ಬೇರೆಯವರ ಜೀವನ ಕೆದಕುವ ರಾಮ್‌ಗೋಪಾಲ್ ವರ್ಮಾ ಜೀವನದ ಬಗ್ಗೆ ಸಿನಿಮಾ!

ಒಂದು ಕಾಲದ ಪ್ರತಿಭಾವಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪ್ರಸ್ತುತ ಕೇವಲ ಬಿ ಗ್ರೇಡ್ ಸಿನಿಮಾಗಳ ನಿರ್ದೇಶಕರಾಗಿಬಿಟ್ಟಿದ್ದಾರೆ.

Recommended Video

Danish Sait ಬಡಿಸಲಿರುವ French Biryani ಹಿಂದಿನ ಕಥೆ ಕೇಳಿ | Filmibeat Kannada

ನಾಯಕಿಯ ಗ್ಲಾಮರ್ ತೋರಿಸಿ ಸಿನಿಮಾ ಮಾಡಿಬಿಡುವ ರಾಮ್ ಗೋಪಾಲ್ ವರ್ಮಾ ಅದರ ಜೊತೆಗೆ ಆಗೊಮ್ಮೆ ಈಗೊಮ್ಮೆ ಪ್ರಸಿದ್ಧ ವ್ಯಕ್ತಿಗಳ ಜೀವನದ ಬಗ್ಗೆ ವಿವಾದಾತ್ಮಕ ಸಿನಿಮಾಗಳನ್ನು ಸಹ ನಿರ್ದೇಶಿಸುತ್ತಾರೆ. ಇದು ಅವರಿಗೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ಆದರೆ ಹೀಗೆ ಬೇರೆಯವರ ಜೀವನದ ಬಗ್ಗೆ ವಿವಾದಾತ್ಮಕ ಸಿನಿಮಾಗಳನ್ನು ಮಾಡುವ ರಾಮ್‌ ಗೋಪಾಲ್ ವರ್ಮಾ ಅವರ ಜೀವನದ ಬಗ್ಗೆಯೇ ಸಿನಿಮಾ ನಿರ್ಮಾಣವಾಗುತ್ತಿದೆ. ಸಿನಿಮಾದಲ್ಲಿ ರಾಮ್ ಗೋಪಾಲ್ ವರ್ಮಾ ಅನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದು ಪೋಸ್ಟರ್‌ನಿಂದಲೇ ಗೊತ್ತಾಗುತ್ತಿದೆ.

ಪವನ್ ಕಲ್ಯಾಣ್ ಬಗ್ಗೆ ಸಿನಿಮಾ

ಪವನ್ ಕಲ್ಯಾಣ್ ಬಗ್ಗೆ ಸಿನಿಮಾ

ಖ್ಯಾತ ನಟ ಪವನ್ ಕಲ್ಯಾಣ್ ಅವರ ಜೀವನದ ಬಗ್ಗೆ ಸಿನಿಮಾ ನಿರ್ದೇಶಿಸುತ್ತಿರುವ ರಾಮ್ ಗೋಪಾಲ್ ವರ್ಮಾ ಈಗಾಗಲೇ ಟ್ರೇಲರ್ ಸಹ ಬಿಡುಗಡೆ ಮಾಡಿದ್ದಾರೆ. ಟ್ರೇಲರ್‌ನಲ್ಲಿಯೇ ಸಾಕಷ್ಟು ವಿವಾದಾತ್ಮಕ ಅಂಶಗಳು ಎದ್ದು ಕಾಣುತ್ತಿವೆ.

ರಾಮ್ ಗೋಪಾಲ್ ವರ್ಮಾ ಬಗ್ಗೆ ಸಿನಿಮಾ

ರಾಮ್ ಗೋಪಾಲ್ ವರ್ಮಾ ಬಗ್ಗೆ ಸಿನಿಮಾ

ಆದರೆ ಇದಕ್ಕೆ ವಿರುದ್ಧವಾಗಿ ಈಗ ರಾಮ್‌ಗೋಪಾಲ್ ವರ್ಮಾ ಬಗ್ಗೆಯೇ ಸಿನಿಮಾ ನಿರ್ದೇಶಿಸಲಾಗುತ್ತಿದ್ದು, ಇದಕ್ಕೆ 'ಪರಾನ್ನ ಜೀವಿ' ಎಂದು ಹೆಸರಿಡಲಾಗಿದೆ. ಸಿನಿಮಾದ ಹೆಸರಿನ ಅರ್ಥ ಪರಾವಲಂಬಿ ಎಂದು.

ವರ್ಮಾ ಬಗ್ಗೆ ಹಾಡೊಂದು ಬಿಡುಗಡೆ

ವರ್ಮಾ ಬಗ್ಗೆ ಹಾಡೊಂದು ಬಿಡುಗಡೆ

ಈಗಾಗಲೇ ಸಿನಿಮಾದ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದ್ದು, 'ಸತ್ತವರನ್ನೂ ಬಿಡದ, ಬದುಕಿರುವವರನ್ನು ಮುಕ್ಕುವ ಪರಾವಲಂಬಿ ಜೀವಿ ಆರ್‌ಜಿವಿ', 'ತಂಗಿ, ತಾಯಿ ವ್ಯತ್ಯಾಸ ಗೊತ್ತಿಲ್ಲ' ಎಂದು ರಾಮ್ ಗೋಪಾಲ್ ವರ್ಮಾ ಬಗ್ಗೆ ಹಾಡಿನಲ್ಲಿ ತೆಗಳಲಾಗಿದೆ.

ಪವನ್ ಕಲ್ಯಾಣ್ ಅಭಿಮಾನಿಯಿಂದ ನಿರ್ದೇಶನ

ಪವನ್ ಕಲ್ಯಾಣ್ ಅಭಿಮಾನಿಯಿಂದ ನಿರ್ದೇಶನ

ಪವನ್ ಕಲ್ಯಾಣ್ ಅಭಿಮಾನಿ ಆಗಿರುವ ನೂತನ್ ನಾಯ್ಡು ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಲು ವಿವಾದಗಳಿಂದಲೇ ಖ್ಯಾತಿ ಗಳಿಸಿರುವ ಶ್ರೀ ರೆಡ್ಡಿ ಅವರನ್ನು ಕೇಳಿಲಾಗಿತ್ತು, ಆದರೆ ಅವರು ನಟಿಸುವುದಿಲ್ಲವೆಂದಿದ್ದಾರೆ.

More from Filmibeat

English summary
Movie coming out about director Ram Gopal Varma. Movie name Paranna Jevi. Movie made by Pawan Kalyan's fan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X