For Quick Alerts
  ALLOW NOTIFICATIONS  
  For Daily Alerts

  ಆಕೆ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ: ನಟಿಯ ಬಗ್ಗೆ ಸಂಸದ ಹೇಳಿಕೆ

  By ಫಿಲ್ಮೀಬೀಟ್ ಡೆಸ್ಕ್
  |

  ತೆಲುಗು ರಾಜ್ಯಗಳಲ್ಲಿ ಸಾಮಾಜಿಕ ಜಾಲತಾಣ ನಿಂದನೆ ತುಸು ಹೆಚ್ಚೇ ಆಗಿರುವಂತಿದೆ. ನಟ-ನಟಿಯರು ಮಾತ್ರವೇ ಅಲ್ಲದೆ ರಾಜಕಾರಣಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಕೆಟ್ಟದಾಗಿ ಬೈದುಕೊಳ್ಳುತ್ತಿದ್ದಾರೆ.

  ಇದೀಗ ಆಂಧ್ರಪ್ರದೇಶದ ಸಂಸದರೊಬ್ಬರು ತೆಲುಗಿನ ನಟಿಯೊಬ್ಬರ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ಸಂಸದರಾಗಿ ಆಯ್ಕೆ ಆಗಿರುವ ರಘುರಾಮ ಕೃಷ್ಣ ರಾಜು ಅವರು ನಟಿ ಶ್ರೀರೆಡ್ಡಿ ಅನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಾರೆ.

  ಜಗನ್‌ ಪಕ್ಷದಿಂದ ಚುನಾವಣೆ ಸ್ಪರ್ಧಿಸಿ ಗೆದ್ದು ಸಂಸದರಾಗಿರುವ ರಘುರಾಮ ಕೃಷ್ಣ ರಾಜು ಅವರು ಇತ್ತೀಚೆಗೆ ಸ್ವತಃ ಜಗನ್‌ಮೋಹನ್ ರೆಡ್ಡಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಜೊತೆಗೆ ರೆಡ್ಡಿ ಸಮುದಾಯದ ವಿರುದ್ಧವೂ ಮಾತನಾಡಿದ್ದಾರೆ. ಇದೇ ಕಾರಣಕ್ಕೆ, ನಟಿ ಶ್ರೀರೆಡ್ಡಿ ರಘುರಾಮ ಕೃಷ್ಣ ರಾಜು ಕುರಿತು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಅದಕ್ಕೆ ವಿರುದ್ಧವಾಗಿ ವಿಡಿಯೋ ಪ್ರಕಟಿಸಿರುವ ಕೃಷ್ಣ ರಾಜು ನಟಿಯನ್ನು ವಯಸ್ಕರ ಸಿನಿಮಾಗಳಲ್ಲಿ ನಟಿಸುವ ನಟಿ ಎಂದಿದ್ದಾರೆ.

  ಬ್ಲೂಫಿಲಂ ನಟಿ ಶ್ರೀರೆಡ್ಡಿ: ಸಂಸದ ರಘುರಾಮ ಕೃಷ್ಣ ರಾಜ

  ಬ್ಲೂಫಿಲಂ ನಟಿ ಶ್ರೀರೆಡ್ಡಿ: ಸಂಸದ ರಘುರಾಮ ಕೃಷ್ಣ ರಾಜ

  ವಿಡಿಯೋದಲ್ಲಿ ಮಾತನಾಡಿರುವ ಕೃಷ್ಣ ರಾಜು, 'ಒಂದು ಸಮುದಾಯಕ್ಕೆ ಬೆಂಬಲ ನೀಡುತ್ತಾ ನನ್ನನ್ನು ನಿಂದಿಸುತ್ತಿರುವ ಬ್ಲೂಫಿಲಂ ನಟಿ ಶ್ರೀರೆಡ್ಡಿ ನೀನು ಎಂಥಹವಳು ಎಂಬುದು ಎಲ್ಲರಿಗೂ ಗೊತ್ತಿದೆ' ಎಂದಿದ್ದಾರೆ ಸಂಸದ ರಘುರಾಮ ಕೃಷ್ಣ ರಾಜು.

  ನಿನ್ನೆ ಬೆತ್ತಲೆ ಪ್ರತಿಭಟನೆಗಳ ಬಗ್ಗೆ ಜನರಿಗೆ ಗೊತ್ತು: ಸಂಸದ

  ನಿನ್ನೆ ಬೆತ್ತಲೆ ಪ್ರತಿಭಟನೆಗಳ ಬಗ್ಗೆ ಜನರಿಗೆ ಗೊತ್ತು: ಸಂಸದ

  'ನೀನು ಆ ಸಮುದಾಯದವರಿಂದ ಹಣ ಪಡೆದು ನನ್ನ ತೇಜೋವಧೆ ಮಾಡಲು ಇಳಿದಿದ್ದೀಯಾ. ನೀನು ಆ ಜಾತಿಯವರಿಗೆ ಶೃಂಗಾರ ದೇವತೆ ಆಗಿರಬಹುದು ಆದರೆ ನಿನ್ನ ಯೋಗ್ಯತೆ ಎಲ್ಲರಿಗೂ ಗೊತ್ತಿದೆ. ನಿನ್ನ ಬೆತ್ತಲೆ ಪ್ರತಿಭಟನೆ. ಬೈಗುಳಗಳು ತುಂಬಿರುವ ವಿಡಿಯೋಗಳು ಎಲ್ಲದರ ಬಗ್ಗೆಯೂ ಜನರಿಗೆ ಗೊತ್ತು' ಎಂದಿದ್ದಾರೆ ಕೃಷ್ಣ ರಾಜು.

  ಹಣಕ್ಕಾಗಿ ಪವನ್‌ ಕಲ್ಯಾಣ್‌ ಅನ್ನು ನಿಂದಿಸಿದೆ: ಕೃಷ್ಣ ರಾಜು

  ಹಣಕ್ಕಾಗಿ ಪವನ್‌ ಕಲ್ಯಾಣ್‌ ಅನ್ನು ನಿಂದಿಸಿದೆ: ಕೃಷ್ಣ ರಾಜು

  'ಶ್ರಂಗಾರ ದೇವತೆ, ಬ್ಲೂ ಫಿಲಂ ನಟಿ. ನೀನು ಒಂದು ಪಕ್ಷದವರಿಂದ ಹಣ ಪಡೆದುಕೊಂಡು ಪವನ್ ಕಲ್ಯಾಣ್‌ ತೇಜೋವಧೆ ಮಾಡಿದ್ದು ನಿಜ ತಾನೆ? ಹಣಕ್ಕಾಗಿ ಅವರನ್ನು ಎಷ್ಟೆಲ್ಲಾ ಬೈದೆ. ಆದರೆ ಪವನ್ ಕಲ್ಯಾಣ್ ಒಳ್ಳೆಯವರು ಎಲ್ಲವನ್ನೂ ನೋಡಿ ಸುಮ್ಮನೆ ಇದ್ದಾರೆ. ಆದರೆ ಎಲ್ಲರೂ ಹಾಗೆಯೇ ಇರುವುದಿಲ್ಲ. ನಿನ್ನೆ ಬೆದರಿಕೆಗಳು ಹೆದರುವವರು ಯಾರೂ ಇಲ್ಲಿಲ್ಲ' ಎಂದಿದ್ದಾರೆ ಕೃಷ್ಣ ರಾಜು.

  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಶ್ರೀರೆಡ್ಡಿ

  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಶ್ರೀರೆಡ್ಡಿ

  ಕೆಲವು ದಿನಗಳ ಹಿಂದಷ್ಟೆ ಸಂಸದ ರಘುರಾಂ ಕೃಷ್ಣ ರಾಜು ಬಗ್ಗೆ ವಿಡಿಯೋ ಮಾಡಿದ್ದ ಶ್ರೀರೆಡ್ಡಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರು. 'ಗಂಡಸಲ್ಲ', 'ವಿಗ್‌ರಾಜ' ಇನ್ನೂ ಅನೇಕ ಅವಾಚ್ಯ ಶಬ್ದಗಳನ್ನು ಬಳಸಿ ಶ್ರೀರೆಡ್ಡಿ ಸಂಸದ ರಘುರಾಮ ಕೃಷ್ಣ ರಾಜು ಅವರನ್ನು ತೆಗಳಿದ್ದರು. ಹೀಗೆ ಹೆಸರಾಂತ ರಾಜಕಾರಣಿಗಳನ್ನು, ನಟ-ನಟಿಯರನ್ನು ಅವಾಚ್ಯವಾಗಿ ನಿಂದಿಸುವುದು ಶ್ರೀರೆಡ್ಡಿಗೆ ಹೊಸದೇನೂ ಅಲ್ಲ. ಪವನ್ ಕಲ್ಯಾಣ್, ಸಮಂತಾ, ಚಂದ್ರಬಾಬು ನಾಯ್ಡು, ಬಂಡ್ಲ ಗಣೇಶ್ ಇನ್ನೂ ಹಲವರ ಬಗ್ಗೆ ವಿಡಿಯೋಗಳನ್ನು ಹಾಕುತ್ತಲೇ ಇರುತ್ತಾರೆ.

  English summary
  YSR Congress MP Raghurama Krishna Raju lambasted on Sri Reddy on video posted on Facebook. few days back Sri Reddy did comments on Raghurama Krishnam Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X