ಬಾಲಿವುಡ್ ಕರಾಳ ಮುಖ ಬಿಚ್ಚಿಟ್ಟ ಮೃಣಾಲ್ ; ನನ್ನ ತೊಡೆ ನನ್ನ ಇಷ್ಟವೆಂದ ಸೀತಾ ರಾಮಂ ನಟಿ
ಅಂದ ಚೆಂದ ಇದ್ದರೆ ಪ್ರತಿಭೆ ಇರಲ್ಲ. ಪ್ರತಿಭೆ ಇದ್ದವರಲ್ಲಿ ಗ್ಲಾಮರ್ ಇರಲ್ಲ ಎನ್ನುವಂಥಾ ಪರಿಸ್ಥಿತಿಯಲ್ಲಿ ಎರಡನ್ನೂ ಎರಕ ಹೊಯ್ದಂತೆ ಇರುವ ನಟಿ ಮೃಣಾಲ್ ಠಾಕೂರ್. ಹುಟ್ಟಿದ್ದು ಮಹಾರಾಷ್ಟ್ರದಲ್ಲಿ ಆದರೂ, ದಕ್ಷಿಣದೆಲ್ಲೆಡೆ ಅಭಿಮಾನಿ ಬಳಗವನ್ನ ಹೊಂದಿರುವ ಮೃಣಾಲ್ ನಡೆದು ಬಂದ ಹಾದಿಯನ್ನೊಮ್ಮೆ ಸದ್ಯಕ್ಕೆ ತಿರುಗಿ ನೋಡ್ತಿದ್ದಾರೆ. ಆತ್ಮಾವಲೋಕನ ಮಾಡಿಕೊಳ್ತಿದ್ದಾರೆ. ಇದರ ಒಂದು ಭಾಗವೆಂಬಂತೆ ಮೃಣಾಲ್, ಹಿಂದಿ ಉದ್ಯಮದವರ ದೃಷ್ಟಿಕೋನ ಮತ್ತು ತನಗಾದ ಅವಮಾನದ ಕಥೆಯನ್ನ ಹಂಚಿಕೊಂಡಿದ್ದಾರೆ.
ಹೌದು, ಆರಂಭದಲ್ಲಿ ಮರಾಠಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ಮೃಣಾಲ್, ಮುಂಬೈಗೆ ಬಂದಿಳಿದ್ದಿದ್ದು 2018ರಲ್ಲಿ. ಲವ್ ಸೋನಿಯಾ ಚಿತ್ರದ ಮೂಲಕ, ಮಾಯಾನಗರಿ ಮುಂಬೈನಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನವನ್ನ ಮೃಣಾಲ್ ಮಾಡಿದ್ದರು. ಆದರೆ ಫಲಿತಾಂಶ ಅಷ್ಟಕಷ್ಟೇ. ಆ ನಂತರ ಸೂಫರ್ 30 ಸಿನಿಮಾ ಹೆಸರು ತಂದು ಕೊಡ್ತಾದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. ಯಾಕೆಂದರೆ ಮೃಣಾಲ್ ಗೆ ಮೊದಲಿಂದ ಸವಾಲೊಡ್ಡುವ ಪಾತ್ರದಲ್ಲಿ ನಟಿಸುವ ಆಸೆ. ಹೀಗಾಗಿ ಹಿಂದಿ ಉದ್ಯಮದ ತಮ್ಮ ಸ್ನೇಹಿತರಲ್ಲಿ.. ನಿರ್ದೇಶಕರಲ್ಲಿ.. ತೂಕ ಇರುವ ಪಾತ್ರಕ್ಕೆ ಮನವಿ ಮಾಡಿ ಸುಸ್ತಾದ ಮೃಣಾಲ್ ಆ ನಂತರ ಬಂದಿದ್ದು ದಕ್ಷಿಣದ ಕಡೆಗೆ. ಮುಂದೆ ಮೃಣಾಲ್ ಸೀತಾ ರಾಮಂ, ಹಾಯ್ ನಾನ್ನಾ ಸಿನಿಮಾ ಮಾಡಿದ್ದು, ಆ ಸಿನಿಮಾಗಳಿಂದ ಅಪಾರ ಜನಮನ್ನಣೆ ಸಿಕ್ಕಿದ್ದು ಎಲ್ಲವೂ ಕಣ್ಮುಂದೆಯೇ ಇದೆ.

ಹಾಗಂಥ, ಹಿಂದಿ ಉದ್ಯಮದಲ್ಲಿ ಮೃಣಾಲ್ ಗೆ ಅವಕಾಶ ಸಿಕ್ತಿಲ್ಲ ಎಂದೇನಿಲ್ಲ. ಅಲ್ಲಿನವರು ಈಗಲೂ ಮೃಣಾಲ್ ಅವರನ್ನ ಸಂಪರ್ಕ ಮಾಡ್ತಿದ್ದಾರೆ. ಕಥೆ ಹೇಳ್ತಿದ್ದಾರೆ. ಆದರೆ ಪಾತ್ರ ಪೋಷಣೆ ವಿಚಾರಕ್ಕೆ ಬಂದರೆ, ಮತ್ತದೇ ಮರ ಸುತ್ತುವ ಪಾತ್ರಗಳನ್ನೇ ಮೃಣಾಲ್ ಗೆ ನೀಡುವ ಪ್ರಯತ್ನವನ್ನ ಹಿಂದಿ ನಿರ್ದೇಶಕರು ಮಾಡ್ತಿದ್ದಾರೆ. ಇದು ಮೃಣಾಲ್ ಗೆ ಸುತಾರಾಂ ಇಷ್ಟ ಇಲ್ಲ. ಹೀಗಾಗಿಯೇ ಸದ್ಯಕ್ಕೆ ದಕ್ಷಿಣದ ಕಡೆಯೇ ಹೆಚ್ಚು ಒಲವನ್ನ ತೋರಿಸುತ್ತಿರುವ ಮೃಣಾಲ್, ಇದೇ ಸಮಯದಲ್ಲಿ ದಪ್ಪಗಿರುವ ನಾಯಕಿಯರಿಗೆ ಎದುರಾಗುವ ಸವಾಲುಗಳ ಬಗ್ಗೆಯೂ ಮಾತನಾಡಿದ್ದಾರೆ
ಅದೊಂದು ದಿನ ಚಿತ್ರದ ಕುರಿತು ಮಾತನಾಡಲು ತೆರಳಿದ ಸಮಯದಲ್ಲಿ, ನಿನ್ನಲ್ಲಿ ಲೈಂಗಿಕ ಆಕರ್ಷಣೆ ಇಲ್ಲವೆಂದು ಚಿತ್ರದ ನಿರ್ದೇಶಕರು ಹೇಳಿದ್ದರು ಎಂದು ಮೃಣಾಲ್ ಹೇಳಿದ್ದಾರೆ. ಇದರಿಂದ ವಿಚಲಿತಗೊಂಡು ಆ ನಂತರ ಪಾತ್ರದ ಬಗ್ಗೆ ಮಾತನಾಡ್ತಿದ್ದೀರಾ, ನನ್ನ ಬಗ್ಗೆ ಮಾತನಾಡ್ತಿದ್ದೀರಾ ಎಂದು ಕೇಳಿದ್ದೇ ಎಂದಿರುವ ಮೃಣಾಲ್ ಲುಕ್ ಟೆಸ್ಟ್ ಮಾಡುವಂತೆ ಮನವಿಯನ್ನೂ ಮಾಡಿದ್ದೇ ಆದರೆ ಪ್ರಯೋಜನವಾಗಲಿಲ್ಲ, ಅವರಿಗೆ ನಾನು ಸೆಕ್ಸಿಯಾಗಿ ಕಾಣಲಿಲ್ಲವೆಂದಿದ್ದಾರೆ. ಇನ್ನೂ ಇದೇ ಸಮಯದಲ್ಲಿ ಅಲ್ಲಿಗೆ ಬಂದ ಛಾಯಾಗ್ರಾಹಕರೊಬ್ಬರು ಯಾರು ಈ ಹಳ್ಳಿ ಹುಡುಗಿ ಎಂದು ಆ ವ್ಯಕ್ತಿಗೆ ಪ್ರಶ್ನಿಸಿದ್ದರು ಎಂದು ಮೃಣಾಲ್ ಹೇಳಿದ್ದಾರೆ. ಇನ್ನೂ ನನ್ನ ಪ್ರಕಾರ ನನ್ನ ಕಾಲಿನ ಬೆರಳಿನ ಸತ್ತ ಚರ್ಮವೂ ನನಗೆ ಮಾದಕವಾಗಿ ಕಾಣಿಸುತ್ತೆ ಎಂದಿರುವ ಮೃಣಾಲ್, ಎಲ್ಲವೂ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬ ಅರ್ಥದಲ್ಲಿ ಮಾತುಗಳನ್ನಾಡಿದ್ದಾರೆ.

ಇನ್ನೂ ಹಾಡೊಂದಕ್ಕೆ ಮೊದಲ ಬಾರಿ ಹೆಜ್ಜೆ ಹಾಕಿದಾಗ, ಅನೇಕರು ನೀವೂ ತುಂಬಾ ದಪ್ಪಗಿದ್ದೀರಾ ಡ್ಯಾನ್ಸ್ ಎಲ್ಲ ಮಾಡಬೇಡಿ ಎಂಬ ಸಲಹೆಯನ್ನ ಕೊಟ್ಟಿದ್ದರು ಎಂದಿರುವ ಮೃಣಾಲ್, ನನಗೆ ದಪ್ಪ ತೊಡೆಗಳಿವೆ, ಅದ್ರಿಂದ ನನಗೆ ಯಾವುದೇ ಮುಜುಗರವಾಗದೇ ಇದ್ದಾಗ, ನಿಮಗ್ಯಾಕೇ ಮುಜುಗರ ಎಂದು ಮರು ಪ್ರಶ್ನೆಯನ್ನ ಹಾಕಿದ್ದ ಘಟನೆಯನ್ನೂ ಮೆಲುಕು ಹಾಕಿದ್ದಾರೆ.
ಇಂಥಹ ಮೃಣಾಲ್ ಠಾಕೂರ್ ಸದ್ಯಕ್ಕೆ ವಿಜಯ್ ದೇವರಕೋಂಡ ಜೊತೆ ತೆರೆ ಹಂಚಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಫ್ಯಾಮಿಲಿ ಸ್ಟಾರ್ ಎಂಬ ಹೆಸರನ್ನಿಡಲಾಗಿದೆ. ಮಿಕ್ಕಂತೆ ಹಿಂದಿಯಲ್ಲಿ ಕೂಡ ಮೃಣಾಲ್ ಅಭಿನಯದ ಒಂದು ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











