For Quick Alerts
  ALLOW NOTIFICATIONS  
  For Daily Alerts

  ಎಸ್. ಎಸ್ ರಾಜಮೌಳಿ ಅಂದ್ರೆ ತುಂಬಾ ಇಷ್ಟ ಎಂದು ನುಲಿದ ಬಾಲಿವುಡ್ ಬ್ಯೂಟಿ!

  |

  ಬಾಲಿವುಡ್‌ನಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಸದ್ದು ಮಾಡುತ್ತಿರುವುದು ಗೊತ್ತೇಯಿದೆ. 8000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಚಿತ್ರದಲ್ಲಿ ಮೌನಿ ರಾಯ್ ಜುನೂನ್ ಆಗಿ ನೆಗೆಟಿವ್ ಶೇಡ್ ರೋಲ್‌ನಲ್ಲಿ ಬಣ್ಣ ಹಚ್ಚಿದ್ದಾಳೆ. ಚಿತ್ರದಲ್ಲಿ ಆಕೆಯ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  'ಮಗಧೀರ', 'ಬಾಹುಬಲಿ', 'RRR' ರೀತಿಯ ಸೂಪರ್ ಹಿಟ್ ಸಿನಿಮಾಗಳ ಸರದಾರ ಎಸ್‌. ಎಸ್‌ ರಾಜಮೌಳಿ. ಟಾಲಿವುಡ್ ಜಕ್ಕಣ್ಣನ ಜೊತೆ ಕೆಲಸ ಮಾಡಬೇಕು ಅನ್ನುವುದು ಸಾಕಷ್ಟು ನಟ- ನಟಿಯರ ಕನಸಾಗಿರುತ್ತದೆ. ಮಹೇಶ್ ಬಾಬು ನಟನೆಯ ಮುಂದಿನ ಚಿತ್ರಕ್ಕೆ ಮೌಳಿ ತಯಾರಿ ನಡೆಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ಮೂಡಿ ಬರಲಿದೆ. ಇತ್ತೀಚೆಗೆ ಬಾಲಿವುಡ್‌ನ 'ಬ್ರಹ್ಮಾಸ್ತ್ರ' ಚಿತ್ರಕ್ಕೂ ಬೆಂಬಲ ಸೂಚಿಸಿದ್ದರು. ಸಿನಿಮಾ ಪ್ರಚಾರದಲ್ಲಿ ತೊಡಗಿದ್ದರು.

  ನಟಿ ಮೌನಿ ರಾಯ್ 'ಬ್ರಹ್ಮಾಸ್ತ್ರ' ಸಿನಿಮಾ ಪ್ರಮೋಷನ್ ಭಾಗವಾಗಿ ನೀಡಿರುವ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾಳೆ. ಅದರಲ್ಲೂ ದಕ್ಷಿಣ ಭಾರತ ಸಿನಿಮಾಗಳ ಬಗ್ಗೆ ಇಲ್ಲಿನ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಕೂಡ ನಟಿಸಿದ್ದಾರೆ. ನಾಗ್ ಜೊತೆ ನಟಿಸಿದ್ದರ ಬಗ್ಗೆ ಮೌನಿ ಖುಷಿ ಹಂಚಿಕೊಂಡಿದ್ದಾಳೆ. ಅವರು ತುಂಬಾ ಚೆನ್ನಾಗಿದ್ದಾರೆ. ಅವರಂದರೆ ಕ್ರಶ್‌ ಅಂತೆಲ್ಲಾ ಹೇಳಿದ್ದಾಳೆ.

  ಇನ್ನು 'ಬ್ರಹ್ಮಾಸ್ತ್ರ' ಪ್ರಮೋಷನ್ ವೇಳೆ ಎಸ್. ಎಸ್ ರಾಜಮೌಳಿ ಜೊತೆ ಮೌನಿ ರಾಯ್ ವೇದಿಕೆ ಹಂಚಿಕೊಂಡಿದ್ದಳು. ತೆಲುಗು ಸಿನಿಮಾಗಳ ಬಗ್ಗೆ ಮಾತನಾಡಿರುವ ಚೆಲುವೆ ಅಲ್ಲು ಅರ್ಜುನ್ ಹಾಗೂ ರಾಮ್‌ ಚರಣ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಮೌಳಿ ಸಿನಿಮಾದಲ್ಲಿ ನಟಿಸೋಕೆ ಹುಚ್ಚಿಯಂತೆ ಕಾಯ್ತಿದ್ದೀನಿ ಎಂದಿದ್ದಾಳೆ. "ರಾಜಮೌಳಿ ನಿರ್ದೇಶನದಲ್ಲಿ ನಟಿಸೋ ಆಸೆ ಹೆಚ್ಚಿದೆ. ಅವರು ಮಾಡಿರುವ ಎಲ್ಲಾ ಸಿನಿಮಾಗಳ ದೊಡ್ಡ ಅಭಿಮಾನಿ ನಾನು. ಅವರ ಸಿನಿಮಾದಲ್ಲಿ ಒಂದೇ ಒಂದು ಪಾತ್ರಕ್ಕಾಗಿ ಬಹಳ ದಿನಗಳಿಂದ ಕಾಯ್ತಿದ್ದೀನಿ" ಎಂದು ಮೌನಿ ರಾಯ್ ವಿವರಿಸಿದ್ದಾಳೆ. ಈಕೆಯ ಹೇಳಿಕೆ ಈಗ ಸಖತ್ ಸದ್ದು ಮಾಡ್ತಿದೆ.

  ಇನ್ನು ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 10 ದಿನಕ್ಕೆ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್, ಸೌರವ್ ಗುಜರ್, ಡಿಂಪಲ್ ಕಪಾಡಿಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೀಘ್ರದಲ್ಲೇ ಚಿತ್ರದ ಸೀಕ್ವೆಲ್‌ಗಾಗಿ ಅಯಾನ್ ಮುಖರ್ಜಿ ಪ್ಲ್ಯಾನ್ ಮಾಡ್ತಿದ್ದಾರೆ.

  English summary
  Mouni roy says she would love to work with Director S S Rajamouli. Know More.
  Thursday, September 22, 2022, 0:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X