದಾರೆ.

'ಕೆಜಿಎಫ್'-1 ಚಿತ್ರದ ಹಿಂದಿ ವರ್ಷನ್‌ನಲ್ಲಿ ಮೌನಿ ಹೆಜ್ಜೆ ಹಾಕಿದ್ದರು. ಬಳಿಕ ಸ್ಪೆಷಲ್ ಸಾಂಗ್ಸ್ ಮೂಲಕವೇ ಆಕೆ ಹೆಚ್ಚು ಗಮನ ಸೆಳೆದಿದ್ದರು. ಇದೀಗ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ನಿಶ್ವಿಕಾ ನಾಯ್ಡು ಒಳ್ಳೆ ಡ್ಯಾನ್ಸರ್. 'ಕರಟಕ ದಮನಕ' ಚಿತ್ರದಲ್ಲಿ ಪ್ರಭುದೇವಗೆ ಸಮನಾಗಿ ಹೆಜ್ಜೆ ಹಾಕಿ ಹುಬ್ಬೇರಿಸಿದ್ದರು. ಈ ಸಾಂಗ್ ಭಾರೀ ವೈರಲ್ ಆಗಿ ಪರಭಾಷಿಕರ ಕಣ್ಣಿಗೂ ಬಿದ್ದಿತ್ತು. ಇದೇ ಹಾಡು ನೋಡಿ 'ವಿಶ್ವಂಭರ' ಚಿತ್ರಕ್ಕೆ ಆಕೆಯನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಆ ಸುದ್ದಿ ಸುಳ್ಳಾಗಿದೆ.

'ಗರಡಿ' ಚಿತ್ರದ ಸ್ಪೆಷಲ್ ಸಾಂಗ್‌ಗೆ ನಿಶ್ವಿಕಾ ಹೆಜ್ಜೆ ಹಾಕಿದ್ದು ಗೊತ್ತೇಯಿದೆ. ಕಿರುತೆರೆಯ ಮಹಾನಟಿ ಶೋ ತೀರ್ಪುಗಾರ್ತಿಯಾಗಿಯೂ ಆಕೆ ಗುರ್ತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸಿಗಾಗಿ ವೇಣುಸ್ವಾಮಿ ಅವರಿಂದ ನಿಶ್ವಿಕಾ ಪೂಜೆ ಸಹ ಮಾಡಿಸಿದ್ದರು. ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದರು. ತನ್ನ ಬಳಿ ಪೂಜೆ ಮಾಡಿಸಿದ ಬಳಿಕವೇ ಆಕೆಗೆ ಭಾರೀ ಯಶಸ್ಸು ಸಿಕ್ಕಿದ್ದು ಎಂದು ವೇಣುಸ್ವಾಮಿ ಹೇಳುತ್ತಿರುತ್ತಾರೆ.

Mouni Roy Bags Special Song Opposite Chiranjeevi Replacing Nishvika Naidu

ನಿಧಿ ಅಗರ್‌ವಾಲ್ ಸೇರಿ ಹಲವು ನಟಿಯರು ಚಿತ್ರರಂಗದಲ್ಲಿ ಯಶಸ್ಸು ಬೇಕು ಎಂದು ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿರುವುದು ಇದೆ. ಆಕೆ ರಾಜ ಶ್ಯಾಮಲಾ ಪೂಜೆ ಮಾಡಿಸಿದ್ದ ವೀಡಿಯೋ ವೈರಲ್ ಆಗಿತ್ತು. ನಿಶ್ವಿಕಾ ನಾಯ್ಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಪದೇ ಪದೆ ಫೋಟೊಶೂಟ್ ಮಾಡಿಸಿ ಪೋಸ್ಟ್ ಮಾಡುತ್ತಿರುತ್ತಾರೆ. ಫಿಟ್‌ನೆಸ್ ಫ್ರೀಕ್ ಆಗಿರುವ ಚೆಲುವೆ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಮಾಡಿ ಹುಬ್ಬೇರಿಸುತ್ತಿರುತ್ತಾರೆ.

'ಅಮ್ಮ ಐ ಲವ್ ಯು' ಸಿನಿಮಾ ಮೂಲಕ ಬೆಂಗಳೂರು ಬೆಡಗಿ ನಿಶ್ವಿಕಾ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಪಡ್ಡೆಹುಲಿ, ಜಂಟಲ್‌ಮನ್, ಗುರುಶಿಷ್ಯರು, ದಿಲ್ ಪಸಂದ್ ಹೀಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ದೊಡ್ಡದಾಗಿ ಬ್ರೇಕ್ ಮಾತ್ರ ಸಿಗಲೇ ಇಲ್ಲ. ಇತ್ತೀಚೆಗೆ ಕನ್ನಡದ ನಟಿಯರು ಒಬ್ಬೊಬ್ಬರಾಗಿ ಪರಭಾಷೆಯತ್ತ ಮುಖ ಮಾಡುತ್ತಿದ್ದಾರೆ. ನಿಶ್ವಿಕಾ ಕೂಡ ತೆಲುಗು, ತಮಿಳಿನಲ್ಲಿ ನಟಿಸಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ.

More from Filmibeat

English summary
Nishvika Naidu Misses Out as Mouni Roy Films Special Song with Chiranjeevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X