ಐಟಂ ಸಾಂಗ್‌ನಲ್ಲಿ ಮೃಣಾಲ್ ಠಾಕೂರ್; ಪಡ್ಡೆಹೈಕ್ಲಿಗೆ ಸಿಹಿಸುದ್ದಿ
ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಬೇಕೋ ಬೇಡ್ವೋ? ಸ್ಟಾರ್ ನಟಿಯರೇ ಬಿಂದಾಸ್ ಸಾಂಗ್‌ಗಳಿಗೆ ಕುಣಿಯೋದು ಸರೀನಾ? ಇದರಿಂದ ಮುಂದೆ ನಾಯಕಿಯಾಗಿ ಅವರಿಗೆ ಅವಕಾಶ ಕಮ್ಮಿ ಆಗುತ್ತಾ? ಹೀಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ. ಸಿನಿಮಾ ನಾಯಕಿಯೇ ಐಟಂ ಸಾಂಗ್‌ನಲ್ಲಿ ಕುಣಿದಿರುವುದು ಇದೆ. ಸ್ಟಾರ್ ನಟಿಯರೇ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕುವುದು ದಶಕಗಳಿಂದ ನಡೆದು ಬರ್ತಿದೆ.
ಕತ್ರೀನಾ ಕೈಫ್, ತಮನ್ನಾ, ಸಮಂತಾ, ನಯನತಾರಾ, ಕಾಜಲ್ ಅಗರ್‌ವಾಲ್ ಹೀಗೆ ಸ್ಟಾರ್ ನಟಿಯರೇ ಬಿಂದಾಸ್ ಸಾಂಗ್‌ಗಳಿಗೆ ಕುಣಿದಿದ್ದಾರೆ. ಒಮ್ಮೆ ಸ್ಪೆಷಲ್ ಸಾಂಗ್‌ನಲ್ಲಿ ಕುಣಿದುಬಿಟ್ಟರೆ ಪದೇ ಪದೆ ಇದೇ ರೀತಿಯ ಅವಕಾಶಗಳು ಬರಬಹುದು. ಅದಕ್ಕೆ ಬ್ರ್ಯಾಂಡ್ ಮಾಡಿಬಿಡಬಹುದು ಎನ್ನುವ ಆತಂಕ ಕೆಲವರಿಗೆ ಇರುತ್ತದೆ. ಕೆಲ ವರ್ಷಗಳ ಹಿಂದೆ ತಾವು ಐಟಂ ಸಾಂಗ್‌ನಲ್ಲಿ ಕುಣಿದಾಗ ಇದೇ ರೀತಿ ಹೆದರಿಸಿದ್ದರು ಎಂದು ನಯನತಾರಾ ನೆನಪಿಸಿಕೊಂಡಿದ್ದಾರೆ.

ಸದ್ಯ ಮರಾಠಿ ಚೆಲುವೆ ಮೃಣಾಲ್ ಠಾಕೂರ್ ಐಟಂ ಸಾಂಗ್‌ಗೆ ಕುಣಿಯುತ್ತಾರೆ ಎನ್ನಲಾಗ್ತಿದೆ. ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದ ಡ್ಯಾನ್ಸಿಂಗ್ ನಂಬರ್‌ಗೆ ಆಕೆ ಹೆಜ್ಜೆ ಹಾಕುವುದು ಬಹುತೇಕ ಖಚಿತ ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿದೆ. ಫೆಬ್ರವರಿ 30ರಂದು ಸಿನಿಮಾ ತೆರೆಗೆ ಬರಲಿದೆ. ಬುಚ್ಚಿಬಾಬು ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಶಿವರಾಜ್‌ಕುಮಾರ್ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಮರಾಠಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಮೃಣಾಲ್ ಬಳಿಕ ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದ್ದರು. 'ಸೀತಾರಾಮಂ' ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಬಳಿಕ ಭಾರೀ ಕ್ರೇಜ್ ಸಂಪಾದಿಸಿಕೊಂಡರು. ತಮ್ಮ ಮಾದಕ ಮೈಮಾಟದಿಂದಲೂ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಚೆಲುವೆ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕ್ತಾರೆ ಎನ್ನುವುದು ಅಭಿಮಾನಿಗಳಿಗೆ ಹಬ್ಬವೇ ಸರಿ.

'ಪೆದ್ದಿ' ಚಿತ್ರಕ್ಕೆ ಎ. ಆರ್ ರಹಮಾನ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಈಗಾಗಲೇ 2 ಹಾಡುಗಳು ರಿಲೀಸ್ ಆಗಿ ಧೂಳೆಬ್ಬಿಸಿದೆ. ಡ್ಯಾನ್ಸಿಂಗ್ ನಂಬರ್‌ಗಳಿಗೆ ರಹಮಾನ್ ಟ್ಯೂನ್ ಹಾಕುವುದರಲ್ಲಿ ನಿಸ್ಸೀಮರು. ಅಂಥದ್ದೇ ಸ್ಪೆಷಲ್ ನಂಬರ್ ಡಿಸೈನ್ ಮಾಡ್ತಿದ್ದು ಮೃಣಾಲ್ ಡ್ಯಾನ್ಸ್ ಮಾಡ್ತಾರೆ ಎನ್ನುವ ಸುದ್ದಿ ಭಾರೀ ವೈರಲ್ ಆಗ್ತಿದೆ. ಮೈತ್ರಿ ಮೂವಿಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 28ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಒಂದು ತಿಂಗಳು ರಿಲೀಸ್ ಡೇಟ್ ಮುಂದೂಡಲಾಗಿದೆ.
80-90ರ ದಶಕದ ಕಥೆಯನ್ನು ಬುಚ್ಚಿಬಾಬು ಈ ಚಿತ್ರದಲ್ಲಿ ಹೇಳುತ್ತಿದ್ದಾರೆ. ರಗಡ್ ಹಳ್ಳಿಹೈದನ ಪಾತ್ರದಲ್ಲಿ ರಾಮ್‌ಚರಣ್ ನಟಿಸಿದ್ದಾರೆ. ಹಳ್ಳಿಯ ಕ್ರಿಕೆಟ್ ಆಟಗಾರರನಾಗಿ ಮಿಂಚಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ದಿವ್ಯೇಂದು, ಜಗಪತಿ ಬಾಬು, ಬೊಮಾನ್ ಇರಾನಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. 200 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಸತತ ಸೋಲುಗಳಿಂದ ಕಂಗೆಟ್ಟ ರಾಮ್‌ಚರಣ್ 'ಪೆದ್ದಿ' ಆಗಿ ಗೆಲ್ಲಲು ತಯಾರಿ ನಡೆಸಿದ್ದಾರೆ.
'ಪೆದ್ದಿ' ಸಿನಿಮಾ ರಿಲೀಸ್ ತಡವಾಗಿ ಬಜೆಟ್ ಹೆಚ್ಚುತ್ತಿದೆ ಎಂದು ಚರ್ಚೆ ನಡೀತಿದೆ. ಮೃಣಾಲ್ ಠಾಕೂರ್ ಜೊತೆ ಸ್ಪೆಷಲ್ ಸಾಂಗ್ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಹೈ ಜವಾನಿ ತೋ ಇಷ್ಕ್ ಹೋನಾ ಹಾ', 'ಪೂಜಾ ಮೇರಿ ಜಾನ್' ಹಾಗೂ ಅಲ್ಲು ಅರ್ಜುನ್, ಅಟ್ಲಿ ಜೋಡಿ ಸಿನಿಮಾದಲ್ಲಿ ಮೃಣಾಲ್ ನಟಿಸುತ್ತಿದ್ದಾರೆ. ಆಕೆ ನಟಿಸಿರುವ 'ಡಕಾಯಿತ್: ಎ ಲವ್ ಸ್ಟೋರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











