For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ- ಪೂಜಾನ ಮೀರಿಸೋ ಗಟ್ಟಿಗಿತ್ತಿ ಬಂದೇಬಿಟ್ಲು: ಎಲ್ಲೆಲ್ಲೂ ಈಗ ಮರಾಠಿ ಮಲ್ಲಿಗೆ ಘಮಲು!

  |

  ನಂಬರ್ ವನ್ ಪ್ಲೇಸ್ ಯಾರಿಗೂ ಸ್ವಂತ ಅಲ್ಲ. ಇವತ್ತು ಮೊದಲ ಸ್ಥಾನದಲ್ಲಿ ಇದ್ದವರು ಒಂದಲ್ಲ ಒಂದು ದಿನ ಕೆಳಗೆ ಇಳಿಯಲೇಬೇಕು. ಟಾಲಿವುಡ್‌ನಿಂದ ಬಾಲಿವುಡ್‌ವರೆಗೂ ಸದ್ಯ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಹೆಸರು ಕೇಳಿ ಬರ್ತಿದೆ. ಆದರೆ ಒಂದೇ ಒಂದು ಹಿಟ್ ಸಿನಿಮಾದಿಂದ ಕಂಪ್ಲೀಟ್ ಚಿತ್ರಣವೇ ಬದಲಾಗಿ ಹೋಗಿದೆ. ಈಗ ಇವರಿಬ್ಬರಿಗೆ ಪೈಪೋಟಿ ಕೊಡೋಕೆ ಹೊಸ ನಟಿಯ ಆಗಮನವಾಗಿದೆ.

  ಕಾಲಿವುಡ್‌, ಬಾಲಿವುಡ್‌, ಟಾಲಿವುಡ್‌ನಲ್ಲಿ ಯಾವುದೇ ಸೂಪರ್ ಸ್ಟಾರ್‌ ಸಿನಿಮಾ ಸೆಟ್ಟೇರಿದರೂ ನಾಯಕಿಯಾಗಿ ಪೂಜಾ ಹೆಗ್ಡೆ, ರಶ್ಮಿಕಾ ಹೆಸರುಗಳು ಚಾಲ್ತಿಗೆ ಬರ್ತಿದೆ. ಈ ಹಿಂದೆ ತಮನ್ನಾ, ಕಾಜಲ್ ಅಗರ್‌ವಾಲ್, ನಯನತಾರಾ, ಸಮಂತಾ ಇದೇ ರೀತಿ ಕಮಾಲ್ ಮಾಡ್ತಿದ್ದರು. ಹೊಸ ನೀರು ಬಂದಮೇಲೆ ಹಳೇ ನೀರು ಹೋಗಬೇಕು ಅನ್ನುವಂತೆ ಹೊಸ ನಟಿಯರ ಆಗಮನದಿಂದ ಇವರೆಲ್ಲಾ ಸೈಲೆಂಟ್ ಆಗಿದ್ದರು. ಈಗ ಮತ್ತೆ ಅದೇ ಕಥೆ ಪುನರಾವರ್ತನೆ ಆಗುವಂತೆ ಕಾಣುತ್ತಿದೆ.

  ವಿಡಯೋ: ರಶ್ಮಿಕಾ ಮಂದಣ್ಣ ಭೇಟಿ ಆಗಬೇಕೆಂದ ಈ ಪುಟಾಣಿ ಕ್ಯೂಟಿ ಯಾರು..?ವಿಡಯೋ: ರಶ್ಮಿಕಾ ಮಂದಣ್ಣ ಭೇಟಿ ಆಗಬೇಕೆಂದ ಈ ಪುಟಾಣಿ ಕ್ಯೂಟಿ ಯಾರು..?

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಮಾತ್ರವಲ್ಲದೇ ಬಾಲಿವುಡ್‌ನಲ್ಲಿ ಸಾಲು ಸಾಲು ಅವಕಾಶಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾರೆ. ಇನ್ನು ಪೂಜಾ ಹೆಗ್ಡೆ ನಟಿಸಿದ ಸಿನಿಮಾಗಳು ಸೋಲುಂಡರೂ ಆಕೆಯ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ.

  'ಸೀತಾ ರಾಮಂ' ಮೃಣಾಲ್ ಹವಾ

  'ಸೀತಾ ರಾಮಂ' ಮೃಣಾಲ್ ಹವಾ

  ಇತ್ತೀಚೆಗೆ ಬಿಡುಗಡೆಯಾದ ತೆಲುಗಿನ 'ಸೀತಾ ರಾಮಂ' ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೋಡಿಯಾಗಿ ಈ ಮರಾಠಿ ಚೆಲುವೆ ಮೃಣಾಲ್ ಠಾಕೂರ್ ನಟಿಸಿ ಗೆದ್ದಿದ್ದಾರೆ. ಸಿನಿಮಾ ನೋಡಿದವರೆಲ್ಲಾ ಈಕೆಯ ಚೆಲುವಿಗೆ ನಟನೆಗೆ ಮಾರು ಹೋಗಿದ್ದಾರೆ. ಹಿಂದಿಗೂ ಡಬ್ ಆಗಿ ಚಿತ್ರ ಸಖತ್ ಸದ್ದು ಮಾಡ್ತಿದೆ. ಓಟಿಟಿಯಲ್ಲೂ ಸ್ಟ್ರೀಮಿಂಗ್ ಆಗಿ ಸಿನಿರಸಿಕರನ್ನು ಸೆಳೀತಿದೆ.

  ಹಿಂದಿಯಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ: ಜನಪ್ರಿಯ ಸಿನಿಮಾ ಸರಣಿಗೆ ನಾಯಕಿ?ಹಿಂದಿಯಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ: ಜನಪ್ರಿಯ ಸಿನಿಮಾ ಸರಣಿಗೆ ನಾಯಕಿ?

  ನೆಟ್‌ ವರ್ಲ್ಡ್ ತುಂಬೆಲ್ಲಾ ಮೃಣಾಲ್ ರಂಗು

  ನೆಟ್‌ ವರ್ಲ್ಡ್ ತುಂಬೆಲ್ಲಾ ಮೃಣಾಲ್ ರಂಗು

  'ಸೀತಾ ರಾಮಂ' ಚಿತ್ರದಲ್ಲಿ ಪ್ರಿನ್ಸೆಸ್ ನೂರ್ ಜಹಾನ್ ಆಗಿ ಮೃಣಾಲ್ ಮೋಡಿ ಮಾಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಮೃಣಾಲ್ ಠಾಕೂರ್ ಕ್ಯೂಟ್ ಫೋಟೋಸ್ ರಾರಾಜಿಸುತ್ತಿದೆ. 'ಸೀತಾ ರಾಮಂ' ಚಿತ್ರದಲ್ಲಿ ಆಕೆಯ ಸಣ್ಣ ಸಣ್ಣ ವಿಡಿಯೋಗಳನ್ನು ಕಟ್ ಮಾಡಿ ಅಭಿಮಾನಿಗಳು ಶೇರ್ ಮಾಡ್ತಿದ್ದಾರೆ. ಸದ್ಯ ಮೃಣಾಲ್ ಠಾಕೂರ್ ಕ್ರೇಜ್ ಜೋರಾಗಿದೆ.

  ಎನ್‌ಟಿಆರ್‌ ಜೋಡಿಯಾಗಿ ಮೃಣಾಲ್?

  ಎನ್‌ಟಿಆರ್‌ ಜೋಡಿಯಾಗಿ ಮೃಣಾಲ್?

  ಕೊರಟಾಲ ಶಿವ ನಿರ್ದೇಶನದ ಮುಂದಿನ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಹೀರೊ ಆಗಿ ನಟಿಸ್ತಿದ್ಧಾರೆ. ಚಿತ್ರಕ್ಕೆ ನಾಯಕಿ ಯಾರು ಅನ್ನುವ ಚರ್ಚೆ ಬಹಳ ದಿನಗಳಿಂದ ನಡೀತಾನೆ ಇದೆ. ಈ ಹಿಂದೆ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಹಾಗೂ ಆಲಿಯಾ ಭಟ್ ಹೆಸರುಗಳು ಕೇಳಿಬರ್ತಿದೆ. ಆದರೆ ಈಗ ಮೃಣಾಲ್ ಠಾಕೂರ್ ನಾಯಕಿಯಾಗ್ತಾರೆ ಅನ್ನುವ ಗುಸುಗುಸು ಶುರುವಾಗಿದೆ. ಅಷ್ಟರಮಟ್ಟಿಗೆ ಮೃಣಾಲ್ ಠಾಕೂರ್ ಹವಾ ಶುರುವಾಗಿದೆ.

  ಸಾಯಿ ಪಲ್ಲವಿಗೆ ಸಿಗಬೇಕಿದ್ದ ಸೈಮಾ ಅವಾರ್ಡ್ ಪೂಜಾಗೆ ಸಿಕ್ತಾ? ದುಡ್ಡು ಕೊಟ್ಟು ಅವಾರ್ಡ್ ತಗೊಂಡ್ರಾ ಕರಾವಳಿ ಚೆಲುವೆ?ಸಾಯಿ ಪಲ್ಲವಿಗೆ ಸಿಗಬೇಕಿದ್ದ ಸೈಮಾ ಅವಾರ್ಡ್ ಪೂಜಾಗೆ ಸಿಕ್ತಾ? ದುಡ್ಡು ಕೊಟ್ಟು ಅವಾರ್ಡ್ ತಗೊಂಡ್ರಾ ಕರಾವಳಿ ಚೆಲುವೆ?

  ಮರಾಠಿ ಚೆಲುವೆಯಿಂದ ಪ್ರಬಲ ಪೈಪೋಟಿ

  ಮರಾಠಿ ಚೆಲುವೆಯಿಂದ ಪ್ರಬಲ ಪೈಪೋಟಿ

  ಒಂದೇ ಒಂದು ಸಿನಿಮಾ ಹಿಟ್ ಆಗಿದ್ದಕ್ಕೆ ಮೃಣಾಲ್ ಕಾರುಬಾರು ಈ ರೇಂಜಿಗಿದೆ. ಇನ್ನೊಂದು ಹಿಟ್ ಕೊಟ್ಟರೆ ಕಥೆ ಮುಗೀತು. ನಟನೆ ಬರದೇ ಇದ್ದರೂ ಬರೀ ಗ್ಲಾಮರಸ್‌ ಆಗಿ ಕಾಣಿಸಿಕೊಂಡು ಗೆಲ್ಲುವವರಿಗೆ ಮೃಣಾಲ್ ಪ್ರಬಲ ಪೈಪೋಟಿ ಎಂದೇ ಹೇಳಬಹುದು. ಯಾಕಂದರೆ ಅಂದದ ಜೊತೆಗೆ ಅಭಿನಯದಲ್ಲೂ ಈಕೆ ಸೈ ಅನ್ನಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಇಬ್ಬರಿಗೂ ಮೃಣಾಲ್ ಟಫ್ ಕಾಂಪಿಟೇಟರ್ ಅನ್ನುವ ಚರ್ಚೆ ಫಿಲ್ಮ್‌ ನಗರ್‌ನಲ್ಲಿ ನಡೀತಿದೆ. ಮರಾಠಿ ಚೆಲುವೆ ಆಗಿರುವುದರಿಂದ ಈಕೆಗೆ ಬಾಲಿವುಡ್ ಎಂಟ್ರಿ ಕೂಡ ಕಷ್ಟ ಆಗುವುದಿಲ್ಲ.

  English summary
  Mrunal Thakur Got Huge Craze in Tollywood. Bollywood heroine Mrunal Thakur made her Tollywood debut with the recently released Dulquer Salmaan starrer Sita Ramam. Know more.
  Thursday, September 15, 2022, 17:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X