ಮನಮೋಹಕ ಮೃಣಾಲ್ ಠಾಕೂರ್ ಮಾದಕತೆಗೆ ಮುನಿಸಿಕೊಂಡ ಫ್ಯಾನ್ಸ್...!

ಉತ್ತರದಿಂದ ವಲಸೆ ಬಂದು ದಕ್ಷಿಣದಲ್ಲಿ ಗೆದ್ದವರು ಮೃಣಾಲ್ ಠಾಕೂರ್. ಸೀತಾ ರಾಮಂ.. ಹಾಯ್ ನನ್ನಾ.. ಫ್ಯಾಮಿಲಿ ಸ್ಟಾರ್.. ಹೀಗೆ ಒಂದಾದ ಮೇಲೊಂದು ತೆಲುಗು ಸಿನಿಮಗಳ ಮೂಲಕ ಮೋಡಿ ಮಾಡಿದ ಮೃಣಾಲ್ ಅವರನ್ನ ಇವರ ಅಭಿಮಾನಿಗಳು ಗೌರಮ್ಮನಂತೆಯೇ ನೋಡಲು ಬಯಸುತ್ತಾರೆ. ನಮ್ಮ ಸುಂದರಿ ಸಾಂಪ್ರದಾಯಿಕ ಉಡುಗೆಯಲ್ಲಿ ಇನ್ನೂ ಮುದ್ದಾಗಿ ಕಾಣ್ತಾರೆ ಎಂದು ಹೇಳ್ತಾರೆ

ಆದರೆ.. ಇದು ಬಣ್ಣದ ಪ್ರಪಂಚ. ಇಲ್ಲಿ ಟ್ರೆಡಿಷನಲ್ ಲುಕ್ ಕಿಕ್ ಕೊಡುವುದು ಕಡಿಮೆ. ಗ್ಲ್ಯಾಮರ್ ಲೋಕದಲ್ಲಿ ಗ್ಲ್ಯಾಮರಸ್ ಆಗಿ ಇದ್ದರೇನೆ ಚೆಂದ. ಹೀಗಾಗಿಯೇ ಮೃಣಾಲ್ ಆಗಾಗ ಮಾರ್ಡನ್ ಅವತಾರವೆತ್ತುತ್ತಾರೆ. ತುಂಡುಡುಗೆಯಲ್ಲಿ ಪ್ರತ್ಯಕ್ಷವಾಗ್ತಾರೆ. ತಮ್ಮ ನಲ್ಮೆಯ ಅಭಿಮಾನಿಗಳಿಗೆ ನಿರಾಸೆಯನ್ನ ಮಾಡ್ತಾರೆ. ಇದಕ್ಕೆ ಇತ್ತೀಚಿಗೆ ಇವರ ಫೋಟೋಗಳಿಗೆ ವ್ಯಕ್ತವಾದ ಅಭಿಪ್ರಾಯಗಳೇ ಸಾಕ್ಷಿ

Mrunal Thakur known for Seetha Ramam shared hot photos sparking fans requests for removal

ಹೌದು. ಮೃಣಾಲ್ ಠಾಕೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಎಲ್ಲವೂ ಇವರ ಸೌಂದರ್ಯವನ್ನ ವರ್ಣಿಸುವ ಚಿತ್ರಗಳೇ. ಆದರೂ ಕೂಡ ಅಭಿಮಾನಿಗಳಿಗೆ ಸಮಾಧಾನ ಇಲ್ಲ. ಯಾಕೆಂದರೆ ಬಹುತೇಕರ ತಲೆಯಲ್ಲಿ ಸೀತಾರಾಮಂ ಸಿನಿಮಾದಲ್ಲಿನ ಇವರ ಹಾವ-ಭಾವ-ವೇಷಭೂಷಣ ಹಚ್ಚೊತ್ತಿದೆ.

ಹೀಗಾಗಿಯೇ ದಯಮಾಡಿ ಈ ಫೋಟೋಗಳನ್ನ ಈಗ್ಲೇ ಡಿಲೀಟ್ ಮಾಡಿ ಎಂಬ ಮನವಿಯನ್ನ ಸದ್ಯಕ್ಕೆ ಇವರ ಅಭಿಮಾನಿ ಬಳಗ ಮಾಡುತ್ತಿದೆ. ಮೈ ಮುಚ್ಚುವ ಬಟ್ಟೆಗಳಲ್ಲಿ ನೀವು ಹೆಚ್ಚು ಸುಂದರವಾಗಿ ಕಾಣುತ್ತೀರಿ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದೆ.

Mrunal Thakur known for Seetha Ramam shared hot photos sparking fans requests for removal

ಕೆಲವರು ನೀವು ನನ್ನ ಸೆಲಿಬ್ರಿಟಿ ಕ್ರಶ್. ನಿಮ್ಮಿಂದ ಇಂತಹ ಪೋಟೋಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದರೆ, ನಮಗೆ ಸೀತಾರಾಮಂ ಚಿತ್ರದ ಸೀತೆ ಬೇಕು ಎಂದು ಧರಣಿಯನ್ನೂ ನಡೆಸುತ್ತಿದ್ದಾರೆ. ಮನಮೋಹಕ ಮೃಣಾಲ್ ಠಾಕೂರ್ ಮಾದಕತೆಯನ್ನ ಕಂಡು ಮುನಿಸಿಕೊಂಡಿದ್ದಾರೆ. ಮುನಿಸಿಕೊಂಡ ಈ ಅಭಿಮಾನಿಗಳಿಗೆ ರಾಘವ ಲಾರೆನ್ಸ್ ಬೇರೆ ಶಾಕ್ ನೀಡಿದ್ದಾರೆ.

ಹೌದು, ಬಾಲಿವುಡ್‌, ಟಾಲಿವುಡ್‌, ಮಾಲಿವುಡ್‌ನಲ್ಲಿ ಗೆಲುವು ಕಂಡ ಮೃಣಾಲ್, ಕಾಲಿವುಡ್‌ ನೆಲಕ್ಕೂ ಕಾಲಿಡಲಿದ್ದಾರೆ ಎಂಬ ಸುದ್ದಿ ಮೊನ್ನೆಯಿಂದ ಸದ್ದು ಮಾಡುತ್ತಿತ್ತು. ರಾಘವ ಲಾರೆನ್ಸ್ ಅವರ ಬ್ಲಾಕ್ ಬಸ್ಟರ್ ಫ್ರಾಂಚೈಸಿ ಕಾಂಚನಾ ಚಿತ್ರಕ್ಕೆ ಮೃಣಾಲ್ ಠಾಕೂರ್ ನಾಯಕಿ ಎಂಬ ಸುದ್ದಿ ಗುಲ್ಲಾಗಿತ್ತು. ಈ ಸುದ್ದಿ ಕೇಳಿ ಸಹಜವಾಗಿ ಮೂರು ಭಾಷೆಯಲ್ಲಿ ಮೃಣಾಲ್ ಮುಗುಳು ನಗೆಗೆ ಮನ ಸೋತ ಅಭಿಮಾನಿಗಳು ತಮಿಳಿನಲ್ಲಿಯೂ ತಮ್ಮ ನೆಚ್ಚಿನ ನಾಯಕಿಯನ್ನ ನೋಡಬಹುದು ಎಂದು ಖುಷಿಯಾಗಿದ್ದರು.

Mrunal Thakur known for Seetha Ramam shared hot photos sparking fans requests for removal

ಆದರೆ.. ಈ ಸುದ್ದಿಯನ್ನ ಈಗ ಖುದ್ದು ರಾಘವ ಲಾರೆನ್ಸ್ ತಳ್ಳಿ ಹಾಕಿದ್ದಾರೆ. ಕಾಂಚನಾ -04ರಲ್ಲಿ ಮೃಣಾಲ್ ಠಾಕೂರ್ ಆಕ್ಟ್ ಮಾಡ್ತಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು ಅಂದಿದ್ದಾರೆ. ಅಂತೆ-ಕಂತೆಯ ಸುದ್ದಿಗಳನ್ನೆಲ್ಲ ಯಾರು ನಂಬಬೇಡಿ ಸರಿಯಾದ ಸಮಯ ಬಂದಾಗ ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆಗೆ ನಾನೇ ಖುದ್ದು ಉತ್ತರವನ್ನ ಕೊಡ್ತೀನಿ ಎಂದಿದ್ದಾರೆ. ಈ ಮೂಲಕ ಮೃಣಾಲ್ ಠಾಕೂರ್ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ ರಾಘವ ಲಾರೆನ್ಸ್

More from Filmibeat

English summary
Mrunal Thakur, who rose to fame with 'Seetha Ramam', recently shared hot photos, prompting fans to ask for their removal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X