ರಾಮ್ ಚರಣ್ ಮಗುವಿಗೆ 1 ಕೋಟಿ ಬೆಲೆಯ ಚಿನ್ನದ ತೊಟ್ಟಿಲು ಕೊಟ್ಟ ಅಂಬಾನಿ; ಇದೆಷ್ಟು ನಿಜ?

ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅವರ ಮನೆಯಲ್ಲೀಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಚಿರಂಜೀವಿ ಪುತ್ರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಸೊಸೆ ಉಪಾಸನಾ ಕೊನಿಡೆಲಾ ಮುದ್ದಾದ ಹೆಣ್ಣು ಮಗುವಿಗೆ ತಂದೆ - ತಾಯಿಗಳಾಗಿದ್ದಾರೆ.

ಇತ್ತೀಚೆಗಷ್ಟೆ ಹೆಣ್ಣು ಮಗು ಜನಿಸಿತು ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದ ಮೆಗಾ ಫ್ಯಾಮಿಲಿ ಇಂದು ( ಜೂನ್ 30 ) ಆ ಮಗುವಿಗೆ ನಾಮಕರಣ ಮಾಡುವ ಕಾರ್ಯಕ್ರಮವನ್ನು ಹಂಚಿಕೊಂಡಿತ್ತು. ಅಂದಹಾಗೆ ಮಗುವಿಗೆ ಕ್ಲಿನ್ ಕಾರಾ ಕೊನಿಡೆಲಾ ಎಂಬ ಹೆಸರನ್ನು ಇಡಲಾಗಿದ್ದು, ಮೆಗಾ ಫ್ಯಾಮಿಲಿ ಸಾಮಾಜಿಕ ಜಾಲತಾಣದ ಮೂಲಕ ಈ ಹೆಸರನ್ನು ಇಟ್ಟಿರುವುದಾಗಿ ಮಾಹಿತಿ ನೀಡಿತ್ತು.

Mukhesh Ambani didnot gifted anything to Ramcharan daughter says report

ಈ ನಾಮಕರಣ ಸಂಭ್ರಮದಲ್ಲಿರುವಾಗಲೇ ಮೆಗಾ ಫ್ಯಾಲಿಮಿಗೆ ಮುಖೇಶ್ ಅಂಬಾನಿ ದುಬಾರಿ ಬೆಲೆಯ ಗಿಫ್ಟ್ ಒಂದನ್ನು ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಹೌದು, ರಾಮ್ ಚರಣ್ ಪುತ್ರಿ ಕ್ಲಿನ್ ಕಾರಾ ಕೊನಿಡೆಲಾಗೆ ಮುಖೇಶ್ ಅಂಬಾನಿ ಒಂದು ಕೋಟಿ ಬೆಲೆಯ ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣದ ತುಂಬಾ ಹರಿದಾಡಿದೆ.

ಆದರೆ ಬಲ್ಲ ಮೂಲಗಳ ಪ್ರಕಾರ ಮುಖೇಶ್ ಅಂಬಾನಿ ಮೆಗಾ ಫ್ಯಾಮಿಲಿಗೆ ಚಿನ್ನದ ತೊಟ್ಟಿಲ ಉಡುಗೊರೆಯನ್ನು ನೀಡಿಲ್ಲ ಎನ್ನಲಾಗಿದೆ. ಏಕೆಂದರೆ ಈ ಕುರಿತಾಗಿ ಚಿರಂಜೀವಿ ಕುಟುಂಬದವರಾಗಲಿ ಅಥವಾ ಮುಖೇಶ್ ಅಂಬಾನಿ ಕುಟುಂಬವಾಗಲಿ ಎಲ್ಲಿಯೂ ಬಾಯಿಬಿಟ್ಟು ಮಾತನಾಡಿಲ್ಲ ಹಾಗೂ ಕಾರ್ಯಕ್ರಮಕ್ಕೂ ಸಹ ಬಂದಿಲ್ಲ.

ಹೀಗಾಗಿ ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ತಪ್ಪು ಮಾಹಿತಿ ಈ ರೀತಿಯ ಸುದ್ದಿ ವೈರಲ್ ಆಗಲು ಕಾರಣವಾಗಿದೆ ಎನ್ನಬಹುದಾಗಿದೆ. ಸದ್ಯ ರಾಮ್ ಚರಣ್ ಪುತ್ರಿಗೆ ಇಟ್ಟಿರುವ ಕ್ಲಿನ್ ಕಾರಾ ಕೊನಿಡೆಲಾ ಎಂಬ ಹೆಸರಿನ ಬಗ್ಗೆ ಆಂಧ್ರ-ತೆಲಂಗಾಣದಲ್ಲಿ ಚರ್ಚೆಯಾಗುತ್ತಿದೆ. ರಾಮ್ ಚರಣ್ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಷ್ಟೇ ಅಲ್ಲದೆ, ಆ ಹೆಸರಿನ ಅರ್ಥವೇನು? ಅನ್ನೋದನ್ನು ತಿಳಿಸಲಾಗಿದೆ.

ರಾಮ್ ಚರಣ್ ಹಾಗೂ ಉಪಾಸನಾ ಮಗಳ ಹೆಸರು ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಅಂತ ಅನಿಸಿದೆ. ಈ ಹೆಸರಿನ ಅರ್ಥವನ್ನು ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ರಾಮ್ ಚರಣ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ವಿಡಿಯೋದಲ್ಲೇ ಮಗಳ ಹೆಸರಿನ ಅರ್ಥವನ್ನು ಹಾಗೂ ಎಲ್ಲಿಂದ ತೆಗೆದುಕೊಂಡಿರುವುದಾಗಿಯೂ ಹೇಳಿದ್ದಾರೆ. "ಈ ಹೆಸರನ್ನು ಲಲಿತ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ. ಈ ಹೆಸರು ಆಧ್ಯಾತ್ಮವನ್ನು ಜಾಗೃತಗೊಳಿಸಲು ಬೇಕಾಗುವ ಪರಿಶುದ್ಧ ಶಕ್ತಿ ಹಾಗೂ ಪರಿವರ್ತನೆಯ ಸಂಕೇತ" ಎಂದು ಹೇಳಲಾಗಿದೆ. ಬ್ರಹ್ಮ ಪುರಾಣದಲ್ಲಿ ಸಾವಿರಕ್ಕೂ ಅಧಿಕ ಹೆಸರುಗಳನ್ನು ದೇವತೆ ಲಲಿತಾ ದೇವಿ ಪಟ್ಟಿದ್ದು ಮಾಡಿದ್ದಾರೆ ಎಂದು ನಂಬಲಾಗಿದೆ.

More from Filmibeat

English summary
Mukhesh Ambani didnot gifted any gift to Ramcharan daughter says report. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X