ಮುತ್ತು ಕೊಡಲ್ಲ, ಬೆಡ್‌ರೂಮ್‌ನಲ್ಲಿ ಮಲಗಲ್ಲ ; ಷರತ್ತು ಹಾಕಿ ಅವಕಾಶ ಕಳೆದುಕೊಂಡ ಮೃಣಾಲ್..!
ಚಿತ್ರರಂಗದಲ್ಲಿ ಉಳಿಬೇಕು, ಬೆಳಿಬೇಕು ಅಂದರೆ.. ಗ್ಲ್ಯಾಮರಸ್ ಪಾತ್ರಕ್ಕೆ ಜೈ ಅನ್ನಬೇಕು. ಚಿತ್ರತಂಡ ಹೇಳಿದ್ದಕ್ಕೆಲ್ಲ ಸೈ ಅನ್ನಬೇಕು ಅನ್ನುವ ಮಾತು ಇದೆ. ಈ ಮಾತು-ಕಥೆ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಮೃಣಾಲ್ ಠಾಕೂರ್ ಮಾತ್ರ ಅವಕಾಶದ ಏಣಿಯನ್ನೇರಲು ನಾನು ನನ್ನತನ ಬಿಟ್ಟು ಕೊಡಲಾರೆ ಅಂದಿದ್ದಾರೆ. ಬೇರೆಯವರು ಹೇಳಿದಂತೆ ಕುಣಿಯಲಾರೆ ಅಂದಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ಮೃಣಾಲ್, ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ನಟಿಸುವ ಮುನ್ನವೇ ನಾನು ಫ್ಯಾಮಿಲಿ ಸ್ಟಾರ್ ಎಂದಿದ್ದಾರೆ. ನನ್ನ ಹೆತ್ತವರನ್ನ ನಾನು ಮುಜುಗರಕ್ಕೊಳಪಡಿಸಲ್ಲ ಅಂದಿದ್ದಾರೆ. ಇನ್ನೂ ನಿಮಗೆ ಗೊತ್ತಿರುವಂತೆ ಇದು 5G ಕಾಲ. ಈ ಕಾಲದಲ್ಲಿ ಚಿತ್ರದ ಕಥೆ ಬೇಡಲಿ, ಬಿಡಲಿ.. ಅನೇಕರು ತಮ್ಮ ಚಿತ್ರದ ಕಥೆಯಲ್ಲಿ ಹತ್ತಾರು ಪ್ರಣಯದ ದೃಶ್ಯಗಳನ್ನ ಪೋಣಿಸುತ್ತಾರೆ. ಬೇಕು ಬೇಕೆಂದೇ ಲಿಪ್ ಲಾಪ್ ದೃಶ್ಯಗಳನ್ನೂ ಕೂಡ ಸೇರಿಸುತ್ತಾರೆ. ಮೃಣಾಲ್ ಠಾಕೂರ್ ಮೊದಲಿಂದ ಈ ಸಂಪ್ರಾಯದ ವಿರೋಧಿ. ಹೀಗಾಗಿಯೇ ಅದೆಷ್ಟೋ ಅವಕಾಶಗಳು ಮೃಣಾಲ್ ಅವರ ಕೈಯಿಂದ ತಪ್ಪಿವೆ. ಖುದ್ದು ಮೃಣಾಲ್ ಠಾಕೂರ್ ಈ ಮಾತನ್ನ ಹೇಳಿದ್ದಾರೆ.

ಆದರೆ.. ಎಷ್ಟು ದಿನ ಹಸಿ ಬಿಸಿ ದೃಶ್ಯದಲ್ಲಿ ನಟಿಸಲ್ಲ ಎಂದು ಹೇಳಲು ಸಾಧ್ಯ. ಅದರಲ್ಲಿಯೂ ಒಳ್ಳೊಳ್ಳೆ ಸಿನಿಮಾ ಬಂದಾಗ, ಒಳ್ಳೊಳ್ಳೆ ಅವಕಾಶ ಇದ್ದಾಗ, ಮೃಣಾಲ್ ಗೆ ನೋ ಎಂದು ಹೇಳಲು ಆ ನಂತರ ಕಷ್ಟವಾಗತೊಡಗಿತ್ತು. ಈ ಕಾರಣಕ್ಕೆ ತಮ್ಮ ಪೋಷಕರಿಗೆ ಈ ವಿಚಾರವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಮೃಣಾಲ್ ಹಾಗೂ ಹೀಗೂ ಅಂಥ ದೃಶ್ಯ ಅಗತ್ಯವಿದೆ ಎಂದಾದರೆ ಅದನ್ನು ಮಾಡುವುದು ಅನಿವಾರ್ಯ ಎಂದು ತಮ್ಮ ಹೆತ್ತವರಿಗೆ ಅರ್ಥ ಮಾಡಿಸುವಲ್ಲಿ ಯಶಸ್ವಿಯೂ ಆದರು
ಹಾಗಂಥ ಮನೆಯಲ್ಲಿ ಒಪ್ಪಿದ್ದಾರೆ ಎಂದ ಮಾತ್ರಕ್ಕೆ, ಮೃಣಾಲ್ ಇಲ್ಲಿಯವರೆಗೆ ಗಡಿಯನ್ನ ದಾಟಿಲ್ಲ. ಅನಗತ್ಯವಾಗಿ ದೇಹ ಪ್ರದರ್ಶನವನ್ನೂ ಮಾಡಿಲ್ಲ. ಇಂಥ ಮೃಣಾಲ್ ಮೃಣಾಲ್ ಠಾಕೂರ್ ಅವರು ಮೊದಲು ನಟಿಸಿದ್ದು ಮರಾಠಿ ಚಿತ್ರದಲ್ಲಿ.

ಮರಾಠಿ ನಂತರ 'ಸೂಪರ್ 30' ಚಿತ್ರದ ಮೂಲಕ ಬಾಲಿವುಡ್ ಗೆ ಬಂದ ಮೃಣಾಲ್ ಆ ನಂತರ ಸೀತಾ ರಾಮಂ ಚಿತ್ರದಲ್ಲಿ ಅಭಿನಯಿಸಿದ್ದೇ ತಡ, ದೇಶವ್ಯಾಪಿ ಕೀರ್ತಿಯನ್ನ ಗಳಿಸಿದರು. ಇನ್ನೂ ಮೃಣಾಲ್‌ಗೆ ಮರ ಸುತ್ತುವ ಪಾತ್ರ ಅಂದರೆ ಮೊದಲಿಂದ ವಾಕರಿಕೆ. ಹಿಂದಿ ಚಿತ್ರರಂಗದಿಂದ ಮೃಣಾಲ್ ಠಾಕೂರ್ ಅಂತರವನ್ನ ಕಾಪಾಡಿಕೊಳ್ಳಲು ಇದು ಕೂಡ ಒಂದು ಕಾರಣ. ಇನ್ನೂ ದಿ ಫ್ಯಾಮಿಲಿ ಸ್ಟಾರ್ ಮೃಣಾಲ್ ಅಭಿನಯದ ಇತ್ತೀಚಿನ ಚಿತ್ರ. ಆದರೆ ದುರಾದೃಷ್ಟ.. ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಂಡಿದ್ದ ಮೃಣಾಲ್ ಗೆ ಇಲ್ಲಿ ಗೆಲುವು ಸಿಗಲಿಲ್ಲ.
ಒಟ್ನಲ್ಲಿ ಚಿತ್ರರಂಗದಲ್ಲಿ ನೆಲೆಯೂರಬೇಕು ಅಂದರೆ, ಬೆಳೆಯಬೇಕು ಅಂದರೆ..ಕೇವಲ ಗ್ಲ್ಯಾಮರ್ ಅಷ್ಟೇ ಅಲ್ಲ, ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಅನ್ನುವುದನ್ನ ಬಲವಾಗಿ ನಂಬುವ ಮೃಣಾಲ್, ಸದ್ಯಕ್ಕೆ.. ಆರಂಭದಲ್ಲಿ ಹೇಗೆ ಅವಕಾಶಗಳು ಕೈ ತಪ್ಪಿದ್ದವು ಅನ್ನುವುದನ್ನ ಹೇಳಿದ್ದಾರೆ. ಮನೆಯವರ ಮನವೊಲಿಸಿ ಸದ್ಯಕ್ಕೆ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ ಎಂದು ಕೂಡ ಮೃಣಾಲ್ ಹೇಳಿದ್ದಾರೆ. ಮೃಣಾಲ್ ಅವರ ಈ ಮನದ ಮಾತುಗಳ ಬಗ್ಗೆ ಸದ್ಯಕ್ಕೆ ವ್ಯಾಪಕ ಚರ್ಚೆ ನಡೆಯುತ್ತಿದೆ.


Click it and Unblock the Notifications











