ಟ್ರೋಲ್‌ಗೆಲ್ಲ ನಾನು ಕ್ಯಾರೇ ಅನ್ನಲ್ಲ ಎಂದ ಮುಂಗಾರು ಮಳೆ 02 ಚೆಲುವೆ ನೇಹಾ ಶೆಟ್ಟಿ ..!
ನೇಹಾ ಶೆಟ್ಟಿ ನಿಮಗೆ ನೆನಪಿರಬೇಕು. ಮುಂಗಾರು ಮಳೆ 02 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ಇವರು. ಆದರೆ.. ದುರಾದೃಷ್ಟ ಪೂಜಾ ಗಾಂಧಿ ಚಟುವಟಿಕೆಗಳನ್ನ ಚುರುಕಾಗಿಸಿದ್ದ ಮಳೆ ನೇಹಾಗೆ ಕೈ ಕೊಡ್ತು. ಈ ಕಾರಣಕ್ಕೆ ಕನ್ನಡ ಚಿತ್ರರಂಗದಲ್ಲಿ ಸಿಗಬೇಕಿದ್ದ ಫಸಲು ಕೈ ತಪ್ಪಿತು. ಹೀಗಾಗಿಯೇ ಆಂಧ್ರ ಪ್ರದೇಶಕ್ಕೆ ತೆರಳಿ ಸದ್ಯಕ್ಕೆ ಅಲ್ಲಿಯೇ ಬಿಡಾರವನ್ನ ಹೂಡಿರುವ ನೇಹಾ ಶೆಟ್ಟಿ ಮೊನ್ನೆ ಕಾಲೆಳೆಯುವರ ಬಗ್ಗೆ ಮಾತನಾಡಿದ್ಧಾರೆ. ಅವರಿಗೆಲ್ಲ ನಾನು ಕ್ಯಾರೇ ಅನ್ನಲ್ಲ ಎಂದಿದ್ದಾರೆ.
ಹೌದು, ಅಸಲಿಗೆ .. ನೇಹಾ ಶೆಟ್ಟಿ ಅಭಿನಯದ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಲಿದೆ. ವಿಶ್ವಕ್ ಸೇನ್ ನಾಯಕನಾಗಿರುವ ಈ ಚಿತ್ರದಲ್ಲಿ ಅಂಜಲಿ ಮತ್ತು ನೇಹಾ ಶೆಟ್ಟಿ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ತಮ್ಮ ಈ ಚಿತ್ರದ ಪ್ರಚಾರದ ಸಮಯದಲ್ಲಿ ಸಾಮಾಜಿಕ ಜಾಲತಾಣದ ಸದ್ಭಳಕೆ-ದುರ್ಬಳಕೆಯ ಬಗ್ಗೆ ಮಾತನಾಡಿದ್ದಾರೆ. ಟ್ರೋಲಿಗರ ಬಗ್ಗೆ ತಮಗಿರುವ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ

ನಾನು ನನ್ನ ಬಗ್ಗೆ ಪ್ರಕಟವಾದ ಸುದ್ದಿಗಳನ್ನ ಓದುವುದು ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಏನಾದರೂ ಬಂದಿದೆಯಾ ಎಂದು ಹುಡುಕಲು ಕೂಡ ಹೋಗುವುದಿಲ್ಲ. ಯಾಕೆಂದರೆ.. ಲೋಕೋ ಭಿನ್ನ ರುಚಿ. ಎಲ್ಲರಿಗೂ ಅವರ ಅವ್ರದ್ದೇ ಆದ ಅಭಿಪ್ರಾಯಗಳಿರುತ್ತವೆ ಎಂದಿರುವ ನೇಹಾ ಶೆಟ್ಟಿ, ಸಾಮಾಜಿಕ ಜಾಲತಾಣದಲ್ಲಿ ಕೇವಲ ಧನಾತ್ಮಕ ವಿಚಾರ ಮಾತ್ರ ಇರಲ್ಲ. ಋಣಾತ್ಮಕ ವಿಚಾರ ಕೂಡ ಇರುತ್ತೆ ಎಂದಿದ್ದಾರೆ.
ಇನ್ನೂ.. ಇದು ಟ್ರೋಲ್ ಕಾಲ. ನಾವು ನಮ್ಮ ಸುದ್ದಿಯನ್ನ ಹುಡುಕುವಾಗ ನಮ್ಮದೇ ಟ್ರೋಲ್ ನಮ್ಮ ಕಣ್ಣಿಗೆ ಬೀಳಬಹುದು ಆ ಟ್ರೋಲ್ ಅಥವಾ ಸುದ್ದಿ ನಮ್ಮ ಮನಸಿನ ಮೇಲೆ ಗಾಡವಾದ ಪರಿಣಾಮ ಬೀರಬಹುದು ಈ ಕಾರಣಕ್ಕೆ ನಾನು ಟ್ರೋಲ್ ಮತ್ತು ಮೀಮ್‌ಗಳಿಂದ ಅಂತರವನ್ನ ಕಾಪಾಡಿಕೊಳ್ಳುತ್ತೇನೆ ಎಂದಿರುವ ನೇಹಾ ಶೆಟ್ಟಿ, ಬೇರೆಯವರ ಅಭಿಪ್ರಾಯಗಳು ನನ್ನ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರಲು ನಾನು ಬಿಡುವುದಿಲ್ಲ ಎಂದು ಕೂಡ ಹೇಳಿದ್ದಾರೆ.

ನೇಹಾ ಶೆಟ್ಟಿಯ ಈ ಮನದ ಮಾತು ಪಕ್ಕದ ಆಂಧ್ರದಲ್ಲಿರುವ ಟ್ರೋಲಿಗರ ನಡುವೆ ಈಗ ಚರ್ಚೆಯನ್ನ ಹುಟ್ಟು ಹಾಕಿದೆ. ಉಳಿದಂತೆ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾ ಹೊರತು ಪಡಿಸಿದರೆ ನೇಹಾ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ. ಈ ಕಾರಣಕ್ಕೆ.. ಗ್ಯಾಂಗ್ಸ್ ಆಫ್ ಗೋದಾವರಿ ನೇಹಾ ಶೆಟ್ಟಿ ಪಾಲಿಗೆ ತುಂಬಾನೇ ಮಹತ್ವವಾದದ್ದು. ಚೂರು ಆಚೀಚೆ ಆದರೂ ನೇಹಾ ಶೆಟ್ಟಿ ಮುಂದಿನ ಭವಿಷ್ಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡುವುದು ಖಚಿತ ಅನ್ನುವ ಅಭಿಪ್ರಾಯ ಸದ್ಯಕ್ಕೆ ವ್ಯಕ್ತವಾಗುತ್ತಿದೆ.
ಅಂದಹಾಗೇ ಕಳೆದ ವರ್ಷ ಇದೇ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಹಾಡೊಂದರ ಬಿಡುಗಡೆ ಸಮಯದಲ್ಲಿ ಅಲ್ಲಿ ನೆರೆದ ತೆಲುಗು ಮಾಧ್ಯಮದವರ ಮುಂದೆ ಚಿತ್ರದ ನಾಯಕ ವಿಶ್ವಕ್ ಸೇನ್ ಜೊತೆ ಸೀರೆಯ ಸೆರಗು ಬಿಚ್ಚಿ ಕುಣಿದಿದ್ದರು.
ಆ ಕಾಲಕ್ಕೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತೆಲುಗು ಸಿನಿಪ್ರಿಯರ ಆಕ್ರೋಶಕ್ಕೂ ಈ ನೇಹಾ ಶೆಟ್ಟಿಯ ಈ ಹೆಜ್ಜೆ ಕಾರಣವಾಗಿತ್ತು. ಚಿತ್ರದ ಪಬ್ಲಿಸಿಟಿಗೆ ಇಷ್ಟೆಲ್ಲ ಮಾಡುವ ಅವಶ್ಯಕತೆ ಇದೆಯಾ ಅನ್ನುವ ಪ್ರಶ್ನೆಯೂ ಎದ್ದಿತ್ತು. ಇನ್ನೂ ಅವತ್ತು ಈ ವಿಡಿಯೋವನ್ನ ಹಂಚಿಕೊಂಡು ಇವರನ್ನ ಟ್ರೋಲ್ ಮಾಡಿದವರು ಒಬ್ಬಿಬ್ಬರಲ್ಲ.


Click it and Unblock the Notifications











