ದರ್ಶನ್ ಜೊತೆ ನಟಿಸಿದ್ದ ನಟಿಗೆ ಬೆದರಿಕೆ ಹಾಕಿದ ಮಾಜಿ ಕೇಂದ್ರ ಸಚಿವ

ಸಿನಿಮಾ ವೃತ್ತಿಜೀವನವನ್ನು ದರ್ಶನ್ ಅಭಿನಯದ ಸಿನಿಮಾದೊಂದಿಗೆ ಆರಂಭಿಸಿದ್ದ ನಟಿ ನವನೀತ್ ಕೌರ್ ರಾಣಾಗೆ ಲೋಕಸಭೆಯಲ್ಲಿಯೇ ಮಾಜಿ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ.

ನವನೀತ್ ಕೌರ್ ರಾಣಾ ಅವರು ನಟಿಯ ಜೊತೆಗೆ ರಾಜಕಾರಣಿಯೂ ಆಗಿದ್ದು, ಅಮರಾವತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಲೋಕಸಭೆಯಲ್ಲಿ ಚರ್ಚೆ ವೇಳೆ ಮಹಾರಾಷ್ಟ್ರದ ಸಚಿನ್ ವಾಜೆ ವಿಷಯವನ್ನು ಪ್ರಸ್ತಾಪಿಸಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆಗೆ ಒತ್ತಾಯಿಸಿದ್ದಕ್ಕೆ ಸಿಟ್ಟಾದ ಶಿವಸೇನಾ ಸದಸ್ಯ, ಮಾಜಿ ಕೇಂದ್ರ ಮಂತ್ರಿ ಅರವಿಂದ ಸಾವಂತ್ ನವನೀತ್ ಕೌರ್‌ಗೆ ಲೋಕಸಭೆಯಲ್ಲಿ ಬೆದರಿಕೆ ಹಾಕಿದ್ದಾರೆ.

ಬೆದರಿಕೆ ವಿಷಯದ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿರುವ ನವನೀತ್ ಕೌರ್, 'ಚರ್ಚೆ ಮುಗಿದ ಬಳಿಕ ಲೋಕಸಭೆಯ ಪ್ರಾಂಗಣದಲ್ಲಿ ಶಿವಸೇನಾ ಎಂಪಿ ಅರವಿಂದ ಸಾವಂತ್ ನನಗೆ ಬೆದರಿಕೆ ಹಾಕಿದ್ದಾರೆ. 'ಅದು ಹೇಗೆ ನೀನು ಮುಂಬೈನಲ್ಲಿ ಓಡಾಡುತ್ತೀಯೋ ನೋಡುತ್ತೇನೆ' ಎಂದು ಸಾವಂತ್ ಹೇಳಿದ್ದಾರೆ. ಅಷ್ಟೇ ಅಲ್ಲದೆ 'ನಿನ್ನನ್ನು ಜೈಲಿಗೆ ಹಾಕಿಸುತ್ತೇನೆ' ಎಂದೂ ಸಹ ಅರವಿಂದ ಸಾವಂತ್ ಬೆದರಿಸಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ ನವನೀತ್ ಕೌರ್.

MP Navneeth Kaur Alleged That Shiv Sena MP Arvind Sawanth Threatened Her

ದೂರವಾಣಿ ಮೂಲಕ ಹಾಗೂ ಶಿವಸೇನಾ ಲೆಟರ್‌ಹೆಡ್ ಇರುವ ಪತ್ರಗಳ ಮೂಲಕ ಆಸಿಡ್ ದಾಳಿಯ ಬೆದರಿಕೆಗಳು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ನವನೀತ್ ಕೌರ್ ಹೇಳಿದ್ದಾರೆ. ಶಿವಸೇನಾ ಸದಸ್ಯ ಅರವಿಂದ ಸಾವಂತ್ ವಿರುದ್ಧ ಪೊಲೀಸ್ ದೂರು ನೀಡುವುದಾಗಿಯೂ ನವನೀತ್ ಕೌರ್ ಹೇಳಿದ್ದಾರೆ.

ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಮುಖೇಶ್ ಅಂಬಾನಿ ಮನೆಯ ಮುಂದೆ ಸ್ಪೋಟಕ ತುಂಬಿದ್ದ ವಾಹನ ನಿಲ್ಲಿಸಿದ್ದ ಈ ಪ್ರಕರಣ ಮಹಾರಾಷ್ಟ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಇದರ ನಡುವೆ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಗೃಹ ಸಚಿವ ಅನಿಲ್ ದೇಶ್‌ಮುಖ್‌ ತಿಂಗಳಿಗೆ 100 ಕೋಟಿ ಸಂಗ್ರಹಿಸುವಂತೆ ಸಚಿನ್ ವಾಜೆಗೆ ಟಾರ್ಗೆಟ್ ನೀಡಿದ್ದರೆಂದು ಹೇಳಿದ್ದಾರೆ. ಇದು ಸಹ ಮಹಾರಾಷ್ಟ್ರ ಸರ್ಕಾರಕ್ಕೆ ಇನ್ನಷ್ಟು ಹಿನ್ನಡೆ ಉಂಟುಮಾಡಿದೆ. ಇದೇ ವಿಷಯವನ್ನು ನವನೀತ್ ಕೌರ್ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು.

Recommended Video

Harshika ಜೊತೆ ಕನ್ನಡದ ಹಾಡನ್ನು ಹಾಡಿ ಮಿಂಚಿದ ನಟ Govinda | Filmibeat Kannada

ಇನ್ನು ನಟಿ, ರಾಜಕಾರಣಿ ನವನೀತ್ ಕೌರ್ ವಿಷಯಕ್ಕೆ ಮರಳುವುದಾದರೆ, ಈ ನಟಿ ಕನ್ನಡದ 'ದರ್ಶನ್' ಸಿನಿಮಾದಲ್ಲಿ ನಟ ದರ್ಶನ್‌ಗೆ ನಾಯಕಿಯಾಗಿ ನಟಿಸುವ ಮೂಲಕ ನಟನಾ ವೃತ್ತಿ ಆರಂಭಿಸಿದರು. ಆ ನಂತರ ಹಲವಾರು ತೆಲುಗು, ತಮಿಳು, ಕೆಲವು ಮಲಯಾಳಂ, ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ನಟಿಸಿದರು. ಅಮರಾವತಿ ಕ್ಷೇತ್ರದಿಂದ ಪಕ್ಷೇತರವಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ ನವನೀತ್ ಕೌರ್.

More from Filmibeat

English summary
Amaravathi MP Navneeth Kaur alleged that Shiv Sena MP Arvind Sawanth threatened her in Lok Sabha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X